ಪೆರ್ಲ: ಇತ್ತೀಚೆಗೆ ನಡೆದ ಮಂಜೇಶ್ವರ ತಾಲೂಕು ಮಟ್ಟದ ಅದಾಲತ್ ನಲ್ಲಿ ಎಂಡೋಸಲ್ಫಾನ್ ಪೀಡಿತ ಎಣ್ಮಕಜೆ ಪಂಚಾಯತಿಯ ಜುನೈದ್ ಅವರು ಕುಡಿಯುವ ನೀರಿನ ಸಮಸ್ಯೆಯೊಂದಿಗೆ ಸಚಿವ ಅಹ್ಮದ್ ದೇವರಕೋವಿಲ್ ಮುಂದೆ ಮನವಿ ನೀಡಿದರು. ದೂರನ್ನು ಕೂಲಂಕಷವಾಗಿ ಪರಿಶೀಲಿಸಿದ ಸಚಿವರು, ಎಂಜಿಎನ್‍ಆರ್‍ಇಜಿಎಸ್ ಯೋಜನೆಯಡಿ 15 ದಿನದೊಳಗೆ ಹೊಸ ಬಾವಿ ನಿರ್ಮಿಸುವಂತೆ ಪಂಚಾಯಿತಿ ಕಾರ್ಯದರ್ಶಿಗೆ ಸೂಚಿಸಿದರು. ಅದಾಲತ್ ನಲ್ಲಿ ಬಹುಕಾಲದಿಂದ ಅನುಭವಿಸುತ್ತಿರುವ ಕುಡಿಯುವ ನೀರಿನ ಸಮಸ್ಯೆ ಶಾಶ್ವತ ಪರಿಹಾರಗೊಂಡ ಸಂತಸದಲ್ಲಿ ಜುನೈದ್ ನಿರ್ಗಮಿಸಿದರು.