HEALTH TIPS

'ದಿ ಕೇರಳ ಸ್ಟೋರಿ' ಚಿತ್ರಕ್ಕೆ ಪಶ್ಚಿಮ ಬಂಗಾಳದಲ್ಲಿ ನಿಷೇಧ: ಮಮತಾ ಘೋಷಣೆ

               ಕೋಲ್ಕತ್ತ: 'ದಿ ಕೇರಳ ಸ್ಟೋರಿ' ಸಿನಿಮಾ ಪ್ರದರ್ಶನವನ್ನು ಪಶ್ಚಿಮ ಬಂಗಾಳದಲ್ಲಿ ನಿಷೇಧಿಸಿರುವುದಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸೋಮವಾರ ಘೋಷಿಸಿದ್ದಾರೆ.

          ಚಿತ್ರದ ಸುತ್ತಲ ವಿವಾದಗಳ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಂಡಿರುವುದಾಗಿ ಅವರು ತಿಳಿಸಿದ್ದಾರೆ.

'ದ್ವೇಷ ಮತ್ತು ಹಿಂಸಾಚಾರದಂಥ ಘಟನೆಗಳನ್ನು ತಡೆಯಲು ಮತ್ತು ರಾಜ್ಯದಲ್ಲಿ ಶಾಂತಿಯನ್ನು ಕಾಪಾಡಲು ಮುನ್ನೆಚ್ಚರಿಕಾ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ' ಎಂದು ಮಮತಾ ಹೇಳಿದ್ದಾರೆ.

ಕೇರಳದ 32,000 ಮಹಿಳೆಯರನ್ನು ಇಸ್ಲಾಂಗೆ ಮತಾಂತರಿಸಲಾಗಿದೆ ಮತ್ತು ಭಯೋತ್ಪಾದನಾ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗಿದೆ ಎಂದು ಚಿತ್ರದಲ್ಲಿ ಬಿಂಬಿಸಿರುವ ಕಾರಣದಿಂದ ವಿವಾದ ಭುಗಿಲೆದ್ದಿದೆ.

                ಜೆ.ಪಿ.ನಡ್ಡಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಬಾಂಬ್, ಬಂದೂಕು, ಪಿಸ್ತೂಲ್ ಆತಂಕವಾದದ ಜೊತೆಗೂಡಿವೆ. ಇನ್ನೊಂದು ಪ್ರಮುಖ ರೀತಿಯ ನೂತನ ಭಯಾನಕ ಭಯೋತ್ಪಾದನೆಯ ವ್ಯವಸ್ಥೆಯನ್ನು 'ದಿ ಕೇರಳ ಸ್ಟೋರಿ' ಅನಾವರಣಗೊಳಿಸಿದೆ.
           ತಮಿಳುನಾಡಿನಲ್ಲಿ ಪ್ರದರ್ಶನ ಸ್ಥಗಿತ

           ಸಿನಿಮಾದ ಪ್ರದರ್ಶನವನ್ನು ತಮಿಳುನಾಡಿನಲ್ಲಿ ಭಾನುವಾರದಿಂದ ಸ್ಥಗಿತಗೊಳಿಸಲಾಗಿದೆ. ನೀರಸ ಪ್ರತಿಕ್ರಿಯೆ, ಪ್ರತಿಭಟನೆ ಮುಂತಾದ ಕಾರಣಗಳು ಸಿನಿಮಾ ಪ್ರದರ್ಶನ ಸ್ಥಗಿತಗೊಳಿಸಲು ಕಾರಣವಾಗಿದೆ ಎಂದು ತಿಳಿದುಬಂದಿದೆ.

                 ಭಾಷಣದಲ್ಲಿ ಚಿತ್ರವನ್ನು ಪ್ರಸ್ತಾಪಿಸಿದ್ದ ಮೋದಿ

               ಬಳ್ಳಾರಿಯಲ್ಲಿ ಕಳೆದ ವಾರ ಪ್ರಚಾರ ನಡೆಸುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ವಿವಾದ ಸೃಷ್ಟಿಸಿರುವ 'ದಿ ಕೇರಳ ಸ್ಟೋರಿ' ಸಿನಿಮಾವನ್ನು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದರು. 'ಕೇರಳದಲ್ಲಿ ಭಯೋತ್ಪಾದಕರು ರೂಪಿಸಿದ ಷಡ್ಯಂತ್ರದ ಕಥೆಯನ್ನು 'ದಿ ಕೇರಳ ಸ್ಟೋರಿ' ಚಿತ್ರ ಆಧರಿಸಿದ್ದು, ಭಯೋತ್ಪಾದಕರ ಮುಖವಾಡವನ್ನು ಕಳಚಿಹಾಕಿದೆ' ಎಂದು ಮೋದಿ ವಿಶ್ಲೇಷಿಸಿದ್ದರು.

                              ಮಧ್ಯಪ್ರದೇಶದಲ್ಲಿ ಬೆಂಬಲ: ಚಿತ್ರಕ್ಕೆ ತೆರಿಗೆ ವಿನಾಯ್ತಿ

                'ದಿ ಕೇರಳ ಸ್ಟೋರಿ' ಸಿನಿಮಾಗೆ ಮಧ್ಯಪ್ರದೇಶದಲ್ಲಿ ತೆರಿಗೆ ವಿನಾಯಿತಿ ನೀಡುವುದಾಗಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಕಳೆದ ಶನಿವಾರ ಘೋಷಿಸಿದ್ದರು.

ಕರ್ನಾಟಕದಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, 'ಸಿನಿಮಾವು ಭಯೋತ್ಪಾದಕರ ಮುಖವಾಡವನ್ನು ಕಳಚಿಹಾಕಿದೆ' ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಚೌಹಾಣ್ ಈ ನಿರ್ಧಾರ ಪ್ರಕಟಿಸಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries