ಬದಿಯಡ್ಕ: ನೀರ್ಚಾಲು ಬೇಳ ಗ್ರಾಮದ ದಯಾನಂದ ಅವರು ವರ್ಷಗಳಿಂದ ಕಾದುನೋಡುತ್ತಿರುವ ನಿವೇಶನ ಹಂಚಿಕೆ ಪತ್ರ(ಪಟ್ಟೆ) ಶೀಘ್ರ ಲಭಿಸಲಿದೆ ಎಂದು ರಾಜ್ಯ ಬಂದರು, ಪುರಾತತ್ವ, ವಸ್ತು ಸಂಗ್ರಹಾಲಯ ಇಲಾಖೆ ಸಚಿವ ಅಹ್ಮದ್ ದೇವರಕೋವಿಲ್ ಭರವಸೆ ನೀಡಿದ್ದಾರೆ.
ಶನಿವಾರ ಕಾಸರಗೋಡಲ್ಲಿ ನಡೆದ ಸಚಿವರ ಅದಾಲತ್ ವೇದಿಕೆಯಿಂದಲೇ ಸಚಿವ ದಯಾನಂದ ಅವರಿಗೆ ಭರವಸೆ ಪ್ರಮಾಣ ಪತ್ರ ವಿತರಿಸಿದರು. ದಯಾನಂದ ಅವರಿಗೆ 2019ರಲ್ಲಿ ನಿವೇಶನ ಪರವಾನಗಿ ಸಿಗಲಿದೆ ಎಂದು ಘೋಷಣೆ ಮಾಡಲಾಗಿತ್ತಾದರೂ ತಾಂತ್ರಿಕ ಕಾರಣಗಳಿಂದ ಅದು ಈ ವರೆಗೆ ಲಭಿಸಿರಲಿಲ್ಲ. ಬಳಿಕ 2023ರಲ್ಲಿ ಮುಖ್ಯಮಂತ್ರಿಗೆ ನೀಡಿದ ಮನವಿಯಲ್ಲಿ ಕೈತಾಂಗ್ ಅದಾಲಮ್ ನಲ್ಲಿ ದೂರು ದಾಖಲಿಸುವಂತೆ ಸೂಚನೆ ಬಂದಿತ್ತು. ದಯಾನಂದ ಅದಾಲಮ್ ನಲ್ಲಿ ಮನವಿ ನೀಡಿ ಮರಳಿದ್ದರು. ಇದೀಗ ಭರವಸೆ ಪ್ರಮಾಣಪತ್ರ ಸಚಿವರು ನೀಡಿದ್ದು, ಸಂತಸಗೊಂಡಿರುವುದಾಗಿ ದಯಾನಂದ ತೃಪ್ತಿವ್ಯಕ್ತಪಡಿಸಿದ್ದಾರೆ.