ಉಪ್ಪಳ: ಕಾಸರಗೋಡು ಚೌಕಿಯ ಕಾವುಗೋಳಿ ಶ್ರೀಶಿವಕ್ಷೇತ್ರದಲ್ಲಿ ಇತ್ತೀಚೆಗೆ ನಡೆದ ಬ್ರಹ್ಮಕಲಶೋತ್ಸವ ಸಂದರ್ಭ ಮಜಿಬೈಲು ಶ್ರೀವಿಷ್ಣು ಯಕ್ಷ ಬಳಗದ ಮಕ್ಕಳ ತಂಡದಿಂದ ತಾರಕಾಸುರ ವಧೆ ಯಕ್ಷಗಾನ ತಾಳಮದ್ದಳೆ ಕೂಟ ನಡೆಯಿತು.
ವಿಷ್ಣುಪ್ರಿಯ ಮಜಿಬೈಲು, ಅನ್ವಿ ಶೆಟ್ಟಿ ಕಲ್ಲೆಕಾರು, ಸಿಂಧೂರ ದೇವಕಾನ, ಶರ್ವಾಣಿ ಪೈವಳಿಕೆ, ಶಮಾ ಪ್ರಸಾದ್ ಶಿರಂತ್ತಡ್ಕ, ಸುಘೋಷರಾಮ ಕುದ್ರೆಕ್ಕೋಡ್ಲು, ಗೌತಮ್ ನಾವಡ ಮಜಿಬೈಲು ಪಾತ್ರವರ್ಗದಲ್ಲಿ ಹಾಗೂ ಕೇಶವಪ್ರಸಾದ ಶಿರಂತ್ತಡ್ಕ(ಭಾಗವತಿಗೆ), ರಾಜಾರಾಮ ಬಲ್ಲಾಳ್ ಚಿಪ್ಪಾರು(ಚೆಂಡೆ), ರಾಮದಾಸ್ ಶೆಟ್ಟಿ ವಗೆನಾಡು(ಮದ್ದಳೆ)ಯಲ್ಲಿ ಭಾಗವಹಿಸಿದ್ದರು. ಕೆ.ಮಹಾಲಿಂಗ ಬೇಳ ಕುಮಾರಮಂಗಲ ಸಹಕಾರ ನೀಡಿದ್ದರು.