ಬದಿಯಡ್ಕ: ವಿವಿಧ ಕಾರಣಗಳಿಂದ ಶಿಥಿಲಗೊಂಡ ದೇವತಾ ಸನ್ನಿಧಿಗಳು ತನ್ನ ಕುರುಹುಗಳನ್ನು ಉಳಿಸಿಕೊಂಡು ಇದೀಗ ಮತ್ತೆ ವೈಭವವದತ್ತ ಮರಳುತ್ತಿದೆ. ನಾವು ನಂಬಿಕೊಂಡು ಬರುತ್ತಿರುವ ದೇವತಾ ಶಕ್ತಿಗಳ ಪ್ರೇರಣೆಯು ಇದಕ್ಕೆಲ್ಲ ಕಾರಣವಾಗಿದೆ. ಶ್ರದ್ಧಾಕೇಂದ್ರಗಳು ಭಕ್ತರ ಅನುಕೂಲಕ್ಕಾಗಿ ಹಾಗೂ ಧಾರ್ಮಿಕ ಚಟುವಟಿಕೆಗಳು ನಿರಂತರ ನಡೆಯಲು ಕಾರಣವಾಗುವುದಲ್ಲದೆ ಸಮಾಜವು ಸನ್ಮಾರ್ಗದಲ್ಲಿ ಮುಂದುವರಿಯಲು ಸಹಾಯಕವಾಗುತ್ತದೆ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ನುಡಿದರು.
ಕೊಲ್ಲಂಗಾನ ಸಮೀಪದ ಕಲ್ಲಕಟ್ಟ ಅರ್ತಲೆ ಶ್ರೀ ರಕ್ತೇಶ್ವರಿ ನಾಗ ಗುಳಿಗ ಸೇವಾಸಮಿತಿಯ ನೇತೃತ್ವದಲ್ಲಿ ಶುಕ್ರವಾರ ಶ್ರೀ ರಕ್ತೇಶ್ವರಿ, ನಾಗ, ಗುಳಿಗ ಕ್ಷೇತ್ರದ ಶಿಲಾನ್ಯಾಸ, ನಿಧಿಸಮರ್ಪಣೆ ಹಾಗೂ ವಿನಂತಿ ಪತ್ರ ಬಿಡುಗಡೆ ಸಮಾರಂಭದಲ್ಲಿ ಅವರು ಆಶೀರ್ವಚನವನ್ನು ನೀಡಿದರು.
ಶ್ರೀ ರಕ್ತೇಶ್ವರಿ ನಾಗ ಗುಳಿಗ ಸೇವಾ ಸಮಿತಿಯ ಅಧ್ಯಕ್ಷ ಸುಬ್ಬಣ್ಣ ನಾಯ್ಕ್ ಅರ್ತಲೆ ಅಧ್ಯಕ್ಷತೆ ವಹಿಸಿದ್ದರು. ವೇದಮೂರ್ತಿ ಗಣೇಶ್ ಭಟ್ ಮುಂಡೋಡು, ವಾಸ್ತುಶಿಲ್ಪಿ ರಮೇಶ್ ಕಾರಂತ್, ಗೌರವಾಧ್ಯಕ್ಷ ಗೋಪಾಲಕೃಷ್ಣ ನಾವಡ ಓಣಿಕುಂಡು, ಮಧೂರು ಗ್ರಾಮಪಂಚಾಯಿತಿ ಅಧ್ಯಕ್ಷ ಗೋಪಾಲಕೃಷ್ಣ, ವಿದ್ಯುತ್ ಇಲಾಖೆಯ ಮುಖ್ಯ ಅಭಿಯಂತರ ಪಿ. ಸುರೇಂದ್ರ, ಕಾಸರಗೋಡು ಜನರಲ್ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಜನಾರ್ಧನ ನಾಯ್ಕ್, ಮಧೂರು ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷ ಮಾಧವ ಮಾಸ್ತರ್, ನಿರ್ಮಾಣ ಸಮಿತಿ ರಕ್ಷಾಧಿಕಾರಿಗಳಾದ ಉದ್ಯಮಿ ಕೃಷ್ಣಪ್ರಸಾದ ಚಿತ್ತಾರಿ, ಶ್ಯಾಮ್ ಭಟ್ ಕಲ್ಲಕಟ್ಟ, ನಾರಾಯಣ ಭಟ್ ಕಲ್ಲಕಟ್ಟ, ಶಶಿಕಲಾ ಸುಬ್ರಹ್ಮಣ್ಯ ಕಾಸರಗೋಡು, ಕೃಷ್ಣ ನಾಯ್ಕ್ ಕಲ್ಲಕಟ್ಟ, ಕೃಷ್ಣ ನಾಯ್ಕ್ ಅರ್ತಲ, ಗೌರವಾಧ್ಯಕ್ಷೆ ವನಿತಾ ಐತ್ತಪ್ಪ ನಾಯ್ಕ್ ಉಪಸ್ಥಿತರಿದ್ದರು. ಮಹೇಶ್ ವಳಕುಂಜ, ಗಣೇಶ್‍ಕೃಷ್ಣ ಅಳಿಕೆ, ಗ್ರಾಮಪಂಚಾಯಿತಿ ಸದಸ್ಯ ಶ್ಯಾಮ್ ಪ್ರಸಾದ್ ಮಾನ್ಯ ಉಪಸ್ಥಿತರಿದ್ದರು. ಕ್ಷೇತ್ರ ಪುನರ್ ನಿರ್ಮಾಣ ಸಮಿತಿಯ ಅಧ್ಯಕ್ಷ ಪ್ರೊ.ಎ.ಶ್ರೀನಾಥ್ ಕೊಲ್ಲಂಗಾನ ಸ್ವಾಗತಿಸಿ, ಕಾರ್ಯದರ್ಶಿ ಪ್ರಮೋದ್ ಕುಮಾರ್ ಕೊಲ್ಲಂಗಾನ ವಂದಿಸಿದರು. ಉಪಾಧ್ಯಕ್ಷ ಸುಂದರ ಶೆಟ್ಟಿ ಕೊಲ್ಲಂಗಾನ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಭಕ್ತಾದಿಗಳು ತಮ್ಮ ದೇಣಿಗೆಯನ್ನು ಸಮರ್ಪಿಸಿದರು.