HEALTH TIPS

ವಿಫಲಗೊಂಡ ನಡೆ: ಯುಎಇ ಪ್ರವಾಸ ಕೈಬಿಟ್ಟ ಮುಖ್ಯಮಂತ್ರಿ ಪಿಣರಾಯಿ ವಿಜಯನ್: ಕೇಂದ್ರದಿಂದ ಲಭಿಸದ ಅನುಮತಿ

                ನವದೆಹಲಿ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಯುಎಇ ಪ್ರವಾಸದಿಂದ ಹಿಂದೆ ಸರಿದಿದ್ದಾರೆ. ಪ್ರಧಾನಿ ಕಚೇರಿಯಿಂದ ಅನುಮತಿ ಪಡೆಯುವ ಕ್ರಮ ವಿಫಲವಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಪ್ರವಾಸ ಕೈಬಿಟ್ಟರು.

            ಅಬುಧಾಬಿ ಇನ್ವೆಸ್ಟ್‍ಮೆಂಟ್ ಮೀಟ್‍ನಲ್ಲಿ ಪಾಲ್ಗೊಳ್ಳದಂತೆ ಕೇಂದ್ರವು ಮುಖ್ಯಮಂತ್ರಿಗೆ ಸೂಚಿಸಿದೆ. ಆ ಸಭೆ ಮಹತ್ವದಲ್ಲವೆಂದು ಉಲ್ಲೇಖಿಸಲಾಗಿದೆ. ಇದೇ 8ರಿಂದ 10ರವರೆಗೆ ನಡೆಯಲಿರುವ ಅಬುಧಾಬಿ ಹೂಡಿಕೆ ಸಮಾವೇಶದಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ಅನುಮತಿ ಕೋರಿದ್ದರು. 

            ಯುಎಇ ವಾಣಿಜ್ಯ ಖಾತೆಯ ರಾಜ್ಯ ಸಚಿವರು ಹೂಡಿಕೆ ಶೃಂಗಸಭೆಯಲ್ಲಿ ಭಾಗವಹಿಸಲು ಆಹ್ವಾನವನ್ನು ನೀಡಿದ್ದರು. ಸಭೆಯಲ್ಲಿ ಮಾತನಾಡಲು ಸಚಿವ ಪಿಎ ಮುಹಮ್ಮದ್ ರಿಯಾಝ್ ಅವರನ್ನೂ ಆಹ್ವಾನಿಸಲಾಗಿತ್ತು. ಯುಎಇಗೆ ಭೇಟಿ ನೀಡುವ ನಿಯೋಗದಲ್ಲಿ ಕೈಗಾರಿಕೆ ಸಚಿವರು ಮತ್ತು ಮುಖ್ಯ ಕಾರ್ಯದರ್ಶಿ ಕೂಡ ಇದ್ದರು. ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಅನುಮತಿ ಕೋರಿ ಕಡತವನ್ನು ಖುದ್ದು ಪರಿಶೀಲಿಸಿದರು. ಬಳಿಕ ಮುಖ್ಯಮಂತ್ರಿ ಅಥವಾ ಸಚಿವರು ಹಾಜರಾಗಬೇಕಾಗಿಲ್ಲ ಎಂದು ಕೇಂದ್ರ ತಿಳಿಸಿದೆ.

            ಕೇಂದ್ರವು ಕೇರಳಕ್ಕೆ ಕಳುಹಿಸಿರುವ ಪತ್ರದಲ್ಲಿ ಸಚಿವರ ಮಟ್ಟದ ತಂಡ ಭಾಗವಹಿಸುವಷ್ಟು ಈ ಕಾರ್ಯಕ್ರಮ ಮುಖ್ಯವಲ್ಲ ಎಂದು ಹೇಳಲಾಗಿದೆ. ಅಧಿಕಾರಿಗಳು ಭಾಗವಹಿಸಲು ಯಾವುದೇ ಅಭ್ಯಂತರವಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಮುಖ್ಯಮಂತ್ರಿಗೆ ಆಹ್ವಾನ ನೀಡಿದ ಯುಎಇ ಸಚಿವರು ಈ ಹಿಂದೆ ಕೇರಳದ ಶಾಪಿಂಗ್ ಮಾಲ್ ಉದ್ಘಾಟನೆಗೆ ಬಂದಿದ್ದ ವ್ಯಕ್ತಿಯಾಗಿದ್ದು, ಮುಖ್ಯಮಂತ್ರಿ ನೇರವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುವುದರ ಮಹತ್ವವೇನು ಎಂದು ಕೇಂದ್ರ ಕೇಳಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries