ಮಂಜೇಶ್ವರ: ಕಳಿಯೂರು ದೇವಸ್ಯಗುತ್ತು ದೈವಸ್ಥಾನ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ದೇವಸ್ಯಗುತ್ತು ಮನೆಯ ಗೃಹಪ್ರವೇಶ, ಧರ್ಮದೈವ ಹಾಗೂ ಪರಿವಾರ ದೈವಗಳ ನೇಮೋತ್ಸವ ಕಾರ್ಯಕ್ರಮಗಳೊಂದಿಗೆ ಜರಗಲಿದ್ದು, ಇದರ ಅಂಗವಾಗಿ ಮೇ 1ಕ್ಕೆ ಬೆಳಿಗ್ಗೆ 10 ಕ್ಕೆ ಉಗ್ರಾಣ ಮುಹೂರ್ತ ಕಾರ್ಯಕ್ರಮ ಜರಗಿತು. ಕೋಳ್ಯೂರು ಶ್ರೀಶಂಕರ ನಾರಾಯಣ ದೇವಸ್ಥಾನದ ಆಡಳಿತ ಮೊಕ್ತೇಸರ ಕೇಶವ ಭಟ್ ಮೊಗಸಾಲೆ ಉಗ್ರಾಣ ಮುಹೂರ್ತ ನೇರೆವೇರಿಸಿದರು.
ವಿಠಲ ಭಟ್ ಮೊಗಸಾಲೆ, ದೇವಸ್ಯಗುತ್ತು ಸಮಿತಿ ಗೌರವಾಧ್ಯಕ್ಷ, ಕಳಿಯೂರು ರಕ್ತೇಶ್ವರಿಯ ಗಡಿ ಪ್ರಧಾನ ಪಿ.ಟಿ.ಸುಬ್ಬಣ್ಣ ಶೆಟ್ಟಿ, ಅಧ್ಯಕ್ಷ ಕಿಶೋರ್ ರೈ ಕಲ್ಲಡ್ಕ ದೇಲಂಪಾಡಿ, ಸಾಯಿನಾಥ್ ರೈ ಮಣಿಯೂರು, ವಿಶ್ವನಾಥ ಶೆಟ್ಟಿ ಮೀಯಪದವು, ಬಾಲಕೃಷ್ಣ ಶೆಟ್ಟಿ ಇಡಿಯ ಮೊದಲಾದವರು ಉಪಸ್ಥಿತರಿದ್ದರು.