ಕಾಸರಗೋಡು: ಪಿಂಚಣಿ ಹಾಗೂ ಭವಿಷ್ಯನಿಧಿ ಮೊತ್ತ ನೀಡದೆ ಸತಾಯಿಸುತ್ತಿರುವ ಸರ್ಕಾರದ ಧೋರಣೆ ಖಂಡಿಸಿ ಕೆಎಸ್ಸಾರ್ಟಿಸಿ ಪಿಂಚಣಿದಾರರು ಮುಖ್ಯ ಮಂತ್ರಿ ಮನೆ ಎದುರು ಧರಣಿ ನಡೆಸಲು ಸನ್ನದ್ಧರಾಗಿದ್ದಾರೆ. ಸೇವೆಯಿಂದ ನಿವೃತ್ತರಾಗುವ ಕಾರ್ಮಿಕರಿಗೆ ಪಿಂಚಣಿ ಹಾಗೂ ಪ್ರಯಾಣಿಕರ ಅಪಘಾತ ವಿಮೆ ವಿತರಿಸಲು ಪ್ರಯಾಣ ಸೆಸ್ ಮೂಲಕ ಕೋಟ್ಯಂತರ ರೂ. ಸಂಗ್ರಹಿಸಿ ಪಿಂಚಣಿ ನಿಧಿ ರಚಿಸಿಕೊಂಡಿರುವ ಸರ್ಕಾರ, ಸ್ವಯಂ ನಿವೃತ್ತರಾದವರಿಗೆ ಪಿಂಚಣಿ ಹಾಗೂ ಭವಿಷ್ಯನಿಧಿ ಸಂಭಾವನೆ ನೀಡದೆ ವಿಶ್ರಾಂತ ಜೀವನ ನಡೆಸುತ್ತಿರುವವರು ಪರದಾಡುವಂತಾಗಿದೆ
ಸರ್ಕಾರದ ಜನವಿರೋಧಿ ಕ್ರಮಗಳ ವಿರುದ್ಧ ಕೆಎಸ್‍ಆರ್‍ಟಿಸಿ ಪ್ರಜಾಸತ್ತಾತ್ಮಕ ಪಿಂಚಣಿದಾರರ ವೇದಿಕೆ ಜಿಲ್ಲಾ ಸಮಿತಿ ವತಿಯಿಂದ ಮುಖ್ಯಮಂತ್ರಿಗಳ ನಿವಾಸಕ್ಕೆ ಪಿಂಚಣಿದಾರರ ಮೆರವಣಿಗೆ ಹಾಗೂ ಧರಣಿ ನಡೆಸಲು ನಿರ್ಧರಿಸಲಾಗಿದೆ. ಕಾರ್ಯಕ್ರಮದ ಯಶಸ್ವಿಗಾಗಿ ನಡೆದ ಸಭೆಯಲ್ಲಿ ನಾರಾಯಣನ್ ಕಿಯಕ್ಕುಂಕರ ಅಧ್ಯಕ್ಷತೆ ವಹಿಸಿದ್ದರು. ಪಿ.ವಿ.ಉದಯಕುಮಾರ್, ಎಂವಿ ವಿಜಯನ್, ಸಜೀವಕುಮಾರ್ ಕೊನ್ನಕ್ಕಾಡ್, ಬೇಬಿ ಥಾಮಸ್, ಕೃಷ್ಣನ್ ಕೊಯಿಲೇರಿಯಲ್, ವಿ.ಎಂ.ಗೋಪಾಲನ್, ತಂಬಾನ್ ನಾಯರ್, ಭಾಸ್ಕರನ್ ಚಿಮೇನಿ, ಯಶವಂತ್ ಉಪಸ್ಥಿತರಿದ್ದರು.