ತಿರುವನಂತಪುರ: ರಾಜ್ಯದ ಆಸ್ಪತ್ರೆಗಳು, ಇತರೆ ಆರೋಗ್ಯ ಸಂಸ್ಥೆಗಳು ಹಾಗೂ ಪ್ರಮುಖ ಮಳಿಗೆಗಳಲ್ಲಿ ಬ್ಲೀಚಿಂಗ್ ಪೌಡರ್ ಅನ್ನು ಪ್ರತ್ಯೇಕವಾಗಿ ಇರಿಸÀಬೇಕು ಎಂದು ಆರೋಗ್ಯ ಇಲಾಖೆ ನಿರ್ದೇಶಕರು ಸೂಚಿಸಿದ್ದಾರೆ.
ತೇವಾಂಶಕ್ಕೆ ತೆರೆದುಕೊಳ್ಳದ ಪ್ರತ್ಯೇಕ ಕೋಣೆಯಲ್ಲಿ ಬ್ಲೀಚಿಂಗ್ ಪೌಡರ್ ಅನ್ನು ಸಂಗ್ರಹಿಸಲು ಡಿ.ಎಂ.ಒ. ಗಳಿಗೆ ಸಲಹೆ ನೀಡಲಾಗುತ್ತದೆ.
ಔಷಧಿಗಳು ಮತ್ತು ರಾಸಾಯನಿಕಗಳ ಶೇಖರಣೆಯಲ್ಲಿ ಎಚ್ಚರಿಕೆಯನ್ನು ಸಹ ಸೂಚಿಸಲಾಗುತ್ತದೆ. ಕೊಲ್ಲಂ, ತಿರುವನಂತಪುರಂ ಮತ್ತು ಆಲಪ್ಪುಳದಲ್ಲಿರುವ ವೈದ್ಯಕೀಯ ಸೇವಾ ನಿಗಮದ ಗೋದಾಮುಗಳಲ್ಲಿ ಬ್ಲೀಚಿಂಗ್ ಪೌಡರ್‍ಗೆ ಬೆಂಕಿ ತಗುಲಿ ಉಂಟಾದ ಅವಘಡಗಳ ಹಿನ್ನೆಲೆಯಲ್ಲಿ ಈ ಎಚ್ಚರಿಕೆ ನೀಡಲಾಗಿದೆ.
ಆರೋಗ್ಯ ಸಂಸ್ಥೆಗಳಲ್ಲಿ ಸಾಕಷ್ಟು ಸೌಲಭ್ಯಗಳಿಲ್ಲದಿದ್ದರೆ ಸ್ಥಳೀಯ ಸಂಸ್ಥೆಗಳ ನೆರವು ಪಡೆಯಬೇಕು ಎಂದು ಆರೋಗ್ಯ ಇಲಾಖೆ ನಿರ್ದೇಶಕರು ಸೂಚಿಸಿರುವರು. ಇದೇ ವೇಳೆ ಔಷಧಿ ಗೋದಾಮುಗಳಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬ್ಲೀಚಿಂಗ್ ಪೌಡರ್ ಅನ್ನು ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಲಾಗುವುದು. ಔಷಧ ನಿಯಂತ್ರಣ ಮಂಡಳಿ ವರದಿಯನ್ನು ಕೆಎಂಸಿಎಲ್‍ಗೆ ಹಸ್ತಾಂತರಿಸಿದೆ. ಬ್ಲೀಚಿಂಗ್ ಪೌಡರ್ ನಲ್ಲಿ ಡ್ರಗ್ಸ್ ಕಂಟ್ರೋಲ್ ಇಲಾಖೆಯ ವ್ಯಾಪ್ತಿಗೆ ಬರುವ ಅಂಶಗಳು ಇರುವುದಿಲ್ಲ. ಔಷಧ ನಿಯಂತ್ರಣ ಪ್ರಯೋಗಾಲಯಗಳು ರಾಸಾಯನಿಕಗಳನ್ನು ಗುರುತಿಸುವ ವ್ಯವಸ್ಥೆಯನ್ನು ಹೊಂದಿಲ್ಲ. ಬೆಂಕಿ ವಘಡಗಳ ನಂತರ ಇದೀಗಷ್ಟೇ ಬ್ಲೀಚಿಂಗ್ ಪೌಡರ್ ಪರೀಕ್ಷೆಗೆ ಆದೇಶಿಸಲಾಗಿದೆ.