ನವದೆಹಲಿ: ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವು ಅಪಾರ ಸಾಧ್ಯತೆಗಳನ್ನು ಹೊಂದಿರುವ ವಿಜ್ಞಾನದ ಫಲವಾಗಿದ್ದು ಇದೀಗ ಅದರ ನೆರವಿನಿಂದ ಮಾನವರ ಮಿದುಳನ್ನು ಓದುವಂಥ ಮಾದರಿಯನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ಚಾಟ್ಜಿಪಿಟಿ ಮಾದರಿಯ ತಂತ್ರಜ್ಞಾನವನ್ನೇ ಬಳಸಿ ಇದನ್ನು ಅಭಿವೃದ್ಧಿಪಡಿಸಲಾಗಿದೆ.
ನವದೆಹಲಿ: ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನವು ಅಪಾರ ಸಾಧ್ಯತೆಗಳನ್ನು ಹೊಂದಿರುವ ವಿಜ್ಞಾನದ ಫಲವಾಗಿದ್ದು ಇದೀಗ ಅದರ ನೆರವಿನಿಂದ ಮಾನವರ ಮಿದುಳನ್ನು ಓದುವಂಥ ಮಾದರಿಯನ್ನು ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ. ಚಾಟ್ಜಿಪಿಟಿ ಮಾದರಿಯ ತಂತ್ರಜ್ಞಾನವನ್ನೇ ಬಳಸಿ ಇದನ್ನು ಅಭಿವೃದ್ಧಿಪಡಿಸಲಾಗಿದೆ.
ಚಾಟ್ಜಿಪಿಟಿ, ಹೊಸ ಬಿಂಗ್ ಮತ್ತು ಗೂಗಲ್ನ ಬಾರ್ಡ್ ಮುಂತಾದ ಚಾಟ್ಬಾಟ್ಗಳ ಜನಪ್ರಿಯತೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವುದರಿಂದ ಕೃತಕ ಬುದ್ಧಿಮತ್ತೆಯಲ್ಲಿ ಆಸಕ್ತಿ ಉತ್ತುಂಗಕ್ಕೆ ಏರುತ್ತಿದೆ. ಬಹಳ ವರ್ಷಗಳಿಂದ ಒಂದಲ್ಲ ಒಂದು ರೀತಿಯಲ್ಲಿ ಬಳಸುತ್ತಿರುವ ಕೃತಕ ಬುದ್ಧಿಮತ್ತೆ ಯು ನಿಜವಾಗಿಯೂ ಹೊಸ ಪರಿಕಲ್ಪನೆಯೇನೂ ಅಲ್ಲ. ಆದರೆ ಈಗ ಜನರಲ್ಲಿ ಅದರ ಬಗ್ಗೆ ಆಸಕ್ತಿ ಮತ್ತು ಜಿಜ್ಞಾಸೆ ಹೆಚ್ಚಿರುವುದಂತೂ ವಾಸ್ತವ ಸಂಗತಿಯಾಗಿದೆ. ಮನುಕುಲ ವೈವಿಧ್ಯಮಯ ತಂತ್ರಜ್ಞಾನ ಕ್ರಾಂತಿಯ ಅಂಚಿನಲ್ಲಿ ನಿಂತಿದೆ ಎಂದರೆ ತಪ್ಪೇನೂ ಆಗದು.
ಮಾನವರ ಚಿಂತನೆ ಡಿಕೋಡ್: ಕೆಲವೇ ತಿಂಗಳ ಹಿಂದೆ ಅಸಾಧ್ಯವೆನಿಸಿದ್ದನ್ನು ಈಗ ಸಾಧ್ಯಗೊಳಿಸಬಹುದಾಗಿದೆ. ತಂತ್ರಜ್ಞಾನವನ್ನು ಬಳಸಿ ಮಾನವರ ಆಲೋಚನೆಗಳನ್ನು ಡಿಕೋಡ್ಗೊಳಿಸುವುದು ಕೂಡ ಅದರಲ್ಲಿ ಒಂದಾಗಿದೆ. ಆಸ್ಟಿನ್ನ ಟೆಕ್ಸಾಸ್ ವಿಶ್ವವಿದ್ಯಾಲಯದ ವಿಜ್ಞಾನಿಗಳು, ಮಾನವರ ಆಲೋಚನೆಯನ್ನು ಪಠ್ಯವಾಗಿ (ಟೆಕ್ಸ್ ್ಟ ಪರಿವರ್ತಿಸುವುದನ್ನು ಸಾಧ್ಯಗೊಳಿಸಿ ಈ ಸಾಧನೆ ಮಾಡಿದ್ದಾರೆ.
ಮಹತ್ವದ ಸಾಧನೆ
ಡಾಕ್ಟೋರಲ್ ವಿದ್ಯಾರ್ಥಿ ಜೆರ್ರಿ ಡಾಂಗ್ ಮತ್ತು ನರವಿಜ್ಞಾನ ಹಾಗೂ ಕಂಪ್ಯೂಟರ್ ವಿಜ್ಞಾನದ ಸಹಾಯಕ ಪ್ರಾಧ್ಯಾಪಕ ಅಲೆಕ್ಸ್ ಹ್ಯೂಥ್ ನೇತೃತ್ವದ ತಂಡ ಎಐ ಪ್ರಪಂಚದಲ್ಲಿ ಈ ಮಹತ್ವದ ಸಾಧನೆಯನ್ನು ಮಾಡಿದ್ದಾರೆ. ಈ ಕ್ರಾಂತಿಕಾರಿ ತಂತ್ರಜ್ಞಾನದ ಸಾಧನೆ ಮಾಡುವ ನಿಟ್ಟಿನಲ್ಲಿ ವಿಜ್ಞಾನಿಗಳು, ವಿವರಣಾತ್ಮಕ ಕಥೆಗಳನ್ನು ಕೇಳುತ್ತಿರುವ ಮೂವರು ಮಾನವರ ಮಿದುಳಿನ ಚಟುವಟಿಕೆಗಳನ್ನು 16 ಗಂಟೆ ಕಾಲ ದಾಖಲಿಸಲು ಫಂಕ್ಷನಲ್ ಮ್ಯಾಗ್ನೆಟಿಕ್ ರೆಸೊನಾನ್ಸ್ ಇಮೇಜಿಂಗ್ (ಎಫ್ಎಂಆರ್ಐ) ಯಂತ್ರವನ್ನು ಬಳಸಿದ್ದರು. ಪ್ರತಿಯೊಂದು ಪದಕ್ಕೆ ಅನುಗುಣವಾಗಿ ನರದ ಪ್ರತಿಕ್ರಿಯೆಯನ್ನು ಗುರುತಿಸಲು ಸಂಶೋಧಕರು ಯಶಸ್ವಿಯಾಗಿದ್ದಾರೆ. ಅದನ್ನು ಆಧರಿಸಿ, ಮಿದುಳಿನ ಚಟುವಟಿಕೆಯನ್ನು ಡಿಕೋಡ್ ಮಾಡಿ ಪಠ್ಯವಾಗಿ ಪರಿವರ್ತಿಸುವಲ್ಲಿ ಬಹುಮಟ್ಟಿಗೆ ಅವರು ಯಶಸ್ಸು ಕಂಡಿದ್ದಾರೆ. ಆಲೋಚನೆಯ ಸಾರವನ್ನು ದಾಖಲಿಸಲು ಯಶಸ್ವಿಯಾಗಿದ್ದಾರೆ.