ಮಂಗಳೂರು: ಬಂಟ್ವಾಳ ಪೇಟೆ ಮಹಾಲಿಂಗೇಶ್ವರ ದೇವಸ್ಥಾನ ಹಿಂಬದಿ ನೇತ್ರಾವತಿ ನದಿಯಲ್ಲಿ ನೀರು ಬತ್ತಿದ್ದು, ಪ್ರಥಮ ಬಾರಿಗೆ ಬಂಡೆ ಕಲ್ಲಿನಲ್ಲಿ ವಿವಿಧ ಆಕೃತಿಯ ವಿಗ್ರಹ ಮತ್ತು ಕೆತ್ತನೆಗಳು ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿದೆ.
ಮಂಗಳೂರು: ಬಂಟ್ವಾಳ ಪೇಟೆ ಮಹಾಲಿಂಗೇಶ್ವರ ದೇವಸ್ಥಾನ ಹಿಂಬದಿ ನೇತ್ರಾವತಿ ನದಿಯಲ್ಲಿ ನೀರು ಬತ್ತಿದ್ದು, ಪ್ರಥಮ ಬಾರಿಗೆ ಬಂಡೆ ಕಲ್ಲಿನಲ್ಲಿ ವಿವಿಧ ಆಕೃತಿಯ ವಿಗ್ರಹ ಮತ್ತು ಕೆತ್ತನೆಗಳು ಕಾಣಿಸಿಕೊಂಡು ಸಾರ್ವಜನಿಕರಲ್ಲಿ ಕುತೂಹಲ ಮೂಡಿಸಿದೆ.
ಬಂಡೆ ಕಲ್ಲುಗಳ ಮೇಲೆ ಶಿವ, ನಂದಿ, ಪಾದ, ಪಾಣಿಪೀಠ, ಚೆನ್ನೆಮಣೆ, ಊಟದ ಬಟ್ಟಲು, ಜಡೆ, ಸೂರ್ಯ ಚಂದ್ರ, ತಾವರೆ, ಸುರಂಗ ಮತ್ತಿತರ ಕೆತ್ತನೆಗಳು ಕಾಣಿಸಿಕೊಂಡಿವೆ.
'ಹಲವು ವರ್ಷಗಳ ಬಳಿಕ ನೇತ್ರಾವತಿ ನದಿಯಲ್ಲಿ ನೀರು ಬರಿದಾಗಿರುವ ಪರಿಣಾಮ ಇಂತಹ ಕಲಾಕೃತಿಗಳು ಹೊರ ಜಗತ್ತಿಗೆ ಕಾಣಿಸಿಕೊಂಡಿದೆ. ಇತಿಹಾಸ ತಜ್ಞರು ಈ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಿದ್ದಲ್ಲಿ ಹೆಚ್ಚಿನ ಮಾಹಿತಿ ತಿಳಿದು ಬರಬಹುದು' ಎನ್ನುತ್ತಾರೆ ಸ್ಥಳೀಯರು.