ಕೊಟ್ಟಾಯಂ: ಫೇಸ್‍ಬುಕ್ ಪೋಸ್ಟ್‍ನಿಂದ ಮನನೊಂದ ಯುವತಿ ನೇಣಿಗೆ ಶರಣಾದ ಘಟನೆ ಕೋಟ್ಟಾಯಂನಲ್ಲಿ ನಡೆದಿದೆ. ಕೋಟ್ಟಾಯಂ ಕೋದನಲ್ಲೂರ್ ವರಕ್ಕುಕಾಲ ನಿವಾಸಿ ಆದಿರಾ ಮುರಳೀಧರನ್(26)ಸಾವನ್ನಪ್ಪಿದ ಯುವತಿ. ಆದಿರಾ ಮೃತದೇಹ ಸೋಮವಾರ ಮನೆಯೊಳಗೆ ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಯುವತಿ ಸಾವಿಗೆ ಕಾರಣನಾದ ಆರೋಪಿ ಕೋಟ್ಟಾಯಂ ಕೋದನಲ್ಲೂರ್ ನಿವಾಸಿ ಅರುಣ್ ವಿದ್ಯಾಧರ್(32)ಮ್ರತದೇಹ ಹೊಸದುರ್ಗ ನಾರ್ತ್ ಕೋಟಚ್ಚೇರಿಯ ವಸತಿಗೃಹವೊಂದರ ಕೊಠಡಿಯೊಳಗೆ ಕೈನರ ಕತ್ತರಿಸಿ, ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಆದಿರಾ ಹಾಗೂ ಅರುಣ್ ವಿದ್ಯಾಧರ್ ಈ ಹಿಂದೆ ಪರಸ್ಪರ ಪ್ರೀತಿಸುತ್ತಿದ್ದು, ವರ್ಷದ ಹಿಂದೆ ಆದಿರಾ ಈತನೊಂದಿಗಿನ ಸಂಪರ್ಕ ಕಡಿದುಕೊಮಡಿದ್ದಳು. ಈ ಮಧ್ಯೆ ಆದಿರಾಗೆ ಬೇರೊಬ್ಬ ಯುವಕನೊಂದಿಗೆ ವಿವಾಹ ಸಂಬಂಧದ ಆಲೋಚನೆ ನಡೆಯುತ್ತಿರುವ ಬಗ್ಗೆ ಅರುಣ್‍ಗೆ ಮಾಹಿತಿ ಲಭಿಸಿದ್ದು, ಇದು ಅರುಣ್ ವಿದ್ಯಾಧರ್‍ನನ್ನು ಸಿಟ್ಟಿಗೆಬ್ಬಿಸಿತ್ತು. ಇದರಿಂದ ಅರುಣ್‍ವಿದ್ಯಾಧರ್ ಆದಿರಾಗೆ ಬೆದರಿಕೆಯೊಡ್ಡಲಾರಂಭಿಸಿದನಲ್ಲದೆ, ಈಕೆ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಮಾನಹಾನಿಕರ ಪೋಸ್ಟ್ ಪ್ರಕಟಿಸಲಾರಂಭಿಸಿದ್ದನು. ಇದರಿಂದ ಮನನೊಂದ ಆದಿರಾ ಕಳೆದ ಭಾನುವಾರ ಅಲ್ಲಿನ ಪೊಲೀಸರಿಗೆ ದೂರು ನೀಡಿದ್ದು, ಸೋಮವಾರ ಬೆಳಗ್ಗೆ ಮೃತದೇಹ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅರುಣ್‍ವಿದ್ಯಾಸಾಗರ್ ವರ್ತನೆ ಆದಿರಾಳನ್ನು ಈತನೊಂದಿಗಿನ ಪ್ರೀತಿಯಿಂದ ಹಿಂದೆ ಸರಿಯುವಂತೆ ಮಾಡಿತ್ತೆನ್ನಲಾಗಿದೆ. ಈ ಮಾದ್ಯೆ ಅರುಣ್‍ವಿದ್ಯಾಧರ್ ನಾಪತ್ತೆಯಾಗಿದ್ದು, ಪೊಲೀಸರು ಹುಡುಕಾಡುವ ಮಧ್ಯೆ ಈತನ ಮೃತದೇಹ ಹೊಸದುರ್ಗದ ವಸತಿಗೃಹದ ಕೊಠಡಿಯಲ್ಲಿ ಪತ್ತೆಯಾಗಿದೆ. ಕೊಠಡಿ ಪಡೆಯುವ ಸಂದರ್ಭ ತಾನು ಲಾರಿ ಚಾಲಕನೆಂದು ಸಉಳ್ಳು ವಿಳಾಸ ನೀಡಿದ್ದು, ಈತನ ಗುರುತಿನ ಚೀಟಿ ಪಡೆದುಕೊಳ್ಳುವಲ್ಲಿ ವಸತಿಗೃಹ ಸಿಬ್ಬಂದಿ ಲೋಪವೆಗಿರುವುದೂ ತನಿಖೆಯಿಂದ ವ್ಯಕ್ತವಾಗಿದೆ.