ಲಂಡನ್: 'ಭಾರತದಲ್ಲಿ ಯಾವುದೇ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಹತ್ತಿಕ್ಕಲಾಗುತ್ತಿಲ್ಲ. ಅವು ಹಿಂದಿಗಿಂತಲೂ ಅದು ಹೆಚ್ಚು ಬೆಳಗುತ್ತಿವೆ ಮತ್ತು ಪ್ರವರ್ಧಮಾನಗೊಳ್ಳುತ್ತಿವೆ' ಎಂದು ಉಪ ರಾಷ್ಟ್ರಪತಿ ಜಗದೀಪ್ ಧನ್‌ಕರ್ ಹೇಳಿದ್ದಾರೆ.
ಲಂಡನ್: 'ಭಾರತದಲ್ಲಿ ಯಾವುದೇ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಹತ್ತಿಕ್ಕಲಾಗುತ್ತಿಲ್ಲ. ಅವು ಹಿಂದಿಗಿಂತಲೂ ಅದು ಹೆಚ್ಚು ಬೆಳಗುತ್ತಿವೆ ಮತ್ತು ಪ್ರವರ್ಧಮಾನಗೊಳ್ಳುತ್ತಿವೆ' ಎಂದು ಉಪ ರಾಷ್ಟ್ರಪತಿ ಜಗದೀಪ್ ಧನ್‌ಕರ್ ಹೇಳಿದ್ದಾರೆ.
ರಾಜ 3ನೇ ಚಾರ್ಲ್ಸ್ ಅವರ ಪಟ್ಟಾಭಿಷೇಕ ಸಮಾರಂಭದಲ್ಲಿ ಪಾಲ್ಗೊಳ್ಳಲು ಇಲ್ಲಿಗೆ ಆಗಮಿಸಿರುವ ಅವರು, ಸ್ವದೇಶಕ್ಕೆ ಮರಳುವ ಮುನ್ನ ಭಾರತ ಮೂಲದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
'ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಹತ್ತಿಕ್ಕಲಾಗುತ್ತಿದೆ ಎಂದು ಭಾರತದ ಬಗ್ಗೆ ನಡೆದಿರುವ ಅಪಪ್ರಚಾರವನ್ನು, ಬ್ರಿಟನ್‌ನಲ್ಲಿ ನೆಲೆಸಿರುವ ಭಾರತ ಮೂಲದ ವಿದ್ಯಾರ್ಥಿಗಳು ಎದುರಿಸಿ ಪ್ರತ್ಯುತ್ತರ ನೀಡಬೇಕು' ಎಂದು ಧನಕರ್ ಸಲಹೆ ಮಾಡಿದರು.
'ತನ್ನ ಸಾಧನೆ, ದೇಶದ ಪ್ರತಿಭೆ ಕುರಿತು ಭಾರತಕ್ಕೆ ಹೆಮ್ಮೆ ಇದೆ. ವಿದ್ಯಾರ್ಥಿಗಳು ಇದನ್ನು ಸರಿಯಾಗಿ ಬಿಂಬಿಸುವ ರಾಯಭಾರಿಗಳಂತೆ ಇರಬೇಕು' ಎಂದು ಕರೆ ನೀಡಿದರು.
'ಭಾರತದಲ್ಲಿ ಇರುವುವಂತೆ ಅಭಿವ್ಯಕ್ತಿ ಸ್ವಾತಂತ್ರ್ಯ ಯಾವುದೇ ದೇಶದಲ್ಲಿಯೂ ಇಲ್ಲ. ಪ್ರಜಾಸತ್ತಾತ್ಮಕ ಮೌಲ್ಯಗಳು ವಿಕಸನಗೊಳ್ಳುತ್ತಿವೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಪ್ರಜಾಪ್ರಭುತ್ವವು ಬಲಗೊಳ್ಳುತ್ತಿದೆ' ಎಂದು ಪ್ರತಿಪಾದಿಸಿದರು.
'ಭಾರತವು ತನ್ನ ಅರಿವಿನ ಮಿತಿಯಲ್ಲಿ, ದೇಶದ ಅಭಿವೃದ್ಧಿ ಹಾಗೂ ಜಗತ್ತಿನ ಶಾಂತಿಗಾಗಿ ಜಾಗತಿಕ ವ್ಯವಹಾರಗಳಲ್ಲಿ ಮುಂಚೂಣಿ ಸ್ಥಾನವನ್ನು ವಹಿಸುತ್ತಿದೆ' ಎಂದು ಅವರು ಹೇಳಿದರು.