HEALTH TIPS

ಬೇಸಿಗೆಯಲ್ಲಿ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳದೇ ಹೋದರೆ ಅಪಾಯ ಕಟ್ಟಿಟ್ಟ ಬುತ್ತಿ!

 ಇದಂತೂ ಡಿಜಿಟಲ್ ಯುಗ. ನಾವು ಯಾವುದೇ ಕೆಲಸ ಮಾಡುವುದಿದ್ದರೂ ಡಿಜಿಟಲ್ ಸಾಧನಗಳ ಮೂಲಕವೇ ಮಾಡುತ್ತೇವೆ. ಕಚೇರಿಯ ಕೆಲಸ ಇರಬಹುದು, ಹಣಕಾಸಿನ ವ್ಯವಹಾರ ಇರಬಹುದು ಎಲ್ಲವೂ ಮೊಬೈಲ್ ಹಾಗೂ ಕಂಪ್ಯೂಟರ್ ಸ್ಕ್ರೀನ್ ನೋಡಿ ಮಾಡಬೇಕು ಅಂದರೆ ಇಲ್ಲಿ ಕಣ್ಣಿಗೆ ಎಷ್ಟು ಒತ್ತಡ ಬೀಳುತ್ತದೆ ಎಂಬುದು ನಿಮಗೂ ಅರಿವಿರಬಹುದು. ಇದರ ಜೊತೆಗೆ ವಾತಾವರಣದಲ್ಲಿಯೂ ಬಿಸಿ ಹೆಚ್ಚಾಗಿದೆ.

ಬೇಸಿಗೆ ಮುಗಿಯುವ ಲಕ್ಷಣವೇ ಇಲ್ಲ. ಇದೇ ರೀತಿ ಉಷ್ಣಾಂಶ ಮುಂದುವರೆದರೆ ಅದು ಕಣ್ಣಿನ ಆರೋಗ್ಯದ ಮೇಲೆಯೂ ಪರಿಣಾಮ ಬೀರಬಹುದು ಎಂಬುದನ್ನು ನೀವು ಗಮನಿಸಬೇಕು. ಹಾಗಾಗಿ ಈ ಬೇಸಿಗೆಯಲ್ಲಿ ಅದರಲ್ಲೂ ಕಂಪ್ಯೂಟರ್ ಪರದೆಯನ್ನು ಸದಾ ನೋಡುವವರು ನೀವಾಗಿದ್ದರೆ ಕೆಲವು ಪ್ರಮುಖ ಆರೋಗ್ಯ ಸಲಹೆಗಳ ಮೂಲಕ ಕಣ್ಣಿನ ಆರೋಗ್ಯವನ್ನು ರಕ್ಷಿಸಿಕೊಳ್ಳಿ.

ಕಣ್ಣು ಕಾಣದೆ ಇದ್ದಾಗ ಮಾತ್ರ ವೈದ್ಯರ ಬಳಿ ಹೋಗುವುದಲ್ಲ ಕಣ್ಣಿನ ಆರೋಗ್ಯ ಚೆನ್ನಾಗಿರಬೇಕು ಅಂದ್ರೆ ನಿಯಮಿತ ಕಣ್ಣಿನ ತಪಾಸಣೆ ಕೂಡ ಬಹಳ ಮುಖ್ಯ. ಕಣ್ಣಿನ ತಜ್ಞರ ಪ್ರಕಾರ ಮ್ಯಾಕ್ಯುಲರ್ ಡಿಜಿನೇರೇಷನ್ ಹಾಗೂ ಡಯಾಬಿಟಿಕ್ ರೆಟಿನೋಪತಿ ಅಂತಹ ರಟೀನಾದ ಕಾಯಿಲೆಗಳು ವಯಸ್ಸಿಗೆ ಸಂಬಂಧಿಸಿದಂತೆ ನಮಗೆ ಅಪಾಯ ಉಂಟುಮಾಡಬಲ್ಲದು.

ಎ ಎಮ್ ಡಿ ಸಮಸ್ಯೆ:
ಇದು ದೃಷ್ಟಿಗೆ ಸಂಬಂಧಿಸಿದ ಸಮಸ್ಯೆಯಾಗಿದೆ. ನಮ್ಮ ಕಣ್ಣಿನ ದೃಷ್ಟಿಗೆ ಕಾರಣವಾದ ರೆಟಿನಾದ ಕೇಂದ್ರ ಭಾಗವಾಗಿರುವ ಮ್ಯಾಕ್ಯುಲಾ ಮೇಲೆ ಎ ಎಂ ಡಿ ಪರಿಣಾಮ ಬೀರಬಲ್ಲದು. ಅಂದರೆ ವಯಸ್ಸಾದವರಲ್ಲಿ ದೃಷ್ಟಿ ಕಳೆದುಕೊಳ್ಳುವ ಪರಿಸ್ಥಿತಿ ಉಂಟಾಗುತ್ತದೆ. ಅಷ್ಟೇ ಅಲ್ಲದೆ ಇತ್ತೀಚಿಗೆ ಡಯಾಬಿಟಿಕ್ ರೆಟಿನೋಪತಿ ಎನ್ನುವ ರೆಟಿನಾ ಸಮಸ್ಯೆಗಳು ಕೂಡ ಹೆಚ್ಚಾಗಿದೆ. ರೆಟಿನಾದಲ್ಲಿರುವ ರಕ್ತನಾಳಗಳನ್ನು ಹಾನಿಗೊಳಿಸುವ ಹಾಗೂ ದೃಷ್ಟಿ ಕಳೆದುಕೊಳ್ಳುವ ಸ್ಥಿತಿ ಇದು.

ಕಣ್ಣಿನ ಆರೋಗ್ಯದ ಬಗ್ಗೆ ವೈದ್ಯರ ಸಲಹೆ:
ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ರೆಟಿನಾದ ಕಾಯಿಲೆಗಳನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಮಾಡಿ ಚಿಕಿತ್ಸೆ ನೀಡುವುದು ಬಹಳ ಮುಖ್ಯ ಸೂರ್ಯನ ಕಿರಣಗಳಿಗೆ ಒಡ್ಡಿಕೊಳ್ಳುವುದು ದೀರ್ಘಾವಧಿಯವರೆಗೆ ಡಿಜಿಟಲ್ ಸಾಧನಗಳನ್ನು ನೋಡುವುದು ಕಣ್ಣುಗಳಿಗೆ ಒತ್ತಡವನ್ನು ಉಂಟುಮಾಡುತ್ತವೆ. ಹಾಗಾಗಿ ನಿಯಮಿತವಾಗಿ ಕಣ್ಣಿನ ತಪಾಸಣೆ ಮಾಡುತ್ತಿದ್ದರೆ ಸಂಭಾವ್ಯ ಸಮಸ್ಯೆಗಳು ಉಂಟಾದರೆ ಅವುಗಳನ್ನು ಕೂಡಲೇ ಪತ್ತೆ ಹಚ್ಚಿ ಆ ಸಮಸ್ಯೆಯನ್ನು ಪರಿಹಾರ ಮಾಡಬಹುದು. ಇಲ್ಲವಾದರೆ ದೃಷ್ಟಿ ನಷ್ಟ ಉಂಟಾಗಬಹುದು.

30ರಷ್ಟು ರೋಗಿಗಳು ರೆಟಿನಾ ಕಾಯಿಲೆಗಳಿಂದ ತೀವ್ರ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹಾಗಾಗಿ ಎ ಎಂ ಡಿ ಹಾಗೂ ಡಯಾಬಿಟಿಕ್ ರೆಟಿನೋಪತಿ ಅಂತಹ ಸಮಸ್ಯೆಗಳಿಗೆ ಚಿಕಿತ್ಸೆಯನ್ನು ತಕ್ಷಣ ಪಡೆದುಕೊಳ್ಳುವುದು ಬಹಳ ಅಗತ್ಯ. ಇಲ್ಲವಾದರೆ ಮಿಂಚಿಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ ಎನ್ನುವಂತೆ ದೃಷ್ಟಿ ಕಳೆದುಕೊಂಡ ಮೇಲೆ ಮತ್ತೆ ದೃಷ್ಟಿ ಪಡೆದುಕೊಳ್ಳಲು ಸಾಧ್ಯವಿಲ್ಲ ಎಂಬುದು ವೈದ್ಯರ ಅಭಿಪ್ರಾಯ.

ಹಾಗಾದ್ರೆ ಬೇಸಿಗೆಯಲ್ಲಿ ಕಣ್ಣಿನ ಸಮಸ್ಯೆ ಆಗದಂತೆ ರಕ್ಷಿಸಿಕೊಳ್ಳುವುದು ಹೇಗೆ ನೋಡೋಣ.
ಸೂರ್ಯನ ಬೆಳಕಿಗೆ ದೀರ್ಘಕಾಲ ಕಣ್ಣನ್ನು ಒಡ್ದಬೇಡಿ:
ಸೂರ್ಯನ ನೇರಳಾತೀತ ಯುವಿ ಕಿರಣಗಳು ಕಣ್ಣಿಗೆ ಹೆಚ್ಚು ಹಾನಿ ಉಂಟು ಮಾಡಬಲ್ಲದು. ಅದರಲ್ಲೂ ಈ ಅತಿಯಾದ ಉಷ್ಣಾಂಶದ ಸಮಯದಲ್ಲಿ ಬೆಳಿಗ್ಗೆ 10 ರಿಂದ ಸಂಜೆ 4ರ ವರೆಗಿನ ಸೂರ್ಯನ ಕಿರಣಗಳು ಕಣ್ಣಿಗೆ ಹೆಚ್ಚು ಸಮಸ್ಯೆ ಉಂಟುಮಾಡಬಲ್ಲದು. ನೀವು ಈ ಅವಧಿಯಲ್ಲಿ ಹೊರಗೆ ಹೋಗುವುದಾದರೆ ಯು ವಿ ಕಿರಣಗಳನ್ನು ತಡೆಯ ಬಲ್ಲ ಟೋಪಿಗಳು ಹಾಗೂ ಸನ್ ಗ್ಲಾಸ್ ಗಳನ್ನು ಧರಿಸುವುದು ಬಹಳ ಮುಖ್ಯ. ಈ ರೀತಿ ಮಾಡುವುದರಿಂದ ಕಣ್ಣಿಗೆ ಸೂರ್ಯನ ನೇರಳಾತೀತ ಕಿರಣಗಳು ಹಾನಿ ಮಾಡದಂತೆ ರಕ್ಷಿಸಿಕೊಳ್ಳಬಹುದು. ಕಣ್ಣಿನ ಪೊರೆಗಳ ಮೇಲೆ ನೇರವಾಗಿ ಸೂರ್ಯನ ಕಿರಣಗಳು ಬೀಳದಂತೆ ಎಚ್ಚರ ವಹಿಸಿ.

ಡಿಜಿಟಲ್ ಸಾಧನ ಬಳಸುವಾಗ ವಿರಾಮ ಬೇಕು:
ಕೆಲವೊಮ್ಮೆ ಸಾಕಷ್ಟು ಜನ ನಿರಂತರವಾಗಿ ಡಿಜಿಟಲ್ ಸಾಧನಗಳನ್ನು ಬಳಕೆ ಮಾಡುತ್ತಾರೆ. ಅದರಲ್ಲೂ ಕಚೇರಿ ಕೆಲಸ ಮಾತ್ರವಲ್ಲದೆ ಮಕ್ಕಳು ಗೇಮಿಂಗ್ ಗಾಗಿ ಡಿಜಿಟಲ್ ಸಾಧನಗಳಾದ ಮೊಬೈಲ್, ಕಂಪ್ಯೂಟರ್ ಕೊರತೆಯನ್ನು ನಿರಂತರವಾಗಿ ನೋಡುತ್ತಾರೆ. ಇದರಿಂದ ಕಣ್ಣಿಗೆ ಬಹಳ ದೊಡ್ಡ ಸಮಸ್ಯೆ ಉಂಟಾಗಬಹುದು. ಹಾಗಾಗಿ ಕನಿಷ್ಠ ಪ್ರತಿ 20 ನಿಮಿಷಗಳಿಗೊಮ್ಮೆ ಕಣ್ಣಿಗೆ ವಿರಾಮವನ್ನು ನೀಡಬೇಕು. ಕಂಪ್ಯೂಟರ್ ವರದಿಯನ್ನು ನೋಡದೆ, ಬೇರೆ ಕಡೆಗೆ ದೃಷ್ಟಿ ಕಣ್ಣಿನ ದೃಷ್ಟಿ ಹರಿಸಬೇಕು. ಪ್ರತಿ 20 ನಿಮಿಷಗಳಿಗೆ 20 ಸೆಕೆಂಡ್ ಗಳಾದರೂ ಕಣ್ಣಿಗೆ ವಿರಾಮ ನೀಡಿದರೆ ಕಣ್ಣಿನ ಆಯಾಸ ಸ್ವಲ್ಪವಾದರೂ ಕಡಿಮೆಯಾಗುತ್ತದೆ. ಇಲ್ಲವಾದರೆ ಡಿಜಿಟಲ್ ಕಣ್ಣಿನ ಒತ್ತಡ ತಡೆಯಲು ಸಾಧ್ಯವಿಲ್ಲ ಜೊತೆಗೆ ಇದರಿಂದ ಕಣ್ಣಿನ ಸಮಸ್ಯೆ ಕೂಡ ಉದ್ಭವಿಸುತ್ತದೆ.

ಯುವಿ ರಕ್ಷಣೆ ಇರುವ ಸನ್ ಗ್ಲಾಸ್ ಧರಿಸಿ:
ಸನ್ ಗ್ಲಾಸ್ ಧರಿಸುವುದು ಅಥವಾ ಕಣ್ಣಿಗೆ ಕಪ್ಪನೆಯ ಕನ್ನಡಕ ಧರಿಸುವುದು ಕೇವಲ ಫ್ಯಾಶನ್ ಗಾಗಿ ಮಾತ್ರವಲ್ಲ ಅದು ಕಣ್ಣಿನ ರಕ್ಷಣೆಯನ್ನು ಮಾಡಬೇಕು ನೀವು ಬಿರು ಬಿಸಿಲಿನಲ್ಲಿ ಹೊರಗಡೆ ಹೋಗುವುದಾದರೆ ಯು ವಿ ರಕ್ಷಣೆ ನೀಡುವಂತಹ ಸನ್ ಗ್ಲಾಸ್ ಧರಿಸಬೇಕು. ಇದರಿಂದ ಕಣ್ಣಿಗೆ ರಕ್ಷಣೆ ದೊರೆಯುತ್ತದೆ.

ನಿಯಮಿತ ಕಣ್ಣಿನ ತಪಾಸಣೆ:
ಮೇಲ್ನೋಟಕ್ಕೆ ಕಣ್ಣಿನಲ್ಲಿ ಸಮಸ್ಯೆ ಇಲ್ಲದೆ ಇದ್ದರೂ ನಿಯಮಿತವಾಗಿ ಕಣ್ಣಿನ ತಪಾಸಣೆ ಮಾಡಿಸುವುದು ಬಹಳ ಮುಖ್ಯ ಅದರಲ್ಲೂ ಮಧುಮೇಹ ಹೊಂದಿರುವವರು ಕಣ್ಣಿನ ಪರೀಕ್ಷೆಯನ್ನು ಮಾಡಿಸಲೇಬೇಕು. ಮಧುಮೇಹ ಹೊಂದಿರುವವರಿಗೆ ಡಯಾಬಿಟಿಕ್ ರೆಟಿನೋಪತಿಯಂತಹ ಸಮಸ್ಯೆ ಅಕ್ಷಿಪಟಲದ ಕಾಯಿಲೆಯನ್ನು ಹೆಚ್ಚಿಸಬಹುದು. ಆರಂಭಿಕ ಹಂತದಲ್ಲಿಯೇ ನೀವು ಇದನ್ನು ಕಂಡುಹಿಡಿದುಕೊಂಡರೆ ಶಾಶ್ವತವಾಗಿ ದೃಷ್ಟಿ ಕಳೆದುಕೊಳ್ಳುವಂತಹ ಸಮಸ್ಯೆಯಿಂದ ತಪ್ಪಿಸಿಕೊಳ್ಳಬಹುದು. ಹಾಗಾಗಿ ಕಣ್ಣಿನ ವೈದ್ಯರನ್ನು ಸಂಪರ್ಕ ಮಾಡಿ ಕಣ್ಣಿನ ಸಾಮಾನ್ಯ ತಪಾಸಣೆ ಮಾಡಿಸಿಕೊಳ್ಳುವುದು ಬಹಳ ಮುಖ್ಯ.

ಕಣ್ಣಿನ ದೃಷ್ಟಿ ಚೆನ್ನಾಗಿರಬೇಕು ಕಣ್ಣಿನ ಆರೋಗ್ಯ ಉತ್ತಮವಾಗಿರಬೇಕು ಅಂದ್ರೆ ಬೇಸಿಗೆಕಾಲದಲ್ಲಿ ಕಣ್ಣಿನ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ವಹಿಸಬೇಕು. ದೀರ್ಘಾವಧಿಗೆ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದಾಗಲಿ ನಿರಂತರವಾಗಿ ಡಿಜಿಟಲ್ ಸಾಧನಗಳನ್ನು ಬಳಕೆ ಮಾಡುವುದಾಗಲಿ ತಪ್ಪಿಸಬೇಕು.

ಕಣ್ಣಿಗೆ ರಕ್ಷಣೆ ನೀಡುವಂತಹ ಸನ್ ಗ್ಲಾಸ್ ಬಳಸಿ ಹೊರಗಡೆ ಹೋಗುವುದು ನಿಯಮಿತವಾಗಿ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳುವುದು ಕಣ್ಣಿಗೆ ಸಂಬಂಧಿಸಿದ ವ್ಯಾಯಾಮ ಮಾಡುವುದು ಹೀಗೆ ಕೆಲವು ಸಣ್ಣಪುಟ್ಟ ಕಾಳಜಿಯನ್ನು ನೀವು ಮಾಡಿದರೆ ಕಣ್ಣಿನಲ್ಲಿ ಉಂಟಾಗುವ ಯಾವುದೇ ಸಮಸ್ಯೆಯಿಂದ ನೀವು ದೂರ ಇರಬಹುದು. ಊಟಕ್ಕೆ ಉಪ್ಪಿಲ್ಲದೆ ಊಟ ಹೇಗೆ ರುಚಿಸುವುದಿಲ್ಲವೋ ಮನುಷ್ಯನಿಗೆ ಕಣ್ಣಿನ ದೃಷ್ಟಿ ಇಲ್ಲದೆ ಇದ್ದರೂ ಆತನ ಜೀವನವೇ ಕತ್ತಲಾಗುತ್ತದೆ ಎಂಬುದು ನೆನಪಿರಲಿ.


Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries