ಮಧೂರು: ನೀರಾಳ ಶ್ರೀ ಪಿಲಡ್ಕತ್ತಾಯ ದೈವಸ್ಥಾನದ ಪುನರ್ ಪ್ರತಿಷ್ಠಾ ಕಲಶೋತ್ಸವದಂಗವಾಗಿ ಧಾರ್ಮಿಕ ಸಭಾ ಕಾರ್ಯಕ್ರಮ ಜರಗಿತು. ಕಾರ್ಯಕ್ರಮವನ್ನು ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ದೀಪ ಬೆಳಗಿಸಿ ಉದ್ಘಾಟನೆಗೈದು ಆಶೀರ್ವಚನ ನೀಡಿ, ನಮ್ಮ ಪರಿಸರದ ದೈವಿಕ ಕಾರ್ಯಗಳಲ್ಲಿ ಪ್ರತಿಯೊಬ್ಬರು ಕೈಜೋಡಿಸುವುದರಿಂದ ನಾಡಿನ ಶಾಂತಿ ಸುಭಿಕ್ಷೆ ಸುವ್ಯವಸ್ಥಿತವಾಗಲು ಸಾಧ್ಯ ಎಂದರು.
ಪ್ರತಿಷ್ಠಾ ಕಲಶೋತ್ಸವ ಸಮಿತಿ ಅಧ್ಯಕ್ಷ ಕೆ.ಎನ್.ವೆಂಕಟ್ರಮಣ ಹೊಳ್ಳ ಅಧ್ಯಕ್ಷತೆವಹಿಸಿ ಮಾತನಾಡಿ, ಧಾರ್ಮಿಕ ಶ್ರದ್ಧಾ ಕೇಂದ್ರದ ಜೀರ್ಣೋದ್ಧಾರ ಹಾಗೂ ಪ್ರತಿಷ್ಠಾ ಕಾರ್ಯದಿಂದ ದೈವಿಕ ಚೈತನ್ಯ ಮರು ಸ್ಥಾಪನೆಯೊಂದಿಗೆ ಮಾನವ ಚೈತನ್ಯ ಪುನರ್ಜೀವನಕ್ಕೆ ದಾರಿ ದೀಪವಾಗಬಲ್ಲುದು ಎಂದರು. ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರ, ಮಧೂರು ಗ್ರಾ.ಪಂ.ಅಧ್ಯಕ್ಷ ಕೆ.ಗೋಪಾಲಕೃಷ್ಣ, ಬೆದ್ರಡ್ಕ ಶ್ರೀಪೂಮಾಣಿ ಕಿನ್ನಿಮಾಣಿ ದೈವಸ್ಥಾನದ ಮೊಕ್ತೇಸರ ಸೀತಾರಾಮ ಬಲ್ಲಾಳ, ಕೃಷ್ಣ ಹೊಳ್ಳ ನೀರಾಳ ಸಭೆಯಲ್ಲಿ ಉಪಸ್ಥಿತರಿದ್ದರು.
ಪದ್ಮನಾಭ ಹೊಳ್ಳ ನೀರಾಳ ಸ್ವಾಗತಿಸಿ, ಪ್ರಶಾಂತ್ ಹೊಳ್ಳ ನೀರಾಳ ವಂದಿಸಿದರು. ಮೋಹನ್ ಕುಮಾರ್ ಶೆಟ್ಟಿ ಅಡ್ಕ ಸಿರಿಬಾಗಿಲು ನಿರೂಪಿಸಿದರು.