ಚೆನ್ನೈ: ದೇಶಾದ್ಯಂತ ವಿವಾದದ ಕಿಡಿ ಹೊತ್ತಿಸಿರುವ ಲವ್ ಜಿಹಾದ್ ಆಧಾರಿತ ಸಿನಿಮಾ ದಿ ಕೇರಳ ಸ್ಟೋರಿ ಚಿತ್ರವು ರಾಷ್ಟ್ರಮಟ್ಟದಲ್ಲಿ ಪರ-ವಿರೋಧದ ಚರ್ಚೆ ಹುಟ್ಟು ಹಾಕಿದೆ.
ಚೆನ್ನೈ: ದೇಶಾದ್ಯಂತ ವಿವಾದದ ಕಿಡಿ ಹೊತ್ತಿಸಿರುವ ಲವ್ ಜಿಹಾದ್ ಆಧಾರಿತ ಸಿನಿಮಾ ದಿ ಕೇರಳ ಸ್ಟೋರಿ ಚಿತ್ರವು ರಾಷ್ಟ್ರಮಟ್ಟದಲ್ಲಿ ಪರ-ವಿರೋಧದ ಚರ್ಚೆ ಹುಟ್ಟು ಹಾಕಿದೆ.
ಇನ್ನು ಚಿತ್ರದ ಕುರಿತು ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ಇದೀಗ ಸಿನಿಮಾ ತಂಡಕ್ಕೆ ಆಘಾತ ಒಂದು ಎದುರಾಗಿದ್ದು ಇದನ್ನು ಹೇಗೆ ನಿಭಾಯಿಸಲಿದೆ ಎಂದು ಕಾದು ನೋಡಬೇಕಿದೆ.
ಪ್ರದರ್ಶಿಸದಿರಲು ನಿರ್ಧಾರ
ದಿ ಕೇರಳ ಸ್ಟೋರಿ ಚಿತ್ರವು ಬಿಡುಗಡೆಗೂ ಮುನ್ನ ಹಾಗೂ ನಂತರ ಸಾಕಷ್ಟು ವಿವಾದವನ್ನು ಹುಟ್ಟುಹಾಕಿದ್ದು ಸಿನಿಮಾವನ್ನು ಪ್ರದರ್ಶಿಸದಿರಲು ತಮಿಳುನಾಡು ಚಿತ್ರಮಂದಿರ ಹಾಗೂ ಮಲ್ಟಿಪ್ಲೆಕ್ಸ್ ಮಾಲೀಕರು ನಿರ್ಧರಿಸಿದ್ದಾರೆ.
ಚಿತ್ರವನ್ನು ಪ್ರದರ್ಶಿಸಿದರೆ ಬೇರೆ ಚಿತ್ರಗಳ ಮೇಲೆ ಹೊಡೆತ ಬೀಳುತ್ತದೆ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಾಗೂ ನಮ್ಮ ಆದಾಯದ ಮೇಲೆ ಯಾವುದೇ ಪರಿಣಾಮ ಬೀಳದಂತೆ ನೋಡಿಕೊಳ್ಳಲು ಚಿತ್ರವನ್ನು ಪ್ರದರ್ಶಿಸುವುದಿಲ್ಲ ಎಂದು ಸಂಘದ ಸದಸ್ಯರು ತಿಳಿಸಿದ್ದಾರೆ.
ಸರ್ಕಾರದಿಂದ ನಿಷೇಧ
ಕೋಮು ಸೌಹಾರ್ದತೆ ಕದಡುವ ಭೀತಿಯಲ್ಲಿ ದಿ ಕೇರಳ ಸ್ಟೋರಿ ಚಿತ್ರವನ್ನು ತಮಿಳುನಾಡು ಸರ್ಕಾರ ನಿಷೇಧಿಸಿ ಆದೇಶ ಹೊರಡಿಸಿದೆ.
ತಮಿಳುನಾಡಿನಲ್ಲಿ ಚಿತ್ರ ಬಿಡುಗಡೆಯಾದರೆ ಬೇರೆ ಚಿತ್ರಗಳ ಪ್ರದರ್ಶನ ಹಾಗೂ ಆದಾಯದ ಮೇಲೆ ಹೊಡೆತ ಬೀಳಲಿದೆ ಎಂದು ಸರ್ಕಾರ ಹೊರಡಿಸಿರುವ ಆದೇಶ ಪತ್ರದಲ್ಲಿ ತಿಳಿಸಲಾಗಿದೆ.