ಕುಂಬಳೆ: ಶತಮಾನಗಳ ಫುಟ್ಬಾಲ್ ಇತಿಹಾಸ ಹೊಂದಿರುವ ಮೊಗ್ರಾಲ್ ಶಾಲಾ ಮೈದಾನ ಮತ್ತೆ ಐದು ದಿನಗಳ ಕಾಲದ ಫುಟ್ಬಾಲ್ ಸಂಭ್ರಮಕ್ಕೆ ಸಾಕ್ಷಿಯಾಗಲಿದೆ. ನೂರು ವರ್ಷಗಳನ್ನು ಪೂರೈಸಿರುವ ಜಿಲ್ಲೆಯ ಕೆಲವೇ ಕೆಲವು ಕ್ಲಬ್‍ಗಳಲ್ಲಿ ಒಂದಾದ ಅಲ್ ಮುತಕಮಲ್-ಮೊಗ್ರಾಲ್ ಬ್ರದರ್ಸ್ ಮೊಗ್ರಾಲ್ ಆಯೋಜಿಸಿರುವ ಎಎಮ್‍ಡಬ್ಲ್ಯು "ಸೂಪರ್ ಕಪ್' ಸೆವೆನ್ಸ್ ಫ್ಲಡ್‍ಲೈಟ್ ಫುಟ್‍ಬಾಲ್ ಟೂರ್ನಮೆಂಟ್ ಸೀಸನ್-3 ನ್ನು ವಿಶೇಷವಾಗಿ ವಿನ್ಯಾಸಗೊಳಿಸಿದ ಎಸ್ಸಾದಲ್ಲಿ ಬುಧವಾರ ನಡೆಯಲಿದೆ. ಮೇ.7ರಂದು ಸಮಾರೋಪ ನಡೆಯಲಿದೆ. ಮೊಗ್ರಾಲ್ ಪುಟ್ ಬಾಲ್ ಆಚಾರ್ಯ ಮುಹಮ್ಮದ್ ಅವರ ಸ್ಮರಣಾರ್ಥ ಸ್ಪೈಸಿ ಕೆಫೆ-ರಾಕಿ ಸ್ಟಾರ್ ಸಹಯೋಗದಲ್ಲಿ ಪಂದ್ಯಾವಳಿಯನ್ನು ಆಯೋಜಿಸಲಾಗುತ್ತಿದೆ.ಎಸ್ ಆರ್ ಗ್ರೂಪ್ ಮತ್ತು ಪ್ಲೇ ಆಫ್ ಉಪ್ಪಳ ಮುಖ್ಯ ಪ್ರಾಯೋಜಕತ್ವ ವಹಿಸಿದೆ.
8 ತಂಡಗಳ ಪಂದ್ಯಾವಳಿಯಲ್ಲಿ ವಿವಿಧ ತಂಡಗಳಿಗಾಗಿ ದೇಶ ಮತ್ತು ವಿದೇಶಿ ಆಟಗಾರರು ಆಡಲಿದ್ದಾರೆ. ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗುತ್ತದೆ. 7ರಂದು ನಡೆಯುವ ಫೈನಲ್‍ನಲ್ಲಿ ವಿಜೇತರಾದವರಿಗೆ ಡಾಕ್ಟರ್ಸ್ ಆಸ್ಪತ್ರೆ ಪ್ರಾಯೋಜಕತ್ವದ ಟ್ರೋಫಿಯನ್ನು ನೀಡಲಾಗುವುದು.
ರೋಚಕ ಕದನಕ್ಕೂ ಮುನ್ನ ಮೊಗ್ರಾಲ್ ಮಜಿಲಿಸ್ ರೆಸ್ಟೋರೆಂಟ್ ಕಾಂಪೌಂಡ್ ನಲ್ಲಿ ಸ್ಟಾರ್ ಹರಾಜು ಪ್ರಕ್ರಿಯೆ ನಡೆಯಿತು. ಸೈಫುದ್ದೀನ್ ಮೊಗ್ರಾಲ್, ಕ್ರೀಡಾ ಕ್ಲಬ್ ಪದಾಧಿಕಾರಿಗಳು ನೇತೃತ್ವ ವಹಿಸಿದ್ದರು. ತಂಡದ ವ್ಯವಸ್ಥಾಪಕರು, ಆಟಗಾರರು ಇತ್ಯಾದಿಗಳಿದ್ದರು.
ಆಟ ವೀಕ್ಷಿಸಲು ಪ್ರವೇಶ ಉಚಿತವಾಗಿರುತ್ತದೆ ಎಂದು ಮೊಗ್ರಾಲ್ ಸ್ಪೋಟ್ರ್ಸ್ ಕ್ಲಬ್ ಅಧ್ಯಕ್ಷ ಅನ್ವರ್ ಅಹಮದ್ ಎಸ್ ಹಾಗೂ ಪ್ರಧಾನ ಕಾರ್ಯದರ್ಶಿ ಆಸಿಫ್ ಇಕ್ಬಾಲ್ ತಿಳಿಸಿದ್ದಾರೆ.