ಲಖನೌ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರೊಂದಿಗೆ ಶುಕ್ರವಾರ ಮೈನ್‌ಪುರಿಯಲ್ಲಿ ಮಾಜಿ ಕೇಂದ್ರ ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಕ ದಿ. ಮಾಧವರಾವ್ ಸಿಂಧಿಯಾ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು.
ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದ ಯುಪಿ ಸಿಎಂ, ಮಾಜಿ ಕೇಂದ್ರ ಸಚಿವ ಮಾಧವರಾವ್ ಸಿಂಧಿಯಾ ಅವರು 22 ವರ್ಷಗಳ ಹಿಂದೆ ವಿಮಾನ ಅಪಘಾತದಲ್ಲಿ ನಿಧನರಾಗುವ ಮುನ್ನ 'ದೇಶದ ರಾಜಕೀಯದಲ್ಲಿ ಉದಯೋನ್ಮುಖ ವ್ಯಕ್ತಿಯಾಗಿದ್ದರು' ಎಂದು ಬಣ್ಣಿಸಿದರು. "ಅವರು ಸಮಾಜದ ಪ್ರತಿಯೊಂದು ವರ್ಗದ ಜನರ ಹೃದಯಲ್ಲಿದ್ದರು" ಎಂದು ಯೋಗಿ ಹೇಳಿದರು.
ಸಿಂಧಿಯಾ ಹಾಗೂ ಇತರ ಏಳು ಮಂದಿಯನ್ನು ಹೊತ್ತ ಖಾಸಗಿ ವಿಮಾನ ಸೆಪ್ಟೆಂಬರ್ 30, 2001 ರಂದು ಮೈನ್‌ಪುರಿಯ ಭೋಂಗಾವ್ ತಹಸಿಲ್‌ನ ಮೋಟಾ ಗ್ರಾಮದ ಬಳಿ ಪತನಗೊಂಡಿತ್ತು. ಮಾಧವರಾವ್ ಸಿಂಧಿಯಾ ಅವರು ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಲು ಕಾನ್ಪುರಕ್ಕೆ ತೆರಳುತ್ತಿದ್ದರು.
ಮನವಿ:ಸನ್ಮನಸ್ಸಿನ ಓದುಗರೇ, ಸಮರಸ ಸುದ್ದಿ ದಿನನಿತ್ಯ ಓದುಗರಿಗೆ ಬಹುತೇಕ ಸಕಾಲಿಕ ಮತ್ತು ಖಚಿತ ವರದಿಗಳಿಂದ ಇಂದಿನ ಆಧುನಿಕ ಸುದ್ದಿ ಮಾಧ್ಯಮ ಕ್ಷೇತ್ರದಲ್ಲಿ ಹೆಮ್ಮೆಯಿಂದ ಪ್ರಕಟಗೊಳ್ಳುತ್ತಿದೆ. ಪ್ರಸ್ತುತ ಸಮಸರಸ ಸುದ್ದಿಯ ಸಮಗ್ರ ತಾಂತ್ರಿಕ ನವೀಕರಣಕ್ಕಾಗಿ ಆರ್ಥಿಕ ಅಡಚಣೆಯಿಂದ ಸಹೃದಯ ಓದುಗರು, ಅಭಿಮಾನಿಗಳು ಕನಿಷ್ಠ 100/- ವಿನಂತಾದರೂ ಹೆಗಲು ನೀಡಿದರೆ ಸಹಕಾರಿಯಾಗುವುದೆಂದು ನಂಬಿದ್ದೇವೆ. ಮೇ.29 ಸೋಮವಾರ ಸಂಜೆ 5ರ ಮೊದಲು ಈ ಸಹಾಯ ನಿಮ್ಮಿಂದ ಲಭ್ಯವಾದಲ್ಲಿ ನಾವು ಅಭಾರಿ.
ಸಲ್ಲಿಕೆಯಾಗಬೇಕಾದ ಖಾತೆ ಮಾಹಿತಿ:
ಗೂಗಲ್ ಪೇ: 7907952070
ಬ್ಯಾಂಕ್ ವಿವರ:
ಸಲ್ಲಿಕೆಯ ನಂತರ ನಮಗೆ(ಮೇಲಿನ ಮೊಬೈಲ್ ಸಂಖ್ಯೆಗೆ) ಮಾಹಿತಿ ನೀಡಿ.