ತಿರುವನಂತಪುರಂ: ಜೈಲಿನಲ್ಲಿ ತನಗೆ ಕಡಿಮೆ ಊಟ ಬಡಿಸುತ್ತಿದ್ದಾರೆ ಎಂದು ಆರೋಪಿಸಿ ಕೈದಿಯೋರ್ವ ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿರುವ ಘಟನೆ ಕೇರಳದಲ್ಲಿ ನಡೆದಿದೆ.
ಮಟನ್ ಕರಿ ಕಡಿಮೆ ನೀಡಿದ್ದಕ್ಕೆ ಜೈಲರ್ಗಳ ಮೇಲೆ ಹಲ್ಲೆ ನಡೆಸಿದ ಆರೋಪಿ!
0
ಮೇ 29, 2023
Tags
ತಿರುವನಂತಪುರಂ: ಜೈಲಿನಲ್ಲಿ ತನಗೆ ಕಡಿಮೆ ಊಟ ಬಡಿಸುತ್ತಿದ್ದಾರೆ ಎಂದು ಆರೋಪಿಸಿ ಕೈದಿಯೋರ್ವ ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿರುವ ಘಟನೆ ಕೇರಳದಲ್ಲಿ ನಡೆದಿದೆ.
ಡ್ರಗ್ಸ್ ಪ್ರಕರಣದಲ್ಲಿ ಶಿಕ್ಷೆ ಎದುರಿಸುತ್ತಿರುವ ವಯನಾಡ್ ಮೂಲದ ಫೈಜಾಸ್ ಎಂಬ ಕೈದಿಯನ್ನು ಪೂಜಾಪುರ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ.
ಅಧಿಕಾರಿಗಳ ಮೇಲೆ ಹಲ್ಲೆ
ಈ ಕುರಿತು ಪ್ರತಿಕ್ರಿಯಿಸಿರುವ ಜೈಲಿನ ಹಿರಿಯ ಅಧಿಕಾರಿ ಒಬ್ಬರು ಶನಿವಾರದ ಮೆನುವಿನ ಪ್ರಕಾರ ಕೈದಿಗಳಿಗೆ ಊಟಕ್ಕೆ ಮಟನ್ ಕರಿಯನ್ನು ನೀಡಲಾಗಿತ್ತು. ಈ ವೇಳೆ ಫೈಜಾಸ್ ತನಗೆ ಕಡಿಮೆ ಆಹಾರ ಬಡಿಸಲಾಗಿದೆ ಎಂದು ಆರೋಪಿಸಿ ತಟ್ಟೆಯನ್ನು ಕಸದ ಬುಟ್ಟಿಗೆ ಎಸೆದಿದ್ದಾನೆ.
ಆಹಾರವನ್ನು ಎಸೆದಿದ್ದನ್ನು ಪ್ರಶ್ನಿಸಿದ ಅಧಿಕಾರಿಗಳ ಮೇಲೆ ಆರೋಪಿಯೂ ಏಕಾಏಕಿ ದಾಳಿ ಮಾಡಿದ್ದು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ. ಜೈಲಿನ ಅಧಿಕಾರಿಗಳ ದೂರಿನ ಮೇರೆಗೆ ಪೈಜಾಸ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೂಜಾಪುರ ಪೊಲೀಸರು ತಿಳಿಸಿದ್ದಾರೆ.
ಆರೋಪಿಯೂ ಈ ಹಿಂದೆ ತಾನಿದ್ದ ಜೈಲುಗಳಲ್ಲಿ ಅಧಿಕಾರಿಗಳ ಮೇಲೆ ಹಲವು ಭಾರಿ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾನೆ. ಪೈಜಾಸ್ನನ್ನು ಪ್ರಸ್ತುತ ವಿಶೇಷ ಸೆಲ್ನಲ್ಲಿ ಇರಿಸಲಾಗಿದೆ ಎಂದು ಜೈಲಿನ ಹಿರಿಯ ಅಧಿಕಾರಿ ತಿಳಿಸಿದ್ದಾರೆ.