ನವದೆಹಲಿ:ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಇಲೆಕ್ಟ್ರಾನಿಕ್ ಸಿಗರೇಟ್ಗಳ ನೇರ ಅಥವಾ ಪರೋಕ್ಷ ಉತ್ತೇಜನದ ವಿರುದ್ಧ ಮುದ್ರಣ ಮಾಧ್ಯಮಗಳು, ಟಿವಿ ವಾಹಿನಿಗಳು, ಒಟಿಟಿ ವೇದಿಕೆಗಳು ಮತ್ತು ಡಿಜಿಟಲ್ ಮಾಧ್ಯಮಗಳಿಗೆ ಮಂಗಳವಾರ ಎಚ್ಚರಿಕೆಯನ್ನು ನೀಡಿದೆ.

ಪ್ರಮುಖ ಮಾಧ್ಯಮ ಸಂಸ್ಥೆಯೊಂದು ಇತ್ತೀಚಿಗೆ ದಿಲ್ಲಿಯಲ್ಲಿ ಆಯೋಜಿಸಿದ್ದ ವ್ಯಾಪಾರ ಶೃಂಗಸಭೆಯಲ್ಲಿ ವೇದಿಕೆಯು ಇಲೆಕ್ಟ್ರಾನಿಕ್ ಸಿಗರೇಟ್ಗಳನ್ನು ಉತ್ತೇಜಿಸಲು ಬಳಕೆಯಾಗಿತ್ತು ಎನ್ನುವುದನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಗಮನಕ್ಕೆ ತಂದಿದೆ. ಇಂತಹ ಕೃತ್ಯವು ಇಲೆಕ್ಟ್ರಾನಿಕ್ ಸಿಗರೇಟ್ಗಳ ಬಳಕೆಯನ್ನು ನೇರವಾಗಿ ಅಥವಾ ಪರೋಕ್ಷವಾಗಿ ಉತ್ತೇಜಿಸುವ ಜಾಹೀರಾತುಗಳನ್ನು ನಿಷೇಧಿಸಿರುವ ಇಲೆಕ್ಟ್ರಾನಿಕ್ ಸಿಗರೇಟ್ಗಳ (ಉತ್ಪಾದನೆ, ತಯಾರಿಕೆ, ಆಮದು, ರಫ್ತು, ಸಾಗಾಣಿಕೆ, ಮಾರಾಟ, ವಿತರಣೆ, ದಾಸ್ತಾನು ಮತ್ತು ಜಾಹೀರಾತು) ನಿಷೇಧ ಕಾಯ್ದೆ, 2019ರ ಕಲಂ 4ರ ಉಲ್ಲಂಘನೆಯಾಗುತ್ತದೆ ಎಂದು ಸಚಿವಾಲಯವು ತನ್ನ ಆದೇಶದಲ್ಲಿ ಹೇಳಿದೆ.
ಜಾಹೀರಾತು ಅಥವಾ ಯಾವುದೇ ಉತ್ತೇಜನ ಅಥವಾ ಇತರ ಪ್ರಚಾರಗಳು ಇತ್ಯಾದಿಗಳ ಮೂಲಕ ಸದ್ರಿ ಕಾಯ್ದೆಯ ಉಲ್ಲಂಘನೆಯಾಗುವುದಿಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳುವಂತೆ ಸಚಿವಾಲಯವು ಮುದ್ರಣ,ವಿದ್ಯುನ್ಮಾನ ಮತ್ತು ಡಿಜಿಟಲ್ ಮಾಧ್ಯಮಗಳಿಗೆ ಸೂಚಿಸಿದೆ.