ಕೋಝಿಕ್ಕೋಡ್: ಕಾಂಗ್ರೆಸ್ ಪಕ್ಷವು ಪ್ರತಿಪಕ್ಷಗಳ ಏಕತೆಯನ್ನು ಮುಂಚೂಣಿಯಿಂದ ಮುನ್ನಡೆಸಬೇಕು ಎಂದು ಸಂಸ್ಕøತಿ ಸಚಿವ ಸಾಜಿ ಚೆರಿಯನ್ ಹೇಳಿದ್ದಾರೆ.
ಬಿಜೆಪಿ ಸಾಂವಿಧಾನಿಕ ಮೌಲ್ಯಗಳನ್ನು ನಾಶ ಮಾಡುತ್ತಿದೆ. ಹಾಗಾಗಿ ದೇಶದಲ್ಲಿ ಜಾತ್ಯತೀತತೆ ಗಟ್ಟಿಗೊಳಿಸಲು ಕಾಂಗ್ರೆಸ್ ಪಕ್ಷವು ಮುಂಚೂಣಿಯಿಂದ ಮುನ್ನಡೆಯಬೇಕು ಅದರಲ್ಲಿ ಯಾವುದೇ ಅನುಮಾನ ಬೇಡ ಎಂದು ಸಚಿವರು ಹೇಳಿದರು.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಲಿದೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಹೇಳಿಕೆ ನೀಡಿದ ಬೆನ್ನಲ್ಲೇ ಸಾಜಿ ಚೆರಿಯನ್ ಅವರು ಕಾಂಗ್ರೆಸ್‍ಗೆ ಅನುಕೂಲಕರ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದಾರೆ. ಭಾರತವನ್ನು ಫ್ಯಾಸಿಸಂಗೆ ಕೊಂಡೊಯ್ದ ಮೊದಲ ಪಕ್ಷ ಕಾಂಗ್ರೆಸ್ ಮತ್ತು ತುರ್ತು ಪರಿಸ್ಥಿತಿ ಘೋಷಣೆ ಇದಕ್ಕೆ ಉದಾಹರಣೆಯಾಗಿದೆ ಎಂದು ಗೋವಿಂದನ್ ಪ್ರಸ್ತಾಪಿಸಿದ್ದರು.
ಬಿಜೆಪಿಯನ್ನು ನಾಶಪಡಿಸಲು ತಮ್ಮಿಂದ ಮಾತ್ರ ಸಾಧ್ಯ ಎಂಬ ಅಹಂಕಾರದಿಂದ ಮುಂದಾದರೆ ಕಾಂಗ್ರೆಸ್ ಗೆ ಭಾರೀ ಹೊಡೆತ ಬೀಳಲಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಲಿದೆ ಎಂದು ಗೋವಿಂದನ್ ಹೇಳಿದ್ದಾರೆ.