ಫೂಲ್‌ಬನಿ : 'ಒಡಿಶಾದ ಕಂಧಮಾಲ್ ಜಿಲ್ಲೆಯ ಸೌಲಿಪಾಡಾ ಎಂಬ ಗ್ರಾಮದಲ್ಲಿ ಬುಡಕಟ್ಟು ನಾಯಕನೊಬ್ಬನ್ನು ನಕ್ಸಲರು ಗುಂಡಿಟ್ಟು ಕೊಂದಿದ್ದಾರೆ' ಎಂದು ಪೊಲೀಸರು ಗುರುವಾರ ತಿಳಿಸಿದರು.
ಫೂಲ್‌ಬನಿ : 'ಒಡಿಶಾದ ಕಂಧಮಾಲ್ ಜಿಲ್ಲೆಯ ಸೌಲಿಪಾಡಾ ಎಂಬ ಗ್ರಾಮದಲ್ಲಿ ಬುಡಕಟ್ಟು ನಾಯಕನೊಬ್ಬನ್ನು ನಕ್ಸಲರು ಗುಂಡಿಟ್ಟು ಕೊಂದಿದ್ದಾರೆ' ಎಂದು ಪೊಲೀಸರು ಗುರುವಾರ ತಿಳಿಸಿದರು.
'ಮೃತನನ್ನು ಮಾಜಿ ಸರಪಂಚ್ ಸುಬಲ್ ಕನ್ಹಾರ್ ಎಂದು ಗುರುತಿಸಲಾಗಿದೆ.
'ಸುಬಲ್ ಅವರು ಪೊಲೀಸರಿಗೆ ಮಾಹಿತಿದಾರರಾಗಿ ಕೆಲಸ ಮಾಡುತ್ತಿದ್ದರು ಎಂಬ ಅನುಮಾನದ ಮೇಲೆ ಇಂಥ ಘಟನೆ ನಡೆದಿದೆ' ಎಂದರು.
'ಹಲವು ಬಾರಿ ಮಾವೋವಾದಿಗಳಿಂದ ಬೆದರಿಕೆ ಬಂದಿದ್ದ ಹಿನ್ನೆಲೆಯಲ್ಲಿ ಸುಬಲ್ ಅವರು ಹಳ್ಳಿಯನ್ನು ತೊರೆದು ಕಳೆದ ನಾಲ್ಕು ವರ್ಷಗಳಿಂದ ಬಲ್ಲಿಗುಡ ಎಂಬಲ್ಲಿ ವಾಸಿಸುತ್ತಿದ್ದರು. ಸೌಲಿಪಾಡಾ ಬಳಿ ಹೊಸದಾಗಿ ಸಿಆರ್‌ಪಿಎಫ್ ತುಕಡಿಯೊಂದನ್ನು ನಿಯೋಜಿಸಿದ ಹಿನ್ನೆಲೆಯಲ್ಲಿ ಕೆಲವು ತಿಂಗಳ ಹಿಂದೆ ಸುಬಲ್ ಗ್ರಾಮಕ್ಕೆ ಮರಳಿದ್ದರು' ಎಂದು ಸ್ಥಳೀಯರು ಹೇಳಿದರು.
ಸುಬಲ್‌ನನ್ನು ಕೊಂದ ಕೂಡಲೇ ಸ್ಥಳೀಯರು ಭಯದಿಂದ ಹಳ್ಳಿಯನ್ನು ತೊರೆದು ಒಡಿಹೋಗಿದ್ದಾರೆ. ಕೊಲೆಗಾರರಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ.