ಕಾಸರಗೋಡು: ಭಾರತೀಯ ವೈದ್ಯಕೀಯ ಮತ್ತು ಮಾರಾಟ ಪ್ರತಿನಿಧಿಗಳ ಸಂಘದ 14ನೇ ರಾಜ್ಯ ಸಮ್ಮೇಳನ ಕಾಸರಗೋಡಿನಲ್ಲಿ ಜರುಗಿತು. ಬಿಎಂಎಸ್ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಕೆ.ಕೆ.ವಿಜಯಕುಮಾರ್ ಸಮ್ಮೇಳನ ಉದ್ಗಾಟಿಸಿದರು.
ಬಿಎಂಎಸ್‍ಆರ್‍ಎ ರಾಜ್ಯಾಧ್ಯಕ್ಷ ಕೆ. ಉಪೇಂದ್ರನ್ ಅಧ್ಯಕ್ಷತೆ ವಹಿಸಿದ್ದರು. ಸ್ವಾಗತ ಸಮಿತಿ ಅಧ್ಯಕ್ಷ ಡಾ. ವೆಂಕಟಗಿರಿ, ಆರೆಸ್ಸೆಸ್ ಜಿಲ್ಲಾ ಕಾರ್ಯವಾಹ ಪವಿತ್ರನ್ ಕೆ.ಕೆ ಪುರಂ, ಬಿಎಂಎಸ್ ರಾಜ್ಯ ಕಾರ್ಯದರ್ಶಿ ವಕೀಲ ಮುರಳೀಧರನ್, ಕಾಸರಗೋಡು ಜಿಲ್ಲಾಧ್ಯಕ್ಷ ವಿ.ವಿ.ಬಾಲಕೃಷ್ಣನ್, ಕಾರ್ಯದರ್ಶಿ ಗೋವಿಂದನ್ ಮಡಿಕೈ ಮುಮತಾದವರು ಉಪಸ್ಥಿತರಿದ್ದರು. ಬಿಎಂಎಸ್ ರಾಜ್ಯ ಸಾರ್ವಜನಿಕ ಕಾರ್ಯದರ್ಶಿ ಜಿ.ಕೆ.ಅಜಿತ್ ಸಮಾರೋಪ ಭಾಷಣ ಮಾಡಿದರು. ಕಾಯ್ಕ್ರಮದ ಅಂಗವಾಗಿ ಕಾಸರಗೋಡು ನಗರದಲ್ಲಿ ಪ್ರತಿನಿಧಿಗಳು ಹಾಗೂ ಕಾರ್ಯಕರ್ತರ ಮೆರವಣಿಗೆ ನಡೆಯಿತು. ಸಭೆಯಲ್ಲಿ ಚಟುವಟಿಕೆ ವರದಿ, ನಿರ್ಣಯ, ಸಾಂಸ್ಥಿಕ ಚರ್ಚೆ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. 14 ಜಿಲ್ಲೆಗಳಿಂದ 1000 ಪ್ರತಿನಿಧಿಗಳು ಪಾಲ್ಗೊಂಡಿದ್ದರು.