ತಿರುವನಂತಪುರಂ: ವಂದೇಭಾರತ್ ಎಕ್ಸ್ ಪ್ರೆಸ್ ರೈಲಿಗೆ ತಿರೂರಿನಲ್ಲಿ ನಿಲುಗಡೆಗೆ ಅವಕಾಶ ನೀಡಬೇಕು ಎಂಬ ಬೇಡಿಕೆಯನ್ನು ಹೈಕೋರ್ಟ್ ತಿರಸ್ಕರಿಸಿದೆ.
ರೈಲುಗಳು ಎಲ್ಲಿ ನಿಲ್ಲಬೇಕು ಎಂಬುದನ್ನು ನಿರ್ಧರಿಸುವುದು ರೈಲ್ವೇಯಾಗಿದೆ. ಹಾಗೆ ಮಾಡುವ ಪರಮಾಧಿಕಾರ ರೈಲ್ವೇಗೆ ಮಾತ್ರ ಇರುವುದಾಗಿದೆ ಎಂದು ಹೈಕೋರ್ಟ್ ಹೇಳಿದೆ. ಈ ವಿಚಾರದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸುವಂತಿಲ್ಲ ಎಂದೂ ಹೈಕೋರ್ಟ್ ಹೇಳಿದೆ. ಪ್ರತಿಯೊಬ್ಬರ ಆಸಕ್ತಿಗೆ ಅನುಗುಣವಾಗಿ ನಿಲುಗಡೆಗೆ ಅವಕಾಶ ನೀಡಿದರೆ ಎಕ್ಸ್ ಪ್ರೆಸ್ ರೈಲು ಪರಿಕಲ್ಪನೆಯೇ ಅಸಂಬದ್ದ ಎಂದೂ ಸ್ಪಷ್ಟಪಡಿಸಲಾಗಿದೆ. ಮಲಪ್ಪುರಂ ಮೂಲದವರೊಬ್ಬರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.