ಕಾಸರಗೋಡು: ಕೇರಳ ಕೌಮುದಿ ಪತ್ರಿಕೆಯ ಮಲಬಾರ್ ಆವೃತ್ತಿಯ 40ನೇ ವಾರ್ಷಿಕೋತ್ಸವ ಅಂಗವಾಗಿ ಬ್ಯಾಂಕಿಂಗ್ ಕ್ಷೇತ್ರದ ಸಾಧನೆಯನ್ನು ಗುರುತಿಸಿ ಕಾಸರಗೋಡು ಸರ್ವೀಸ್ ಕೋ ಓಪರೆಟಿವ್ ಬ್ಯಾಂಕ್‍ಗೆ ಪ್ರಶಸ್ತಿ ನೀಡಿ ಗೌರವಿಸಿದೆ.
ಕಾಸರಗೋಡು ನಗರಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಬ್ಯಾಂಕ್ ಕಾರ್ಯದರ್ಶಿ ಪಿ. ಜಾನಕಿ ಮತ್ತು ಪ್ರಬಂಧಕ ಅಶೋಕ್ ರೈ ಅವರಿಗೆ ಕೇರಳ ರಾಜ್ಯ ಹಣಕಾಸು ಸಚಿವ ಕೆ.ಎನ್ ಬಾಲಗೋಪಾಲ್ ಸ್ಮರಣಿಕೆ ನೀಡಿ ಗೌರವಿಸಿದರು. ಶಾಸಕ ಎನ್.ಎ ನೆಲ್ಲಿಕುನ್ನು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.