ನವದೆಹಲಿ: ಕ್ಯೂರಿಯಾಸಿಟಿಯ ಮಾರ್ಸ್ ರೋವರ್ ಪುಸ್ತಕದಂತಹ ಬಂಡೆಯ ಕ್ಲೋಸ್-ಅಪ್ ಫೋಟೊ ಒಂದನ್ನು ಸೆರೆಹಿಡಿದಿದ್ದಾರೆ . ಆ ಬಂಡೆಗೆ ಟೆರ್ರಾ ಫರ್ಮ್ ಎಂದು ಹೆಸರಿಸಲಾಗಿದ್ದು ಅದರ ಫೋಟೊವನ್ನು ಕಳೆದ ತಿಂಗಳು ತೆಗೆಲಾಗಿದ್ದು ಅಂತರಿಕ್ಷ ತಜ್ಞರು ಪುಸ್ತಕದ ತೆರೆದ ಪುಟಗಳಂತೆ' ಕಾಣುವ ಮಂಗಳ ಗ್ರಹದ ವಸ್ತುವನ್ನು ಕಂಡುಕೊಂಡಿದ್ದೇವೆ ಎಂದು ನಂಬುತ್ತಾರೆ.
ಮಾರ್ಸ್ ರೋವರ್ ಈಗ ಒಂದು ದಶಕದಿಂದ ಗ್ರಹದ ಮೇಲ್ಮೈಯಲ್ಲಿದ್ದು 3,800ನೇ ದಿನದಂದು ಈ ಪುಸ್ತಕದಂತಹ ವಸ್ತುವಿನ ಫೋಟೋವನ್ನು ತೆಗೆದಿದೆ. ಈ ನಂತರ ಅವರ ಟ್ವೀಟ್ ಹೀಗಿದೆ: 'ನನ್ನ ತಂಡವು ಈ ವಿಶಿಷ್ಟ ಆಕಾರದ ಬೆಣಚುಕಲ್ಲು ಗಾಳಿಯಲ್ಲಿ ಬೀಸುವ ಪುಟಗಳೊಂದಿಗೆ ತೆರೆದ ಪುಸ್ತಕವನ್ನು ಹೋಲುತ್ತದೆ ಎಂದು ಭಾವಿಸುತ್ತೇವೆ. (ಕೇವಲ ಒಂದು ಇಂಚು ಅಡ್ಡಲಾಗಿದ್ದು, ಇದು ಸಣ್ಣ ಪುಸ್ತಕವಾಗಿದೆ)' ಎಂದು ಬರೆದುಕೊಂಡಿದ್ದಾರೆ.
ಪುಸ್ತಕದ ರೀತಿಯ ಹೋಲಿಕೆಯನ್ನು ನೋಡಿ ವಿಜ್ಞಾನಿಗಳು ಆಶ್ಚರ್ಯಚಕಿತರಾಗಿದ್ದಾರೆ. ಅವರು ಒಂದು ಇಂಚು ಉದ್ದದ ಬಂಡೆಯು ಅನಿರ್ದಿಷ್ಟ ಪ್ರಮಾಣದ ಸವೆತದಿಂದ ಅಸಾಮಾನ್ಯ ಆಕಾರ ರೂಪುಗೊಂಡಿದೆ ಎಂದು ವರದಿ ಮಾಡಿದ್ದಾರೆ. ಅವರ ವಿವರಣೆಯ ಪ್ರಕಾರ ಯುಗಮಾನಗಳ ನಂತರ ಗಾಳಿಯಿಂದಾಗಿ, ಮೃದುವಾದ ಬಂಡೆ ಸವೆದು ಗಟ್ಟಿಯಾದ ಉಳಿದ ವಸ್ತು ಉಳಿದಿದೆ.
ಈ ಸುದ್ದಿ ಹೊರಬೀಳುತ್ತಿದ್ದಂತೆಯೇ ಸಾಮಾಜಿಕ ಮಾಧ್ಯಮದಲ್ಲಿ ಕಾಮೆಂಟ್‌ಗಳು ಶೀಘ್ರದಲ್ಲೇ ತುಂಬಿವೆ. ಕಾಮೆಂಟ್ಗಳಲ್ಲಿ ಬಳಕೆದಾರರು ಪುಸ್ತಕವು ಏನನ್ನು ಪ್ರತಿನಿಧಿಸಬಹುದು ಎಂಬುದರ ಕುರಿತು ಹೆಚ್ಚಿನ ವಿವರಗಳನ್ನು ಕೇಳುವ ಸಂಭಾವ್ಯ ಕಾನಸ್ಪಿರಸಿ ಥಿಯರಿಗಳ ಕುರಿತು ಕ್ಯೂರಿಯಾಸಿಟಿ ರೋವರ್ ತಂಡವನ್ನು ಎಚ್ಚರಿಸಿದರು.