ಚೆನ್ನೈ: ಭಾರತೀಯ ರೈಲ್ವೇ ವಂದೇಭಾರತ್ ಸ್ಲೀಪರ್ ರೈಲುಗಳನ್ನು ನಿರ್ಮಿಸಲು ಸಿದ್ಧತೆ ನಡೆಸಿದೆ. ್ಲೀಪರ್ ಕೋಚ್‍ಗಳ ತಯಾರಿಕೆಯನ್ನು ಪ್ರಾರಂಭಿಸಲು ರೈಲ್ವೆ ಮಂಡಳಿಯು ಚೆನ್ನೈ ಪೆರುಂಬೂರಿಲಾ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಗೆ ಸೂಚನೆ ನೀಡಿದೆ.
ಒಂದು ವರ್ಷದೊಳಗೆ ನಿರ್ಮಾಣ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ.
ಸ್ಲೀಪರ್ ಕೋಚ್‍ಗಳ ನಿರ್ಮಾಣಕ್ಕೆ ಸಿದ್ಧ ಎಂದು ಐಸಿಎಫ್ ರೈಲ್ವೆ ಮಂಡಳಿಗೆ ತಿಳಿಸಿತ್ತು. ಇದನ್ನು ರೈಲ್ವೆ ಮಂಡಳಿ ಅನುಮೋದಿಸಿದೆ. 2023-2024ರ ಅವಧಿಯಲ್ಲಿ ವಂದೇ ಭಾರತ್ ರೈಲುಗಳಿಗೆ ಸ್ಲೀಪರ್ ಕೋಚ್‍ಗಳ ನಿರ್ಮಾಣವನ್ನು ಪೂರ್ಣಗೊಳಿಸಲು ರೈಲ್ವೆ ಮಂಡಳಿ ಸೂಚನೆಗಳನ್ನು ನೀಡಿದೆ. ಈ ವರ್ಷದೊಳಗೆ ರೈಲಿನ ಪ್ರಾಯೋಗಿಕ ಓಡಾಟ ಸೇರಿದಂತೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.