ಕಾಸರಗೋಡು :ಅಲಾಮಿಪಳ್ಳಿಯಲ್ಲಿ ಮೇ 3ರಿಂದ ನಡೆಯಲಿರುವ ಮೈ ಕೇರಳ ಪ್ರದರ್ಶನ ಮತ್ತು ಮಾರುಕಟ್ಟೆ ಮೇಳ ಅಂಗವಾಗಿ ಜಿಲ್ಲಾ ಮಾಹಿತಿ ಕಛೇರಿ ಕಾಸರಗೋಡು ಪೆಡಲರ್‍ಗಳ ಸಹಯೋಗದೊಂದಿಗೆ ಸೈಕಲ್ ರ್ಯಾಲಿ ನಡೆಯಿತು.
ತ್ರಿಕರಿಪುರ ಬಸ್ ನಿಲ್ದಾಣ ಪ್ರದೇಶದಿಂದ ಆರಂಭಗೊಮಡ ಸೈಕಲ್ ರ್ಯಾಲಿ ಕಾಲಿಕ್ಕಡವಿನ ಸಮಾರೋಪಗೊಂಡಿತು. ಸೈಕಲ್ ರ್ಯಾಲಿಯಲ್ಲಿ 27 ಮಂದಿ ಸೈಕಲಿಸ್ಟ್‍ಗಳು ಭಾಗವಹಿಸಿದ್ದರು. ಶಾಸಕ ಎಂ.ರಾಜಗೋಪಾಲನ್ ಸೈಕಲ್ ರ್ಯಾಲಿಗೆ ಚಾಲನೆ ನೀಡಿದರು. ಕಾಸರಗೋಡು ಪೆಡಲರ್ಸ್ ಕಾರ್ಯದರ್ಶಿ ಬಾಬು ಮಯೂರಿ ಹಾಗೂ ತ್ರಿಕರಿಪುರ ಸೈಕಲ್ ಕ್ಲಬ್ ಅಧ್ಯಕ್ಷ ಡಾ.ಜಯಕೃಷ್ಣನ್ ಅತಿಥಿಗಳಾಗಿ ಭಾಗವಹಿಸಿದ್ದರು. ಜಿಲ್ಲಾ ಮಾಹಿತಿ ಅಧಿಕಾರಿ ಎಂ.ಮಧುಸೂದನನ್ ಮತ್ತು ಮಾಹಿತಿ ಸಹಾಯಕ ಅರುಣ್ ಸೆಬಾಸ್ಟಿಯನ್, ಪ್ರಿಸಂ ಉಪ ಸಂಪಾದಕ ವಿ.ಸುಮಿತ್, ಮಾಹಿತಿ ಸಹಾಯಕ ಇ.ಕೆ.ನಿಧೀಶ್, ಅನುಮೋದ್ ಉಪಸ್ಥಿತರಿದ್ದರು.