ನವದೆಹಲಿ (PTI): ನಿಷೇಧಿತ ಮಾವೋವಾದಿ ಸಂಘಟನೆ ಪೀಪಲ್ಸ್ ಲಿಬರೇಶನ್ ಫ್ರಂಟ್ ಆಫ್ ಇಂಡಿಯಾದ (ಪಿಎಲ್‌ಎಫ್‌ಐ) ಸ್ವಘೋಷಿಯ ಪರಮೋಚ್ಚ ನಾಯಕ ದಿನೇಶ್ ಗೋಪ್‌ನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧಿಸಿದೆ ಎಂದು ವಕ್ತಾರರು ಭಾನುವಾರ ತಿಳಿಸಿದರು.
ನವದೆಹಲಿ (PTI): ನಿಷೇಧಿತ ಮಾವೋವಾದಿ ಸಂಘಟನೆ ಪೀಪಲ್ಸ್ ಲಿಬರೇಶನ್ ಫ್ರಂಟ್ ಆಫ್ ಇಂಡಿಯಾದ (ಪಿಎಲ್‌ಎಫ್‌ಐ) ಸ್ವಘೋಷಿಯ ಪರಮೋಚ್ಚ ನಾಯಕ ದಿನೇಶ್ ಗೋಪ್‌ನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧಿಸಿದೆ ಎಂದು ವಕ್ತಾರರು ಭಾನುವಾರ ತಿಳಿಸಿದರು.
ಗೋಪ್ ಅಲಿಯಾಸ್ 'ಕುಲದೀಪ್ ಯಾದವ್' ಅಲಿಯಾಸ್ 'ಬಡ್ಕು' ವಿರುದ್ಧ ಜಾರ್ಖಂಡ್, ಬಿಹಾರ ಮತ್ತು ಒಡಿಶಾದಲ್ಲಿ 100ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಈತನ ಸುಳಿವು ನೀಡಿದವರಿಗೆ ₹30 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಪಿಎಲ್‌ಎಫ್‌ಐ ಕಾರ್ಯಕರ್ತರಿಂದ ₹25.38 ಲಕ್ಷ ರೂಪಾಯಿ ಮೌಲ್ಯದ ರದ್ದಾದ ನೋಟುಗಳನ್ನು ವಶಕ್ಕೆ ಪಡೆದ ಪ್ರಕರಣ ಸಂಬಂಧ ಗೋಪ್ ವಿರುದ್ಧ ಎನ್‌ಐಎ 2018ರಲ್ಲಿ ದೋಷಾರೋಪ ಪಟ್ಟಿ ದಾಖಲಿಸಿತ್ತು. ಈತ ಸುಮಾರು ದಶಕಗಳಿಂದ ತಲೆಮರೆಸಿಕೊಂಡಿದ್ದ ಎಂದು ತಿಳಿಸಿದ್ದಾರೆ.