HEALTH TIPS

ಪುಲ್ವಾರಿ ಷರೀಫ್ ಉಗ್ರರ ಸಂಚು: ಕೇರಳ ಸೇರಿದಂತೆ ಮೂರು ರಾಜ್ಯಗಳ ಪಿ.ಎಫ್.ಐ ಕೇಂದ್ರಗಳ ಮೇಲೆ ಎನ್‍ಐಎ ದಾಳಿ

                    ನವದೆಹಲಿ: ಬಿಹಾರದ ಪಾಟ್ನಾದ ಫುಲ್ವಾರಿ ಷರೀಫ್ ಪ್ರದೇಶದಲ್ಲಿ ನಡೆದ ಭಯೋತ್ಪಾದನಾ ದಾಳಿ ಯೋಜನೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಕೇರಳ, ಕರ್ನಾಟಕ ಮತ್ತು ಬಿಹಾರ ರಾಜ್ಯಗಳ ಸುಮಾರು 25 ಕೇಂದ್ರಗಳ ಮೇಲೆ ದಾಳಿ ಮಾಡಿದೆ.

                     ಪುಲ್ವಾರಿ ಷರೀಫ್ ಪ್ರದೇಶದಲ್ಲಿ ನಡೆದ ಭಯೋತ್ಪಾದನಾ ದಾಳಿಯ ಯೋಜನೆಯಲ್ಲಿ ಪಿಎಫ್‍ಐ ಭಾಗಿಯಾಗಿರುವುದು ಪತ್ತೆಯಾಗಿದೆ. ಇಬ್ಬರು ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರಾದ ಮುಹಮ್ಮದ್ ಜಲಾಲುದ್ದೀನ್ ಮತ್ತು ಮುಹಮ್ಮದ್ ಮುಸ್ತಾಕ್ ಅಹ್ಮದ್ ಅವರನ್ನು ಬಂಧಿಸಿದ ನಂತರ ಬಿಹಾರ ಪೊಲೀಸರು ಮೊದಲು 12 ಜುಲೈ 2022 ರಂದು ಪ್ರಕರಣವನ್ನು ದಾಖಲಿಸಿದ್ದರು. ಇಬ್ಬರ ವಶದಿಂದ ಪಿಎಫ್‍ಐ ಕಾರ್ಯಕರ್ತರಿಗೆ ಭಯೋತ್ಪಾದನಾ ತರಬೇತಿ ಕೈಪಿಡಿ ಸೇರಿದಂತೆ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಂದಿನಿಂದ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸ್ಥೆ ಒಟ್ಟು 13 ಜನರನ್ನು ಬಂಧಿಪಿಎ ಸಿದೆ. ಆರೋಪಿಗಳಲ್ಲಿ ಪಿಎಫ್‍ಐ ಮುಖಂಡರು, ಕಾರ್ಯಕರ್ತರು ಮತ್ತು ಮಾಜಿ ಸಿಮಿ ಸದಸ್ಯರು ಸೇರಿದ್ದಾರೆ. ಕೇಂದ್ರ ಸರ್ಕಾರವು ಸೆಪ್ಟೆಂಬರ್ 28, 2022 ರಂದು ಕಾನೂನುಬಾಹಿರ ಚಟುವಟಿಕೆಗಳ ಕಾಯಿದೆ (ಯುಎಪಿಎ) ಅಡಿಯಲ್ಲಿ ಪಿ.ಎಫ್.ಐ ಗಳನ್ನು ನಿಷೇಧಿಸಿತು. ಪಿಎಫ್‍ಐ ನಿಷೇಧದ ಹೊರತಾಗಿಯೂ ಸಂಘಟನೆಯ ಮುಖಂಡರು ಮತ್ತು ಕಾರ್ಯಕರ್ತರು ಹಿಂಸಾತ್ಮಕ ಭಯೋತ್ಪಾದಕ ವಿಚಾರಗಳನ್ನು ಹರಡುತ್ತಿರುವುದು ಮತ್ತು ಹೆಚ್ಚಿನ ಜನರೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸುವುದು ಕಂಡುಬಂದಿದೆ ಎಂದು ಎನ್‍ಐಎ ಹೇಳಿಕೆ ನೀಡಿತ್ತು.

                     ಪುಲ್ವಾರಿ ಷರೀಫ್ ಮತ್ತು ಮೋತಿಹಾರಿಯಲ್ಲಿರುವ ಪಿಎಫ್‍ಐ ಕಾರ್ಯಕರ್ತರು ಭಾರ್‍ನಲ್ಲಿ ತಮ್ಮ ಚಟುವಟಿಕೆಗಳನ್ನು ರಹಸ್ಯವಾಗಿ ಮುಂದುವರಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ ಎಂದು ಎನ್‍ಐಎ ಪತ್ತೆ ಮಾಡಿದೆ. ಅವರು ನಿರ್ದಿಷ್ಟ ಸಮುದಾಯದ ಜನರನ್ನು ಕೊಲ್ಲಲು ಯೋಜಿಸಿದ್ದರು. ಮಾರ್ಚ್ 2023 ರಲ್ಲಿ, ಅವರು ಬಿಹಾರದ ಪೂರ್ವ ಚಂಬರಾನ್ ಜಿಲ್ಲೆಯಲ್ಲಿ ನಿರ್ದಿಷ್ಟ ಸಮುದಾಯದ ಯುವಕರನ್ನು ನಿರ್ನಾಮ ಮಾಡಲು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿದ್ದರು.

                ಆರೋಪಿ ಯಾಕೂಬ್ ಖಾನ್ ಜೊತೆಗಿನ ನಿಕಟ ಸಂಬಂಧಕ್ಕಾಗಿ ಆಲಂ ಎಂದು ಗುರುತಿಸಲಾದ ವ್ಯಕ್ತಿಯನ್ನು ಮಾರ್ಚ್‍ನಲ್ಲಿ ಎನ್‍ಐಎ ಬಂಧಿಸಿತ್ತು. ಯಾಕೂಬ್ ಖಾನ್ ಪಿಎಫ್‍ಐಗೆ ದೈಹಿಕ ಶಿಕ್ಷಣ ತರಬೇತುದಾರರಾಗಿದ್ದ ಎಂದು ಎನ್‍ಐಎ ತಿಳಿಸಿದೆ. ಕೋಮುಗಲಭೆ ಹರಡಲು ಯಾಕೂಬ್ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ವಿಡಿಯೋಗಳನ್ನು ಹಾಕಿದ್ದ ಎಂದು ಎನ್‍ಐಎ ಹೇಳಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries