ಮನೆಯಲ್ಲಿ ಅಮ್ಮ, ಅಜ್ಜಿ ಮಾಡುತ್ತಿದ್ದ ಸಾಂಬಾರ್‌ಗೆ ಏನೋ ಸ್ಪೆಷಲ್ ಟೇಸ್ಟ್ ಅಲ್ವಾ? ಅವರ ಕೈ ರುಚಿ ನಮಗಿಲ್ಲ ಎಂದು ಹೇಳಿ ಸುಮ್ಮನಾಗುತ್ತೇವೆ, ಆದರೆ ನಿಮಗೆ ಸಾಂಬಾರ್‌ಗೆ ಬಳಸುವ ಸ್ಪೆಷಲ್ ಮಸಾಲೆ ಗೊತ್ತಾದರೆ ಅವರಷ್ಟೇ ರುಚಿಯಾದ ಸಾಂಬಾರ್ ನೀವು ತಯಾರಿಸುತ್ತೀರಿ, ಅಲ್ಲದೆ ಹೊರಗಿನಿಂದ ಸಾಂಬಾರ್ ಪುಡಿ ತರುವುದು ಕೂಡ ಸ್ಟಾಪ್ ಮಾಡುತ್ತೀರಿ, ಅಷ್ಟೊಂದು ರುಚಿಯಾಗಿರುತ್ತೆ.
ಈ ಸಾಂಬಾರ್ ಮಸಾಲೆ ಮಾಡುವ ವಿಧಾನವೇನು ಎಂದು ತುಂಬಾ ಕಷ್ಟವೇನಿಲ್ಲ, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ ಬನ್ನಿ?ಅರ್ಧ ಮೆಣಸು, ಅರ್ಧ ಕೆಜಿ ಕೊತ್ತಂಬರಿಯಾದರೆ ನೀವು ಮನೆಯಲ್ಲಿಯೇ ಮಿಕ್ಸರ್‌ನಲ್ಲಿ ಪುಡಿ ರೆಡಿ ಮಾಡಬಹುದು, ಅಧಿಕವಿದ್ದರೆ ಸಾಮಗ್ರಿ ನೀವು ಬಳಸುವ ಮೆಣಸು, ಕೊತ್ತಂಬರಿ ಬೀಜದ ಅಳತೆಗೆ ತಕ್ಕಂತೆ ಅಧಿಕ ಬಳಸಬೇಕಾಗುತ್ತದೆ. ಹೆಚ್ಚಿದ್ದರೆ ಮಿಲ್‌ನಲ್ಲಿ ಪುಡಿ ಮಾಡುವುದು ಒಳ್ಳೆಯದು.
ಮಾಡುವ ವಿಧಾನ
* ಎಲ್ಲಾ ಸಾಮಗ್ರಿ ಪ್ರತ್ಯೇಕವಾಗಿ ಹುರಿದರೆ ಒಳ್ಳೆಯದು, ಇಲ್ಲದಿದ್ದರೆ ಮೊದಲು ಬಾಣಲೆಗೆ ಕೊತ್ತಂಬರಿ ಬೀಜ ಹಾಕಿ ಸ್ವಲ್ಪ ಹುರಿದು ನಂತರ ಒಣ ಮೆಣಸು ಕರಿಬೇವು ಹಾಕಿ ಹುರಿಯಿರಿ.
* ನಂತರ ತಣ್ಣಗಾಗಲು ಒಂದು ತಟ್ಟೆಗೆ ಹಾಕಿ, ಉಳಿದ ಸಾಮಗ್ರಿ ಕೂಡ ಒಂದು ಎರಡರಿಂದ ಮೂರು ನಿಮಿಷ ಫ್ರೈ ಮಾಡಿ.
* ನಂತರ ಎಲ್ಲಾ ಸಾಮಗ್ರಿ ಒಟ್ಟಿಗೆ ಹಾಕಿ ಮಿಕ್ಸರ್‌ನಲ್ಲಿ ಪುಡಿ ಮಾಡಿ ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟು ಬಳಸಿ.