HEALTH TIPS

ಬಡ ಮಕ್ಕಳಿಗೆ ರಕ್ಷಣಾ-ಕ್ರೀಡೆ ಕ್ಷೇತ್ರಗಳಲ್ಲಿ ಉಚಿತ ತರಬೇತಿ: ಹಲವರಿಗೆ ಮಾದರಿಯಾದ ಗುಜರಾತ್ ವ್ಯಕ್ತಿ!

                ಅಹಮದಾಬಾದ್: ರಕ್ಷಣಾ ವಲಯ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಕೆಲಸ ಮಾಡಲು ಬಯಸುವ ಬಡ ಮಕ್ಕಳಿಗೆ, ಉಚಿತ ತರಬೇತಿ ನೀಡುವ ಮೂಲಕ ಅಹಮದಾಬಾದ್ ಮೂಲದ ರೂಪೇಶ್ ಮಕ್ವಾನಾ ಅವರು ಇತರರಿಗೆ ಮಾದರಿಯಾಗಿದ್ದಾರೆ.

                  ಕಳೆದ 4-5 ವರ್ಷಗಳಲ್ಲಿ ಮಕ್ವಾನಾ ಅವರು 300ಕ್ಕೂ ಹೆಚ್ಚು ಮಕ್ಕಳಿಗೆ ತರಬೇತಿ ನೀಡಿದ್ದು, 500ಕ್ಕೂ ಹೆಚ್ಚು ಯುವಕರು ವ್ಯನಸಗಳಿಂದ ಮುಕ್ತರಾಗಲು ನೆರವಾಗಿದ್ದಾರೆ.

                 2015 ರಲ್ಲಿ ಗುಜರಾತ್ ಪೊಲೀಸ್ ಪಡೆಗೆ ಸೇರ್ಪಡೆಗೊಳ್ಳಲು ರೂಪೇಶ್ ಸಿದ್ಧತೆ ನಡೆಸಿದ್ದರು. ಆದರೆ, ಎತ್ತರದ ಮಾನದಂಡದಲ್ಲಿ ವಿಫಲರಾಗಿದ್ದರಿಂದ ಗುಜರಾತ್ ಪೊಲೀಸ್ ಪಡೆ ಸೇರುವ ಅವರ ಕನಸು ಕನಸ್ಸಾಗಿಯೇ ಉಳಿಯಿತು. ಇದರಿಂದ ತೀವ್ರವಾಗಿ ನೊಂದ ರೂಪೇಶ್ ಅವರು, ತಮ್ಮ ಕನಸ್ಸು ಇತರೆ ಯುವಕರ ಮೂಲಕ ಈಡೇರಿಸಿಕೊಳ್ಳಲು ಮುಂದಾದರು. ಇದರಂತೆ ಬಡ ಯುವಕರಿಗೆ ಉಚಿತ ತರಬೇತಿ ನೀಡಲು ನಿರ್ಧರಿಸಿದರು.

                ರೂಪೇಶ್ ಮಕ್ವಾನಾ ಅವರು ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದವರಾಗಿದ್ದು, ಅವರ ತಂದೆ ಟೈಲರ್, ಮತ್ತು ಅವರ ತಾಯಿ ಗೃಹಿಣಿಯಾಗಿದ್ದಾರೆ.

               8 ವರ್ಷಗಳ ಹಿಂದೆ ಸಮಾಜ ಕಾರ್ಯ ಆರಂಭಿಸಿದ್ದೆ. ಇದರಿಂದ 800ಕ್ಕೂ ಹೆಚ್ಚು ಯುವಕರ ಜೀವನ ಬದಲಾಗುವಂತೆ ಮಾಡಿದೆ. 300 ಯವಕರಿಗೆ ತರಬೇತಿ ನೀಡಿದ್ದು, ಈ ಪೈಕಿ ಸುಮಾರು 60 ಯುವಕರು ಭಾರತೀಯ ಸೇನೆ, 58 ಮಂದಿ ಗುಜರಾತ್ ಪೊಲೀಸ್ ಪಡೆ, ಇಬ್ಬರು ನೌಕಾಪಡೆ ಮತ್ತು ಇಬ್ಬರು ವಾಯುಸೇನಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆಂದು ಮಕ್ವಾನಾ ಅವರು ಹೇಳಿದ್ದಾರೆ.

              4-5 ವರ್ಷಗಳಿಂದಲೂ ರಕ್ಷಣಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಬಯಸುವ ಯುವಕರಿಗೆ ಉಚಿತ ತರಬೇತಿ ನೀಡುತ್ತಿದ್ದೇನೆ. ಕ್ರೀಡೆಯಲ್ಲಿ ವೃತ್ತಿಜೀವನ ಬಯಸುವವರಿಗೂ ತರಬೇತಿ ನೀಡುತ್ತಿದ್ದೇನೆ. ರಕ್ಷಣಾ ವಲಯದಲ್ಲಿ ಸೇವೆ ಸಲ್ಲಿಸುವವರಿಗೆ ಬೆಳಿಗ್ಗೆ ತರಬೇತಿ ನೀಡುತ್ತೇನೆ. ಕ್ರೀಡಾ ವಲಯ ಬಯಸುವವರಿಗೆ ಸಂಜೆ ಸಮಯದಲ್ಲಿ ತರಬೇತಿ ನೀಡುತ್ತಿದ್ದೇನೆ. ಇದಲ್ಲದೆ, ಪಾನ್, ಸಿಗರೇಟ್ ಮತ್ತು ತಂಬಾಕು ಚಟದಿಂದ ಯುವಕರನ್ನು ಮುಕ್ತಗೊಳಿಸುವುದರತ್ತಲೂ ಶ್ರಮಿಸುತ್ತಿದ್ದೇನೆ.

               ಪಾನ್ ಶಾಪ್ ಬಳಿ ನಿಂತಿರುವ ಮಕ್ಕಳು ಹಾಗೂ ಯುವಕರ ಬಳಿ ಹೋಡಿ ದೇಶ ಮತ್ತು ಕುಟುಂಬಕ್ಕೆ ನಮ್ಮ ಜೀವನ ಬಹಳ ಮುಖ್ಯ ಎಂಬ ಮಾತುಗಳನ್ನು ಹೇಳುತ್ತೇನೆ. ವ್ಯಸನದಿಂದ ಹೊರಬರಲು ಬಯಸುವವರು ನನ್ನೊಂದಿಗೆ ಬರುವಂತೆ ತಿಳಿಸುತ್ತೇನೆ. ಅವರಿಗೆ ತರಬೇತಿ ನೀಡುತ್ತೇನೆ. ಈ ವರೆಗೂ 500ಕ್ಕೂ ಹೆಚ್ಚು ಯುವವಕರನ್ನು ವ್ಯಸನದಿಂದ ಮುಕ್ತಗೊಳಿಸಿದ್ದೇನೆಂದು ತಿಳಿಸಿದ್ದಾರೆ.

             ಇದಷ್ಟೇ ಅಲ್ಲದೆ, ಮಕ್ವಾನಾ ಅವರು, ಯುವ ಬಚಾವೋ ದೇಶ್ ಬಚಾವೋ’ ಮತ್ತು ‘ಭೂಮಿಯನ್ನು ಉಳಿಸಿ’ ಎಂಬ ಮಿಷನ್‌ನ್ನು ಆರಂಭಿಸಿದ್ದು, ಈ ನಿಟ್ಟಿನಲ್ಲಿ ಮೇ 20 ರಂದು ದೆಹಲಿಯಲ್ಲಿ 6,000-ಕಿಮೀ ಮ್ಯಾರಥಾನ್'ನ್ನು ಪೂರ್ಣಗೊಳಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries