ಕಾಸರಗೋಡು: ಬೆದ್ರಡ್ಕಶ್ರೀ ಪೂಮಾಣಿ ಕಿನ್ನಿಮಾಣಿ ದೈವಸ್ಥಾನದಲ್ಲಿ ವೃಷಭ ಸಂಕ್ರಾಂತಿ ಉತ್ಸವ ಹಾಗೂ ಸಾಂಸ್ಕೃತಿಕ ಸಂಭ್ರಮ ಸಂಜೆ ಮೇ 15ರಂದು ಸಂಜೆ 6ಕ್ಕೆ ನಡೆಯಲಿದೆ.
ಶ್ರೀ ದೈವಸ್ಥಾನದಲ್ಲಿ ಅಪ್ಪ ಸೇವೆ ತಂಬಿಲ, ಭಕ್ತಾದಿಗಳ ಹರಕೆ ಸೇವೆ ನಡೆಯುವುದು. ಬಳಿಕ ನಡೆಯುವ ಸಭೆಯಲ್ಲಿ ಇಲ್ಲಿನ ಪ್ರಸಿದ್ದ ಹಿರಿಯ ಕ್ಲಾರ್ನೇಟ್ ವಾದಕ ಅಪ್ಪು ಸೇರಿಗಾರ ಮಠ ಅವರಿಗೆ ಗೌರವ ಅಭಿನಂದನೆ ನಡೆಯಲಿದೆ.
ಶ್ರೀ ದೈವಸ್ಥಾನದ ಆಡಳಿತ ಮೊಕ್ತೇಸರ ಎ. ರಮೇಶ ರೈ ಕೋಟೆಕುಂಜ ಅಧ್ಯಕ್ಷತೆ ವಹಿಸುವರು. ಮೊಕ್ತೇಸರರಾದ ಅನಂತ ವಿಷ್ಣು ಉಡುವಣ್ಣಾಯ, ಪಿ.ರಾಮ ಪ್ರಸಾದ್ ಬಲ್ಲಾಳ್ ಚಿಪ್ಪಾರು, ಕೆ ರವೀಂದ್ರ ಆಳ್ವ ಕೋಟೆಕುಂಜ ಕಂಬಾರು, ಶೀನ ಶೆಟ್ಟಿ ಬಳ್ಳೂರು. ಮಾಜಿ ಆಡಳಿತ ಮೊಕ್ತೇಸರ ಎ. ಮಂಜುನಾಥ ರೈ ಕೋಟೆಕುಂಜ ಉಪಸ್ಥಿತರಿರುವರು.
ರಾತ್ರಿ 8ರಿಂದ ನಡೆಯುವ ಸಾಂಸ್ಕೃತಿಕ ಸಂಭ್ರಮದ ಅಂಗವಾಗಿ ಹರಿದಾಸ ಕಲಾರತ್ನ ಶಂ ನಾ ಅಡಿಗ ಕುಂಬಳೆ ಅವರಿಂದ ಶ್ರೀ ಕೃಷ್ಣ ತುಲಾಭಾರ ಎನ್ನುವ ಹರಿಕಥಾ ಸತ್ಸಂಗ ಕಾರ್ಯಕ್ರಮ ನಡೆಯಲಿದೆ.