ಐಸ್‌ಕ್ರೀಮ್ ಅಂದ್ರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಐಸ್‌ಕ್ರೀಮ್ ಹೆಸರು ಕೇಳಿದ್ರೆ ಸಾಕು ಬಾಯಲ್ಲಿ ನೀರು ಬರುತ್ತೆ. ಪುಟ್ಟ ಪುಟ್ಟ ಮಕ್ಕಳಿಂದ ಹಿಡಿದು ಹಣ್ಣು ಹಣ್ಣು ಮುದುಕರು ಕೂಡ ಐಸ್‌ಕ್ರೀಮ್ ಅನ್ನ ಬಾಯಿ ಚಪ್ಪರಿಸಿ ತಿನ್ನುತ್ತಾರೆ. ಐಸ್‌ಕ್ರೀಮ್ ಹಲವಾರು ಫ್ಲೇವರ್‌ಗಳಲ್ಲಿ ಲಭ್ಯವಿದೆ. ನಮಗಿಷ್ಟದ ಫ್ಲೇವರ್ ಐಸ್‌ಕ್ರೀಮ್ ಅನ್ನು ಸವಿಯುವ ಅವಕಾಶವಿದೆ. ಅಷ್ಟಕ್ಕು ಎಷ್ಟು ಜನರಿಗೆ ಐಸ್‌ಕ್ರೀಮ್‌ನ ಇತಿಹಾಸದ ಬಗ್ಗೆ ಗೊತ್ತಿದೆ? ಐಸ್‌ಕ್ರೀಮ್ ಅನ್ನು ಮೊದಲಿಗೆ ತಯಾರು ಮಾಡಿದ್ದು ಯಾರು? ಎಲ್ಲವನ್ನೂ ತಿಳಿಸಿ ಕೊಡ್ತೀವಿ.
ಬೇಸಿಗೆ ಕಾಲ ಅಂದ್ರೆ ನಮಗೆ ಮೊದಲಿಗೆ ನೆನಪಾಗೋದೇ ಐಸ್‌ಕ್ರೀಮ್. ಬೇಸಿಗೆ ಕಾಲದಲ್ಲಂತೂ ಫ್ರಿಡ್ಜ್‌ನಲ್ಲಿ ಐಸ್‌ಕ್ರೀಮ್ ಇರಲೇಬೇಕು. ಐಸ್‌ಕ್ರೀಮ್ ಅನ್ನು ಹಾಲು ಹಾಗೂ ಕ್ರೀಮ್‌ನಿಂದ ತಯಾರಿಸಲಾಗುತ್ತದೆ. ಇನ್ನೂ ವೆನಿಲ್ಲಾ, ಸ್ಟ್ರಾಬೆರಿ, ಬಟರ್‌ಸ್ಕಾಚ್, ಚಾಕಲೇಟ್ ಹೀಗೆ ತರಹೇವಾರಿ ಫ್ಲೇವರ್‌ನಲ್ಲಿ ಐಸ್‌ಕ್ರೀಮ್ ಲಭ್ಯವಿದೆ. ಐಸ್‌ಕ್ರೀಮ್‌ನ ವಿನ್ಯಾಸ ಪ್ರತಿಯೊಬ್ಬರಿಗೂ ಇಷ್ಟವಾಗುವಂತಿದೆ. ಇನ್ನೂ ಬಾಯಲ್ಲಿಟ್ಟರೆ ಸಾಕು ಐಸ್‌ಕ್ರೀಮ್ ಹಾಗೆಯೇ ಕರಗಿ ಹೋಗುತ್ತದೆ. ಇಷ್ಟೆಲ್ಲಾ ವಿಶೇಷತೆಯನ್ನು ಹೊಂದಿರುವ ಐಸ್‌ಕ್ರೀಮ್ ಹುಟ್ಟಿಕೊಂಡಿದು ಹೇಗೆ?
ಐಸ್‌ಕ್ರೀಮ್ ಹುಟ್ಟಿಕೊಂಡಿದ್ದು ಹೇಗೆ?
ಯಾವುದಾದರೂ ತಿಂಡಿ ಫೇಮಸ್ ಆದ್ರೆ ಸಾಕು ಅದರ ಹಿಂದೆ ಅನೇಕ ಕಥೆಗಳು ಹುಟ್ಟಿಕೊಳ್ಳುತ್ತವೆ. ಅನೇಕರು ಅದು ತಮ್ಮಲ್ಲೇ ಮೊದಲು ತಯಾರಾಗಿದ್ದು ಎಂದು ಬಡಾಯಿ ಕೊಚ್ಚಿಕೊಳ್ಳುತ್ತಾರೆ. ಇದೇ ರೀತಿ ಐಸ್‌ಕ್ರೀಮ್‌ನ ಮೂಲದ ಬಗ್ಗೆ ಕೂಡ ಆಗಾಗ್ಗೇ ಚರ್ಚೆ ನಡೆಯುತ್ತಲೇ ಇರುತ್ತದೆ. ಅನೇಕರು ಐಸ್‌ಕ್ರೀಮ್ ಮೊದಲಿಗೆ ಪರ್ಶಿಯಾದಲ್ಲಿ ಹುಟ್ಟಿಕೊಂಡಿತು ಎಂದು ಹೇಳಿದರೆ ಇನ್ನೂ ಕೆಲವರು ಅದನ್ನು ರೋಮನ್ ಚಕ್ರವರ್ತಿ ನೀರೋ ಮೊದಲು ತಯಾರಿಸಿದ್ದ ಅಂತ ಹೇಳುತ್ತಾರೆ.
ಚೀನಾದಲ್ಲಿ ಮೊದಲು ತಯಾರಾಯ್ತಾ ಐಸ್‌ಕ್ರೀಮ್?
ಚೀನಾದ ಮಂಗೋಲ ಸಾಮ್ರಾಜ್ಯದ ಬಗ್ಗೆ ಅನೇಕರಿಗೆ ಗೊತ್ತಿರುತ್ತದೆ. ಇಲ್ಲಿ ಮೊದಲಿಗೆ ಐಸ್‌ಕ್ರೀಮ್ ತಯಾರು ಮಾಡಿದರು ಅಂತ ಇತಿಹಾಸಕಾರರು ಉಲ್ಲೇಖಿಸಿದ್ದಾರೆ. ಯುರೋಪ್‌ನ ಮಾರ್ಕ್‌ಪೊಲೊ ಮಂಗೋಲಕ್ಕೆ ಭೇಟಿ ನೀಡಿದ್ದಾಗ ಐಸ್‌ಕ್ರೀಮ್ ಬಗ್ಗೆ ತಿಳಿದುಕೊಳ್ಳುತ್ತಾನೆ. ಆನಂತರ ಅಲ್ಲಿಂದ ಮಾರ್ಕ್ ಪೊಲೊ ಯುರೋಪ್‌ನಲ್ಲಿ ಐಸ್ ಕ್ರೀಮ್‌ಗಳ ಅಸ್ತಿತ್ವಕ್ಕೆ ಮನ್ನಣೆ ನೀಡುತ್ತಾನಂತೆ.
ಮೊದಲ ಐಸ್‌ಕ್ರೀಮ್ ಹೇಗಿತ್ತು?
ಮೊಟ್ಟ ಮೊದಲ ಐಸ್ ಕ್ರೀಮ್ ಹೇಗಿತ್ತು ಅಂತ ಹೇಳಿದ್ರೆ ಖಂಡಿತ ನೀವು ಶಾಕ್ ಆಗ್ತೀರಿ. ಹೆಪ್ಪುಗಟ್ಟಿದ ಸಿಹಿಭಕ್ಷ್ಯಗಳು ಪಾನಕದಂತಿದೆ. ಇದು ಐಸ್‌ಕ್ರೀಮ್‌ಗೆ ಕೊಂಚ ಹತ್ತಿರವಾಗಿತ್ತಷ್ಟೇ. ನಂತರ ಕಾಲ ಕಳೆದಂತೆ ಐಸ್‌ಕ್ರೀಮ್ ಬೇರೆಯದ್ದೇ ರೂಪದಲ್ಲಿ ಬದಲಾಗುತ್ತದೆ. ಇದನ್ನು ಸಕ್ಕರೆ, ನೀರು, ಹಣ್ಣುಗಳು, ವೈನ್ ಹಾಗೂ ಜೇನುತುಪ್ಪ ಸೇರಿಸಿ ತಯಾರು ಮಾಡಲಾಗಿತ್ತು. ಹೀಗೆ ಐಸ್‌ಕ್ರೀಮ್ ಎಂಬ ಕಾನ್ಸೆಪ್ಟ್ ಹುಟ್ಟಿಕೊಳ್ಳುತ್ತದೆ.
ಐಸ್‌ಕ್ರೀಮ್ ಹಿಂದಿರುವ ಐತಿಹಾಸಿಕ ಸಂಗತಿಗಳೇನು?
* ಭಾರತೀಯ ಉಪಖಂಡದಲ್ಲಿ ಜನಪ್ರಿಯವಾಗಿರುವ ಕುಲ್ಫಿಯು 16 ನೇ ಶತಮಾನದಲ್ಲಿಮೊಘಲ್ ಸಾಮ್ರಾಜ್ಯದಲ್ಲಿ ಹುಟ್ಟಿಕೊಂಡಿತ್ತಂತೆ.
* 17 -18ನೇ ಶತಮಾನದಲ್ಲಿ ಇಂಗ್ಲೆಂಡ್‌ನಲ್ಲಿ ಮೊದಲ ಬಾರಿಗೆ ಐಸ್‌ಕ್ರೀಮ್ ಪತ್ತೆ ಹಚ್ಚಲಾಗಿತ್ತಂತೆ. ಆದರೆ ಅದನ್ನು ತಯಾರಿಸುವ ವಿಧಾನವನ್ನು 718 ರಲ್ಲಿ ಲಂಡನ್‌ನಲ್ಲಿ ಪ್ರಕಟಿಸಲಾಯಿತಂತೆ.
* ಆಗ್ನೆಸ್ ಮಾರ್ಷಲ್ ಅಥವಾ "ಕ್ವೀನ್ ಆಫ್ ಐಸ್ಸ್" ಎಂದು ಜನಪ್ರಿಯವಾಗಿದ್ದ ಒರ್ವ ವ್ಯಕ್ತಿ ಈ ಬಗ್ಗೆ ಪುಸ್ತಕಗಳನ್ನು ಬರೆದು ಜನಪ್ರಿಯಗೊಳಿಸುತ್ತಾರೆ.
* ಜುಲೈ 18 ಅನ್ನು ಐಸ್ ಕ್ರೀಮ್ ದಿನವನ್ನಾಗಿ ಆಚರಿಸಲಾಗುತ್ತದೆ
ಐಸ್‌ಕ್ರೀಮ್ ತಿನ್ನೋದ್ರಿಂದ ಆಗುವ ಆರೋಗ್ಯಕಾರಿ ಪ್ರಯೋಜನಗಳೇನು?
* ಐಸ್‌ಕ್ರೀಮ್‌ನಲ್ಲಿ ವಿಟಮಿನ್ ಹಾಗೂ ಮಿನರಲ್‌ಗಳು ಸಮೃದ್ಧವಾಗಿದೆ
* ಐಸ್‌ಕ್ರೀಮ್ ನಿಮ್ಮ ದಣಿದ ಜೀವಕ್ಕೆ ಶಕ್ತಿಯನ್ನು ನೀಡುತ್ತದೆ
* ಐಸ್‌ಕ್ರೀಮ್ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
* ಐಸ್‌ಕ್ರೀಮ್ ನಿಮ್ಮ ಮೆದುಳನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ
* ಐಸ್‌ಕ್ರೀಮ್ ನಿಮ್ಮ ಮೂಳೆಗಳನ್ನು ಸದೃಢವಾಗಿಸಲು ಸಹಾಯ ಮಾಡುತ್ತದೆ
* ಐಸ್‌ಕ್ರೀಮ್ ತಿನ್ನೋದ್ರಿಂದ ನಿಮ್ಮ ಮನಸ್ಸಿಗೆ ಒಂದು ರೀತಿ ಖುಷಿ ಸಿಗುತ್ತದೆ
* ಐಸ್‌ಕ್ರೀಮ್ ಸ್ತನ ಕ್ಯಾನ್ಸರ್ ಅನ್ನು ತಡೆಗಟ್ಟುತ್ತದೆ
* ಐಸ್‌ಕ್ರೀಮ್ ತೂಕ ಇಳಿಸೋದಕ್ಕೆ ಸಹಕಾರಿಯಾಗಿದೆ
* ಐಸ್‌ಕ್ರೀಮ್ ನಿಮ್ಮ ಫಲವತ್ತತೆಯನ್ನು ಸುಧಾರಿಸಲು ನೆರೆವಾಗುತ್ತದೆ
ಇಷ್ಟು ದಿನ ನಾವು ಐಸ್‌ಕ್ರೀಮ್‌ನ ಇಷ್ಟ ಪಟ್ಟು ತಿನ್ನುತ್ತಿದ್ದೆವೋ ಹೊರತು ಅದರ ವಿಶೇಷತೆ ಬಗ್ಗೆ ನಮಗೆ ಗೊತ್ತಿರಲಿಲ್ಲ. ಐಸ್‌ಕ್ರೀಮ್‌ನ ಹಿಂದೆ ಇಷ್ಟೆಲ್ಲಾ ಕಥೆ ಇದ್ಯಾ ಅನ್ನೋದನ್ನು ಊಹಿಸಿಕೊಳ್ಳೋದಕ್ಕೆ ಆಗೋದಿಲ್ಲ.