ಮಂಜೇಶ್ವರ: ಬಂಗ್ರಮಂಜೇಶ್ವರ ಜಿ.ಎಚ್.ಎಸ್.ಎಸ್. ಶಾಲೆಯಲ್ಲಿ ಕರಾವಳಿ ಅಭಿವೃದ್ಧಿ ನಿಗಮ ನಿರ್ಮಿಸಿದ ಹೊಸ ಎರಡು ಅಕಾಡೆಮಿ ಬ್ಲಾಕ್ ಅನ್ನು ಮೀನುಗಾರಿಕೆ, ಸಂಸ್ಕøತಿ ಮತ್ತು ಯುವಜನ ಕಲ್ಯಾಣ ಸಚಿವ ಸಾಜಿ ಚೆರಿಯನ್ ಉದ್ಘಾಟಿಸಿದರು. ರಾಜ್ಯದ ಮೀನುಗಾರಿಕಾ ವಲಯದ ಶಾಲೆಗಳಲ್ಲಿ 136 ಕೋಟಿ ರೂ.ವೆಚ್ಚದಲ್ಲಿ ಹೊಸ ಕಟ್ಟಡಗಳನ್ನು ನಿರ್ಮಿಸಲಾಗಿದೆ ಎಂದು ಸಚಿವರು ತಿಳಿಸಿದರು. ಪೋಷಕರು ಮೀನುಗಾರರಾಗಿರುವ ವಿದ್ಯಾರ್ಥಿಗಳಿಗೆ ಸರ್ಕಾರ ಉಚಿತ ಶಿಕ್ಷಣ ನೀಡಲಿದೆ. ಮಂಜೇಶ್ವರ ಕ್ಷೇತ್ರದ ಕರಾವಳಿ ಪ್ರದೇಶದಲ್ಲಿ ರಾಜ್ಯ ಸರ್ಕಾರವು ಪ್ರಮುಖ ಅಭಿವೃದ್ಧಿಯನ್ನು ನಡೆಸುತ್ತಿದೆ ಎಂದು ಸಚಿವರು ಹೇಳಿದರು.
ಮಂಜೇಶ್ವರ ಕ್ಷೇತ್ರಕ್ಕೆ ಶಾಸಕರ ನಿಧಿಯಿಂದ 86 ಲಕ್ಷ ರೂ ವೆಚ್ಚದಲ್ಲಿ ಶಾಲೆಗಳಿಗೆ ಲ್ಯಾಪ್‍ಟಾಪ್ ವಿತರಿಸಿದ ಶಾಸಕ ಎಕೆಎಂ ಅಶ್ರಫ್ ಅವರನ್ನು ಸಚಿವರು ಶ್ಲಾಘಿಸಿದರು. ಶಾಸಕ ಎ.ಕೆ.ಎಂ.ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಕೆಎಸ್‍ಸಿಎಡಿಸಿಯ ಸಹಾಯಕ ಎಂಜಿನಿಯರ್ ಬಿನಯಚಂದ್ರನ್ ವರದಿ ಮಂಡಿಸಿದರು. ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷೆ ಶಮೀನಾ ಟೀಚರ್, ಜಿಲ್ಲಾ ಪಂಚಾಯತಿ ಸದಸ್ಯ ಗೋಲ್ಡನ್ ಅಬ್ದುಲ್ ರಹ್ಮಾನ್, ಮಂಜೇಶ್ವರ ಬ್ಲಾಕ್ ಪಂಚಾಯತಿ ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಶಂಸೀನಾ ಅಬ್ದುಲ್ಲ, ಮಂಜೇಶ್ವರ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಮುಹಮ್ಮದ್ ಎಂ ಸಿದ್ದೀಕ್, ಮಂಜೇಶ್ವರ ಗ್ರಾಮ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷೆ ಎಂ.ರಾಧಾ, ಪ್ರಾದೇಶಿಕ ಉಪನಿರ್ದೇಶಕ ಕೆ.ಹೆಚ್.ಸಾಜನ್, ಕಾಸರಗೋಡು ಡಿಡಿಇ ಸಿ.ಕೆ.ವಾಸು, ಡಿಇಒ ಎನ್. ನಂದಿಕೇಶನ್, ಮಂಜೇಶ್ವರ ಉಪಜಿಲ್ಲಾ ಶಿಕ್ಷಣಾಧಿಕಾರಿ ವಿ.ದಿನೇಶ್, ಪಿಟಿಎ ಅಧ್ಯಕ್ಷ ಶಾಹುಲ್ ಹಮೀದ್ ಬಂದ್ಯೋಡು, ಮುಖ್ಯೋಪಾಧ್ಯಾಯಿನಿ ಎ.ಸುನೀತಾ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಮಂಜೇಶ್ವರ ಗ್ರಾಮ ಪಂಚಾಯತಿ ಅಧ್ಯಕ್ಷೆ ಜೀನ್ ಲವೀನಾ ಮೊಂತೆರೊ ಸ್ವಾಗತಿಸಿ, ಶಾಲಾ ಪ್ರಭಾರಿ ಪ್ರಾಂಶುಪಾಲೆ ಶಬಾನಾ ಎಸ್. ವಂದಿಸಿದರು.