ನವದೆಹಲಿ: ದೆಹಲಿ ಮೆಟ್ರೊ ಪ್ರಯಾಣಿಕರು ಇನ್ನುಮುಂದೆ ವಾಟ್ಸ್‌ಆಯಪ್ ಮೂಲಕವೇ ಟಿಕೆಟ್ ಪಡೆದು ಏರ್‌ಪೋರ್ಟ್ ಮಾರ್ಗದಲ್ಲಿ ಪ್ರಯಾಣಿಸಬಹುದಾಗಿದೆ. ಈ ಹೊಸ ಸೇವೆಯನ್ನು ಮಂಗಳವಾರ ಪ್ರಾರಂಭಿಸಲಾಗಿದೆ.
ನವದೆಹಲಿ: ದೆಹಲಿ ಮೆಟ್ರೊ ಪ್ರಯಾಣಿಕರು ಇನ್ನುಮುಂದೆ ವಾಟ್ಸ್‌ಆಯಪ್ ಮೂಲಕವೇ ಟಿಕೆಟ್ ಪಡೆದು ಏರ್‌ಪೋರ್ಟ್ ಮಾರ್ಗದಲ್ಲಿ ಪ್ರಯಾಣಿಸಬಹುದಾಗಿದೆ. ಈ ಹೊಸ ಸೇವೆಯನ್ನು ಮಂಗಳವಾರ ಪ್ರಾರಂಭಿಸಲಾಗಿದೆ.
ಈ ವ್ಯವಸ್ಥೆ ಮೂಲಕ ಪ್ರಯಾಣಿಕರಿಗೆ ವಾಟ್ಸ್‌ಆಯಪ್‌ನಲ್ಲಿ ಕ್ಯೂಆರ್ ಕೋಡ್ ಟಿಕೆಟ್ ಸಿಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ಪ್ರಯಾಣದ ಅನುಭವವನ್ನು ಮತ್ತಷ್ಟು ಜನಸ್ನೇಹಿಯಾಗಿಸುವ ಉದ್ದೇಶದಿಂದ ದೆಹಲಿ ಮೆಟ್ರೊದ ಏರ್‌ಪೋರ್ಟ್ ಎಕ್ಸ್‌ಪ್ರೆಸ್ ಲೈನ್‌ನಲ್ಲಿ ಇಂದಿನಿಂದ ವಾಟ್ಸ್‌ಆಯಪ್ ಮೂಲದ ಟಿಕೆಟಿಂಗ್ ಸಿಸ್ಟಂ ಪರಿಚಯಿಸುತ್ತಿದ್ದೇವೆ' ಎಂದು ದೆಹಲಿ ಮೆಟ್ರೊ ರೈಲು ನಿಗಮ(ಡಿಎಂಆರ್‌ಸಿ) ತಿಳಿಸಿದೆ.
ಈ ಹೊಸ ಸೇವೆಗೆ ಡಿಎಂಆರ್‌ಸಿ ವ್ಯವಸ್ಥಾಪಕ ನಿರ್ದೇಶಕ ವಿಕಾಸ್ ಕುಮಾರ್ ಅವರು, ಮೆಟ್ರೊ ಭವನದಲ್ಲಿ ಚಾಲನೆ ನೀಡಿದರು.
ಈ ಹೊಸ ಸೇವೆಯಿಂದ ವಿಮಾನನಿಲ್ದಾಣ ಮಾರ್ಗದ ಮೆಟ್ರೊ ಬಳಸುವ ಪ್ರಯಾಣಿಕರು ವಾಟ್ಸ್‌ಆಯಪ್ ಮೂಲಕವೇ ಕ್ಯೂಆರ್ ಕೋಡ್ ಆಧರಿತ ಟಿಕೆಟ್ ಪಡೆಯಬಹುದಾಗಿದೆ.
ಈ ವ್ಯವಸ್ಥೆಯು ಪ್ರಯಾಣಿಕರಿಗೆ ಅದರಲ್ಲೂ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ಅತ್ಯಂತ ಅನುಕೂಲಕರವಾಗಲಿದೆ ಎಂದು ಮೆಟ್ರೊ ನಿಗಮ ತಿಳಿಸಿದೆ.
ಈ ಸೇವೆ ಮೂಲಕ ಟಿಕೆಟ್ ಪಡೆಯಲು ಪ್ರಯಾಣಿಕರು ಡಿಎಂಆರ್‌ಸಿಯ ಅಧಿಕೃತ ವಾಟ್ಸ್‌ಆಯಪ್ ಸಂಖ್ಯೆ 9650855800 ಅನ್ನು ಪೋನ್‌ನ ಕಾಂಟ್ಯಾಕ್ಟ್ ಲಿಸ್ಟ್‌ನಲ್ಲಿ ಸೇವ್ ಮಾಡಿಕೊಂಡು ವ್ಯವಹರಿಸಬಹುದಾಗಿದೆ.
ಒಂದು ಅಥವಾ ಗ್ರೂಪ್ ಟಿಕೆಟ್‌ಗಳನ್ನು ಪಡೆಯಬಹುಬಹುದಾಗಿದೆ. ಒಬ್ಬ ವ್ಯಕ್ತಿ ಗರಿಷ್ಠ 6 ಟಿಕೆಟ್ ಪಡೆಯಬಹುದು.