ಕಾಸರಗೋಡು: ಶ್ರೀಕ್ಷೇತ್ರ ಧರ್ಮಸ್ಥಳ ಕೃತಿಗಳನ್ನಾಧರಿಸಿ ಜೂನ್ 4 ರಂದು ಮಧ್ಯಾಹ್ನ 2ಗಂಟೆಗೆ ಉಚಿತ ಶಾಸ್ತ್ರೀಯ ಸಂಗೀತ ತರಬೇತಿ ಮತ್ತು ಸಂಗೀತ ಕಛೇರಿ ಸಾರಡ್ಕದ ಆರಾಧನಾ ಕಲಾಭವನದಲ್ಲಿ ಜರಗಲಿದೆ.ಸಂಗೀತ ವಿದುಷಿ ಶಕುಂತಲಾ ಕೃಷ್ಣ ಭಟ್ ಕುಂಚಿನಡ್ಕ ಕಾರ್ಯಕ್ರಮ ಉದ್ಘಾಟಿಸುವರು.
ಹಾಡುಗಾರಿಕೆಯಲ್ಲಿ ಉಷಾ ರಾಮಕೃಷ್ಣ ಮಣಿಪಾಲ, ಆಶ್ವಿಜಾ ಉಡುಪ ಕಿನ್ನಿಗೋಳಿ ಮತ್ತು ಶೋಭಿತಾ ಭಟ್ ಕಿನ್ನಿಗೋಳಿ ಭಾಗವಹಿಸಲಿದ್ದಾರೆ. ವಯಲಿನ್ ನಲ್ಲಿ ಸುನಾದ ಪಿ ಎಸ್ ಮತ್ತು ಮೃದಂಗದಲ್ಲಿ ಶಾಶ್ವತ್ ಕಂಬಾರ್ ಸಹಕರಿಸುವರು.
ಮಣಿಕೃಷ್ಣಸ್ವಾಮಿ ಅಕಾಡೆಮಿ ಮಂಗಳೂರು ಮತ್ತು ಆರಾಧನಾ ಸಂಗೀತ ಶಾಲೆ ಸಾರಡ್ಕ ನೇತೃತ್ವದಲ್ಲಿ ಕಆರ್ಯಕ್ರಮ ನಡೆಯಲಿರುವುದು.