ಉಪ್ಪಳ: ಆಂಗ್ಲ ಮಾಧ್ಯಮ ತರಗತಿಯಲ್ಲಿ ಮಲಯಾಳವನ್ನು ಪ್ರಥಮ ಭಾಷೆಯಾಗಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ 8ನೇ ತರಗತಿಗೆ ಪ್ರವೇಶ ನೀಡುವುದಿಲ್ಲ ಎಂಬ ನಿಲುವಿನಿಂದ ಬೇಕೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ ಹಿಂದೆ ಸರಿದಿದೆ. ಪ್ರಥಮ ಭಾಷೆ ಯಾವುದೆ ಇರಲಿ, 8ನೇ ತರಗತಿಗೆ ಪ್ರವೇಶ ಪಡೆಯುವ ಆಸಕ್ತಿಯಿರುವ ಎಲ್ಲಾ ಮಕ್ಕಳಿಗೆ ಪ್ರವೇಶವನ್ನು ಅನುಮತಿಸಲಾಗುವುದು ಮತ್ತು ಇಂಗ್ಲೀಷ್, ಮಲಯಾಳಂ, ಕನ್ನಡ ತರಗತಿಗಳಲ್ಲಿ ಪ್ರಥಮ ಭಾಷೆಗೆ ವೇಳಾಪಟ್ಟಿಯಲ್ಲಿ ಅಗತ್ಯ ಹೊಂದಾಣಿಕೆಗಳನ್ನು ಮಾಡಲಾಗುವುದು. ಈ ಬಗ್ಗೆ ಡಿ.ಎಲ್.ಎಸ್.ಎ. ಯಲ್ಲಿ ಪರಿಹರಿಸಲಾಗಿದೆ.
8ನೇ ತರಗತಿಗೆ ಪ್ರವೇಶ ಪಡೆಯುವ ಎಲ್ಲ ವಿದ್ಯಾರ್ಥಿಗಳಿಗೆ ಪ್ರಥಮ ಭಾಷೆಯಿರಲಿ ಪ್ರವೇಶಾತಿ ನೀಡಲಾಗುವುದು ಮತ್ತು ಕನ್ನಡ ತರಗತಿಗಳಲ್ಲಿ ಏಕಕಾಲಕ್ಕೆ ಇಂಗ್ಲಿμï ಮಲಯಾಳಂ ಭಾಷೆಯನ್ನು ಪ್ರಥಮ ಭಾಷೆಯನ್ನಾಗಿ ಬೋಧಿಸಲು ವೇಳಾಪಟ್ಟಿಯಲ್ಲಿ ಅಗತ್ಯ ಹೊಂದಾಣಿಕೆಗಳನ್ನು ಮಾಡಲಾಗುವುದು ಎಂಬ ಷರತ್ತಿನ ಮೇಲೆ ರಾಜಿಯಾಗಿದೆ. ಆಂಗ್ಲ ಮಾಧ್ಯಮದಲ್ಲಿ ಇನ್ನೊಂದು ವಿಭಾಗಕ್ಕೆ ಸಾಕಷ್ಟು ಮಕ್ಕಳಿದ್ದರೆ ಮಲಯಾಳಂ ವಿಭಾಗಕ್ಕೆ ಮಾತ್ರ ಆಂಗ್ಲ ಮಾಧ್ಯಮ ಆರಂಭಿಸಲು ಸಹ ನಿರ್ಧರಿಸಲಾಯಿತು. ಡಿ.ಎಲ್.ಎಸ್.ಎ ಅಧ್ಯಕ್ಷ ಎಂ.ಕೆ.ಅಲಿ ಮಾಸ್ತರ್, ಕೋಶಾಧಿಕಾರಿ ಅಬ್ಬಾಸ್ ವಾನಂದೆ, ಮಹ್ಮದ್ ಕೈಕಂಬ, ಸತ್ಯನ್ ಸಿ.ಉಪ್ಪಳ ಹಾಗೂ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಕೆ.ವಾಸು, ಡಿಇಒ ನಂದಿಕೇಶನ್, ಮುಖ್ಯಶಿಕ್ಷಕಿ ಲಕ್ಷ್ಮಿ ಎಂ. ಎ ವಿಚಾರಣೆಯಲ್ಲಿ ಭಾಗವಹಿಸಿದ್ದರು. ಸಬ್ ಜಡ್ಜ್ ವಂದನಾ.ಆರ್. ಈ ಹಿಂದೆ ವಿಚಾರಣೆ ನಡೆಸಿದ್ದರು.