ನವದೆಹಲಿ: 'ಪೂರ್ವ ಲಡಾಖ್‌ನ ಡೆಪ್ಸಾಂಗ್ ವಲಯದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿಫಲವಾಗಿದೆ. ಅಲ್ಲಿ ಪರಿಸ್ಥಿತಿ ಹದಗೆಡಲು ಬಿಟ್ಟಿರುವುದು ಅಕ್ಷಮ್ಯ' ಎಂದು ಕಾಂಗ್ರೆಸ್ ಪಕ್ಷ ಸೋಮವಾರ ಟೀಕಿಸಿದೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು, 'ಪ್ರಧಾನಿ ಮೋದಿ ಅವರು ಜೂನ್ 19, 2020ರಲ್ಲಿ ಚೀನಾಗೆ ಕ್ಲೀನ್ ಚಿಟ್ ನೀಡಿದ್ದ ಹೇಳಿಕೆಯು ರಾಜಿ ಪ್ರಕ್ರಿಯೆಯಲ್ಲಿ ಭಾರತದ ನಿಲುವನ್ನು ದುರ್ಬಲಗೊಳಿಸಿತು. ಇದಕ್ಕಾಗಿ ಬೆಲೆ ತೆರಬೇಕಾಯಿತು' ಎಂದು ಹೇಳಿದರು.
'ಗಡಿ ಭಾಗದಲ್ಲಿನ ಪರಿಸ್ಥಿತಿ ಈಗ ಆತಂಕಕಾರಿಯಾಗಿದೆ ಎಂಬ ಮಾಧ್ಯಮ ವರದಿ ಉಲ್ಲೇಖಿಸಿದ ಅವರು, ಸೂಕ್ಷ್ಮವಲಯವಾದ ಡೆಪ್ಸಾಂಗ್‌ಗೆ ತೆರಳಲು ಭಾರತದ ಗಸ್ತುಪಡೆಗೆ ಮೂರು ವರ್ಷಗಳಿಂದ ಅವಕಾಶ ದೊರೆತಿಲ್ಲ. ಯಥಾಸ್ಥಿತಿ ಮರಳುವ ಸೂಚನೆಯೂ ಕಾಣುತ್ತಿಲ್ಲ' ಎಂದಿದ್ದಾರೆ.
'ಈಗಿನ ಮಾಹಿತಿ ಪ್ರಕಾರ, ಚೀನಾದ ಪಡೆಗಳು ಈಗ ಭಾರತದ ಗಡಿ ಭಾಗದಲ್ಲಿಯೇ 15-20 ಕಿ.ಮೀ. ಒಳಗೆ ಬಫರ್ ವಲಯ ಇರಬೇಕು ಎಂದು ಬೇಡಿಕೆ ಇಟ್ಟಿವೆ. ಈಗಾಗಲೇ 18 ಕಿ.ಮೀ. ಅತಿಕ್ರಮಿಸಿದ ಬಳಿಕ ಈ ಬೇಡಿಕೆ ಕೇಳಿಬರುತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.