ದೆಹಲಿ: ಜಗತ್ತಿನಾದ್ಯಂತ ಸಾವಿರಾರು ಮಿಲಿಯನ್ ಬಳಕೆದಾರರನ್ನು ಹೊಂದಿರುವ ಮೆಟಾ ಒಡೆತನದ ವ್ಯಾಟ್ಸ್‌ಆಯಪ್ ಕಂಪನಿಯು ತನ್ನ ಬಳಕೆದಾರರಿಗೆ ಹೊಸ ಹೊಸ ಪೀಚರ್ಗಳನ್ನು ನೀಡುತ್ತಲೇ ಬಂದಿದೆ. ಸದ್ಯ, ಖಾಸಗಿತನ ಮತ್ತು ಗೌಪ್ಯತೆಯನ್ನು ಗಮನದಲ್ಲಿಟ್ಟುಕೊಂಡು 'ವ್ಯಾಟ್ಸ್‌ಆಯಪ್ ಚಾಟ್ಲಾಕ್' ಎಂಬ ಫೀಚರ್ನ್ನು ನೀಡಿದೆ.
ಈ ಹೊಸ ಫೀಚರ್ ಪ್ರಕಾರ, ಜನರು ತಮ್ಮ ಖಾಸಗಿ ಚಾಟ್‌ಗಳನ್ನು ಸಂರಕ್ಷಿಸಿಕೊಳ್ಳಬಹುದಾಗಿದ್ದು, ತಮಗೆ ಬೇಕಾದ ಚಾಟ್‌ಗಳನ್ನು ಮಾತ್ರ ಲಾಕ್ ಮತ್ತು ಹೈಡ್ ಮಾಡಬಹುದಾಗಿದೆ. ಹೀಗೆ ಲಾಕ್ ಅಥವಾ ಹೈಡ್ ಮಾಡಿದ ಚಾಟ್ನ್ನು ಫಿಂಗರ್‌ಪ್ರಿಂಟ್ ಅಥವಾ ಪಾಸ್ಕೋಡ್ನ ಮೂಲಕ ತೆರೆಯಲು ಸಾಧ್ಯವಾಗುತ್ತದೆ.
ಹಾಗಾಗಿ ಇದನ್ನು ಬೇರೆ ಯಾರೂ ಸಹ ವೀಕ್ಷಣೆ ಮಾಡಲು ಸಾಧ್ಯವಾಗುವುದಿಲ್ಲ. ಈ ಫೀಚರ್ ಜತೆ ಖಾಸಗಿತನ ರಕ್ಷಿಸುವ ಸಲುವಾಗಿ ಆರ್ಕೈವ್ ಚಾಟ್‌ಗಳು, ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್, ಎನ್‌ಕ್ರಿಪ್ಟ್ ಬ್ಯಾಕಪ್, ಕಣ್ಮರೆಯಾಗುತ್ತಿರುವ ಸಂದೇಶಗಳು(Disappearing messges), ಸ್ಕ್ರೀನ್‌ಶಾಟ್ ನಿರ್ಬಂಧಿಸುವಿಕೆ ಇತರ ವೈಶಿಷ್ಟ್ಯಗಳನ್ನು ವ್ಯಾಟ್ಸ್‌ಆಯಪ್ ಕಂಪನಿಯು ತನ್ನ ಬಳಕೆದಾರರಿಗೆ ನೀಡಿದೆ.