HEALTH TIPS

ಮಕ್ಕಳಲ್ಲಿ ಆತ್ಮ ವಿಶ್ವಾಸ ಬೆಳೆಸೋದು ಹೇಗೆ? ಇಲ್ಲಿದೆ ಟಿಪ್ಸ್!

 ಆತ್ಮ ವಿಶ್ವಾಸ ಅನ್ನೋದು ಮನುಷ್ಯನಿಗೆ ತುಂಬಾನೇ ಮುಖ್ಯವಾಗುತ್ತದೆ. ನಮ್ಮಲ್ಲಿ ಎಷ್ಟೇ ಟ್ಯಾಲೆಂಟ್ ಇದ್ರೂ ಕೂಡ ನಾವು ಸಾಧನೆ ಮಾಡೋದಿಕ್ಕೆ ಸಾಧ್ಯವಿಲ್ಲ. ಇದರ ಜೊತೆಗೆ ಆತ್ಮ ವಿಶ್ವಾಸ ಇದ್ರೆ ಮಾತ್ರ ಜೀವನದಲ್ಲಿ ಮುಂದೆ ಸಾಗೋದಿಕ್ಕೆ ಸಾಧ್ಯ. ಆದ್ರೆ ಈ ಆತ್ಮ ವಿಶ್ವಾಸ ಚಿಕ್ಕಂದಿನಿಂದಲೇ ಬೆಳೆಯಬೇಕು. ಮಕ್ಕಳಲ್ಲಿ ಆತ್ಮ ವಿಶ್ವಾಸ ಬೆಳೆಯಬೇಕಂದ್ರೆ ಅದಕ್ಕೆ ಪೋಷಕರ ಪ್ರೋತ್ಸಾಹ ಬೇಕೇ ಬೇಕು. ಅಷ್ಟಕ್ಕು ಮಕ್ಕಳಲ್ಲಿ ಆತ್ಮ ವಿಶ್ವಾಸ ಬೆಳೆಯುವಂತೆ ಮಾಡೋದು ಹೇಗೆ? ಇಲ್ಲಿದೆ ಟಿಪ್ಸ್


1. ಮಕ್ಕಳಿಗೆ ಪ್ರೋತ್ಸಾಹ ನೀಡಿ
ಮಕ್ಕಳಿಗೆ ಹೊಸ ಹೊಸ ವಿಚಾರಗಳನ್ನು ಕಲಿಯುವ ಕಾತುರ ಇದ್ದೇ ಇರುತ್ತದೆ. ಹೀಗೆ ಅವರು ಏನಾದರೂ ಒಂದು ಹೊಸತನ್ನು ಮಾಡಿ ಅದರಲ್ಲಿ ಸೋತು ಹೋದರೆ ಮಕ್ಕಳು ನೊಂದುಕೊಳ್ಳುತ್ತಾರೆ. ಆಗ ಪೋಷಕರು ಮಕ್ಕಳನ್ನು ಶ್ಲಾಘಿಸಬೇಕು. ಮತ್ತು ಹೊಸ ಕೆಲಸ ಮಾಡೋದಕ್ಕೆ ಹುರಿದುಂಬಿಸಬೇಕು. ಆಗ ಖಂಡಿತ ಅವರು ಖುಷಿ ಪಡುತ್ತಾರೆ. ಮತ್ತು ಅವರಲ್ಲಿ ಆತ್ಮ ವಿಶ್ವಾಸ ಹೆಚ್ಚಾಗುತ್ತದೆ.
2. ಬೇರೆಯವರೊಂದಿಗೆ ಹೋಲಿಕೆ ಮಾಡಬೇಡಿ
ಈ ಪ್ರಪಂಚದಲ್ಲಿ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ವಿಶೇಷವಾದ ಟ್ಯಾಲೆಂಟ್‌ ಇದ್ದೇ ಇರುತ್ತದೆ. ನಿಮ್ಮ ಮಗು ಆತನ ಒಡಹುಟ್ಟಿದವರ ಹಾಗೆ ಅಥವಾ ಆತನ ಸ್ನೇಹಿತನಂತೆ ಇಲ್ಲ ಎಂದು ನಿಮ್ಮ ಮಗುವನ್ನು ಹೀಯಾಳಿಸಬೇಡಿ. ಇದರಿಂದ ಆತನಲ್ಲಿ ಕೀಳರಿಮೆ ಉಂಟಾಗಬಹುದು. ಯಾವುದೇ ಕೆಲಸವನ್ನೂ ಮಾಡೋದಕ್ಕೆ ಆ ಮಗು ಹಿಂಜರಿಯುವಂತೆ ಆಗಿ ಬಿಡಬಹುದು. ಇದರಿಂದ ಆ ಮಗುವಿನಲ್ಲಿ ಒತ್ತಡ, ಖಿನ್ನತೆ ಹೆಚ್ಚಾಗಿ ಆತ್ಮ ವಿಶ್ವಾಸ ಕುಂದಿ ಹೋಗಬಹುದು.

3. ಪೋಷಕರಲ್ಲೂ ಆತ್ಮ ವಿಶ್ವಾಸ ಇರಲಿ
ಮನೆಯೇ ಮೊದಲ ಪಾಠ ಶಾಲೆ, ತಂದೆ- ತಾಯಿಯೇ ಮಕ್ಕಳ ಮೊದಲ ಗುರು. ಮಕ್ಕಳು ಮನೆಯಲ್ಲಿ ಏನೇ ಕಲಿತರೂ ಅದು ಆ ಮಗುವಿನ ತಂದೆ- ತಾಯಿಯಿಂದಲೇ ಬಳುವಳಿಯಾಗಿ ಬಂದಿರೋದು. ಹೀಗಾಗಿ ನಿಮ್ಮ ನಡವಳಿಕೆಯನ್ನೇ ನೋಡಿ ಮಕ್ಕಳು ಕಲಿಯುತ್ತಾರೆ. ನಿಮ್ಮಲ್ಲಿ ಆತ್ಮ ವಿಶ್ವಾಸ ಇದ್ದರೆ ಮಕ್ಕಳು ಖಂಡಿತ ಅದನ್ನು ನೋಡಿ ಕಲಿಯುತ್ತಾರೆ. ಜೊತೆಗೆ ನಿಮ್ಮ ಪ್ರೋತ್ಸಾಹವು ಬೇಕು.

4. ಚಿಕ್ಕ- ಚಿಕ್ಕ ಜವಾಬ್ದಾರಿಗಳನ್ನು ನೀಡಿ
ಇತ್ತೀಚಿನ ಕಾಲದಲ್ಲಿ ಪೋಷಕರು ಮಕ್ಕಳನ್ನು ಅತಿಯಾಗಿ ಕಾಳಜಿ ಮಾಡಿ ಸಾಕುತ್ತಾರೆ. ಮಕ್ಕಳ ಪ್ರತಿಯೊಂದು ಕೆಲಸವನ್ನು ಅವರೇ ಮಾಡುತ್ತಾರೆ. ಅದರ ಬದಲಾಗಿ ಅವರ ವಯಸ್ಸಿಗೆ ತಕ್ಕ ಚಿಕ್ಕ ಚಿಕ್ಕ ಜವಾಬ್ದಾರಿಗಳನ್ನು ನಿಮ್ಮ ಮಕ್ಕಳಿಗೆ ನೀಡಿ. ಅವರು ತಿಂದ ಲೋಟ, ತಟ್ಟೆಯನ್ನು ಅವರೇ ತೊಳೆಯಲಿ, ಬಟ್ಟೆಯನ್ನು ಮಡಿಚಿಡೋದು, ಚಿಕ್ಕ ಪುಟ್ಟ ಮನೆ ಕೆಲಸ ಮಾಡಿಸುವುದರಿಂದ ಅವರ ಆತ್ಮ ವಿಶ್ವಾಸ ಹೆಚ್ಚಾಗುತ್ತದೆ. ಜೊತೆಗೆ ಅವರಿಗೆ ಕೆಲಸದ ಮಹತ್ವವು ಅರಿವಾಗುತ್ತದೆ.

5. ಕೆಲವೊಂದು ನಿರ್ಧಾರಗಳನ್ನು ಅವರೇ ತೆಗೆದುಕೊಳ್ಳಲಿ
ಮಕ್ಕಳ ಮೇಲೆ ಎಲ್ಲಾ ವಿಚಾರಕ್ಕೂ ಒತ್ತಡ ಹೇರುವುದು ಸರಿಯಲ್ಲ. ಕೆಲವೊಂದು ವಿಚಾರಗಳಲ್ಲಿ ಮಕ್ಕಳಿಗೆ ಅವರದ್ದೇ ಆದ ಆಯ್ಕೆಗಳು, ನಿರ್ಧಾರಗಳು ಇರುತ್ತದೆ. ಅದು ಅವರ ಇಚ್ಛೆಯ ಪ್ರಕಾರವೇ ಆಗಲಿ. ಎಲ್ಲದಕ್ಕೂ ನೀವು ಅಡ್ಡಗಾಲು ಹಾಕೋದಕ್ಕೆ ಹೋಗಬೇಡಿ. ಇದರಿಂದ ಅವರ ಆತ್ಮ ವಿಶ್ವಾಸ ಕುಂದಬಹುದು. ದೊಡ್ಡವರಾದ ಮೇಲೂ ಮಕ್ಕಳು ನಿಮ್ಮ ಮೇಲೆ ಅವಲಂಬಿತವಾಗಬೇಕಾಗುತ್ತದೆ.

6. ಸಮಸ್ಯೆಗಳನ್ನು ಅವರೇ ಪರಿಹರಿಸಿಕೊಳ್ಳಲಿ
ಮಕ್ಕಳಿಗೂ ಕೆಲವೊಂದು ವಿಚಾರಗಳಲ್ಲಿ ಚಿಕ್ಕ- ಪುಟ್ಟ ಸಮಸ್ಯೆಗಳು ಎದುರಾಗುತ್ತದೆ. ಆಗ ಆ ಸಮಸ್ಯೆಗಳನ್ನು ಪರಿಹರಿಸೋದಕ್ಕೆ ಪೋಷಕರು ಮುಂದಾಗಬಾರದು. ಬದಲಾಗಿ ನಿಮ್ಮ ಮಕ್ಕಳ ಮೇಲೆ ಬಿಟ್ಟು ಬಿಡಿ. ಸಮಸ್ಯೆಯಿಂದ ಹೊರ ಬರೋದು ಹೇಗೆ ಅನ್ನೋದು ಅವರು ನಿಧಾನವಾಗಿ ಕಲಿತುಕೊಳ್ಳುತ್ತಾರೆ. ಇದರಿಂದ ಅವರ ಆತ್ಮ ವಿಶ್ವಾಸ ಕೂಡ ಹೆಚ್ಚಾಗುತ್ತದೆ.

7. ಅವರ ವಯಸ್ಸಿಗೆ ತಕ್ಕ ಹಾಗೆ ಇದ್ದರೆ ಸಾಕು ಮಕ್ಕಳು ಅವರ ವಯಸ್ಸಿಗೆ ತಕ್ಕ ಕೌಶಲ್ಯಗಳನ್ನು ಬೆಳೆಸಿಕೊಂಡರಷ್ಟೇ ಸಾಕು. ಆದರೆ ಕೆಲವೊಂದು ಸಲ ಪೋಷಕರು ಮಕ್ಕಳಿಂದ ಅದಕ್ಕೂ ಮೀರಿದ ಕೌಶಲ್ಯಗಳನ್ನು ಬಯಸುತ್ತಾರೆ. ಮಕ್ಕಳ ಮೇಲೆ ಒತ್ತಡ ಹಾಕೋದಕ್ಕೆ ಶುರು ಮಾಡುತ್ತಾರೆ. ಇದರಿಂದ ಆತ್ಮ ವಿಶ್ವಾಸ ಕುಗ್ಗಿ ಹೋಗುತ್ತದೆ ಹೊರತು ಹೆಚ್ಚಾಗೋದಿಲ್ಲ. ಹೀಗಾಗಿ ಅವರ ಮೇಲೆ ಒತ್ತಡ ಹೇರಬೇಡಿ. ಅವರು ಮಾಡುವ ಕೆಲಸಕ್ಕೆ ಪ್ರೋತ್ಸಾಹ ನೀಡಿದರಷ್ಟೇ ಸಾಕು. ಮಕ್ಕಳಿಗೆ ಚಿಕ್ಕಂದಿನಿಂದಲೇ ಆತ್ಮ ವಿಶ್ವಾಸ ಹೆಚ್ಚಾಗುವ ಹಾಗೆ ಕೆಲವೊಂದು ಕ್ರಮಗಳನ್ನು ಕೈಗೊಳ್ಳಿ. ಅವರು ಉತ್ತಮ ಕೆಲಸ ಮಾಡಿದಾಗ ಮಕ್ಕಳ ಪ್ರತಿಯೊಂದು ಹೆಜ್ಜೆಗೂ ಅವರಿಗೆ ಪ್ರೋತ್ಸಾಹ ನೀಡಿ.





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries