ತಿರುವನಂತಪುರಂ: ಕಾಸರಗೋಡಿನಿಂದ ತಿರುವನಂತಪುರಂವರೆಗಿನ ಟಿಕೆಟ್ ವಂದೇಭಾರತಕ್ಕೆ ಅತಿ ಹೆಚ್ಚು ಆದಾಯ ತಂದುಕೊಡುತ್ತಿದೆ ಎಂದು ವರದಿಯಾಗಿದೆ.
ಈ ಪ್ರವಾಸಕ್ಕೆ ಹೆಚ್ಚಿನ ಜನರು ಟಿಕೆಟ್ ಕಾಯ್ದಿರಿಸುತ್ತಾರೆ. ಏಪ್ರಿಲ್ 28 ರಿಂದ ಮೇ 3 ರವರೆಗೆ ಮೊದಲ ಆರು ದಿನಗಳಿಂದ ಕಾಸರಗೋಡು-ತಿರುವನಂತಪುರ ಅಥವಾ ತಿರುವನಂತಪುರಂ-ಕಾಸರಗೋಡು ಟಿಕೆಟ್‍ಗಳಿಂದಲೇ 1.17 ಕೋಟಿ ರೂ. ಆದಾಯ ಲಭಿಸಿದೆ.
ಆರು ದಿನಗಳ ಪ್ರಯಾಣದಲ್ಲಿ ವಂದೇಭಾರತ್ ಒಟ್ಟು 2.7 ಕೋಟಿ ಗಳಿಸಿದೆ. ಈ ಆರು ದಿನಗಳ ಪ್ರಯಾಣದಲ್ಲಿ 27000 ಜನರು ಪ್ರಯಾಣಿಸಿದ್ದಾರೆ. ಮೇ 14ರವರೆಗೆ ವಂದೇಭಾರತ್ ಸೀಟ್ ಬುಕ್ಕಿಂಗ್ ಪೂರ್ಣವಾಗಿದೆ.