ಕಾಸರಗೋಡು: ಮಂಜೇಶ್ವರ ಪೆÇೀಲೀಸ್ ಠಾಣೆ ವ್ಯಪ್ತಿಯಲ್ಲಿ ಮೂರು ದಿವಸಗಳ ಕಾಲಾವಧಿಯೊಳಗೆ ಭಾರೀ ಪ್ರಮಾಣದ ಮಾದಕ ದ್ರವ್ಯ ವಶಪಡಿಸಿಕೊಳ್ಳುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಪೊಲೀಸರನ್ನು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ.ವೈಭವ್ ಸಕ್ಸೇನಾ ಅಭಿನಂದಿಸಿದರು. ಡಾ. ವೈಭವ್ ಸಕ್ಸೇನಾ ಅವರ ನಿರ್ದೇಶ ಪ್ರಕಾರ ಕರ್ನಾಟಕ-ಕೇರಳ ಗಡಿ ಭಾಗದಲ್ಲಿ ಕಟ್ಟುನಿಟ್ಟಿನ ವಾಹನ ತಪಾಸಣೆ ನಡೆಸಿದ ಪೆÇಲೀಸರು ಮಾರಕ ಮಾದಕ ದ್ರವ್ಯ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ. ಮೇ 11ರಂದು ಕುಂಜತ್ತೂರು ನಿವಾಸಿ ಮಹಮ್ಮದ್ ಸುಹೈಲ್ ಎಂಬಾತನನ್ನು ಬಂಧಿಸಿ ಈತನ ಆಟೋರಿಕ್ಷಾದಿಂದ 56.080 ಗ್ರಾಂ.ಎಂಡಿಎಂಎ ಪತ್ತೆ ಹಚ್ಚಲಾಗಿತ್ತು.
ಮೇ 14ರಂದು ಮಂಜೇಶ್ವರದಲ್ಲಿ 59.850 ಗ್ರಾಂ ಎಂಡಿಎಂಎ ಮತ್ತು ಆಲ್ಟೋ ಕಾರನ್ನು ವಶಪಡಿಸಿಕೊಂಡು ಆರೋಪಿಗಳಾದ ಮಹಮ್ಮದ್ ಹಾರಿಸ್ ಪಚ್ಚಂಬಳ ಮತ್ತು ಇಬ್ರಾಹಿಂ ಬಾದುಶಾ ಇಚ್ಲಂಗೋಡ್ ಎಂಬವರನ್ನು ಬಂಧಿಸಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇಂಬರ್‍ನಲ್ಲಿ ನಡೆದ ಸಮಾರಂಭದಲ್ಲಿ ಮಂಜೇಶ್ವರ ಪೆÇಲೀಸ್ ಠಾಣೆ ಅಧಿಕಾರಿಗಳ ಕಾರ್ಯನಿರ್ವಹಣೆಯನ್ನು ಶ್ಲಾಘಿಸಿದರು. ಜಿಲ್ಲೆಯಲ್ಲಿ ಮಾದಕ ವಸ್ತುಗಳ ವಿರುದ್ಧ ಕಠಿಣ ಕಾನೂನು ಸಮರ ಪರಿಣಾಮಕಾರಿಯಾಗಲಿದೆ ಎಂದು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಾ.ವೈಭವ್ ಸಕ್ಸೇನಾ ತಿಳಿಸಿದ್ದಾರೆ.