ಕೊಚ್ಚಿ: ತಾನೂರಿನಲ್ಲಿ ಅಪಘಾತಕ್ಕೆ ಕಾರಣವಾದ ದೋಣಿಯ ಮಾಲೀಕ ತಾನೂರ್ ಮೂಲದ ನಾಸಿರ್ ಎಂಬವರ ವಾಹನವನ್ನು ಕೊಚ್ಚಿಯಲ್ಲಿ ವಶಪಡಿಸಲಾಗಿದೆ.
ವಾಹನದಲ್ಲಿದ್ದ ನಾಸಿರ್ ಅವರ ಸಹೋದರ ಸಲಾಮ್ ಮತ್ತು ಅವರ ನೆರೆಹೊರೆಯವರಾದ ಮುಹಮ್ಮದ್ ಶಾಫಿ ಅವರನ್ನು ಪೆÇಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಅಪಘಾತ ಸಂಭವಿಸಿದ ತಕ್ಷಣ ನಾಸರ್ ತಲೆಮರೆಸಿಕೊಂಡಿದ್ದಾನೆ ಎಂದು ಪೆÇಲೀಸರು ಮಾಹಿತಿ ನೀಡಿದ್ದಾರೆ. ಆತನ ವಿರುದ್ಧ ಜಾಮೀನು ರಹಿತ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ನಾಸರ್ ಅವರ ಮೊಬೈಲ್ ಪೋನ್ ಅನ್ನು ಸಹ ಪೆÇಲೀಸರು ವಶಪಡಿಸಿಕೊಂಡಿದ್ದಾರೆ. ಪಲರಿವಟ್ಟಂ ಪೆÇಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ. ಅಪಘಾತದಲ್ಲಿ ಬೋಟ್ ಮಾಲೀಕನ ವಿರುದ್ಧ ಪೆÇಲೀಸರು ನರಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅವರ ಮನೆಯೊಳಗೆ ಜನರಿದ್ದರೂ ಯಾರೂ ಹೊರಗೆ ಬರುತ್ತಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ. ಎರ್ನಾಕುಳಂನ ಯಾವುದೇ ಪೆÇಲೀಸ್ ಠಾಣೆಯಲ್ಲಿ ನಾಸರ್ ಶರಣಾಗಬಹುದು ಎಂದು ಪೆÇಲೀಸರು ತೀರ್ಮಾನಿಸಿದ್ದಾರೆ.
ನಾಸರ್ ಮನೆಯಲ್ಲಿಲ್ಲ ಎಂದು ವರದಿಯಾಗಿದೆ. ನಾಸರ್ ದೀರ್ಘ ಕಾಲ ವಿದೇಶದಲ್ಲಿದ್ದ ಬಳಿಕ ಸ್ವದೇಶಕ್ಕೆ ಮರಳಿದ ಬಳಿಕ ಬೋಟ್ ಸೇವೆ ಆರಂಭಿಸಿದ್ದ. ಪೊನ್ನಾನಿಯ ಅನಧಿಕೃತ ಯಾರ್ಡ್‍ನಲ್ಲಿ ಮೀನುಗಾರಿಕಾ ದೋಣಿಯನ್ನು ಪರಿವರ್ತಿಸಲಾಗಿದೆ. ಅಲಪ್ಪುಳ ಬಂದರಿನ ಮುಖ್ಯ ಸರ್ವೇಯರ್ ಕಳೆದ ತಿಂಗಳು ಬೋಟ್ ಸಮೀಕ್ಷೆ ನಡೆಸಿ ಫಿಟ್‍ನೆಸ್ ಪ್ರಮಾಣಪತ್ರವನ್ನು ನೀಡಿದ್ದರು ಎಂದು ಸಹ ಸೂಚಿಸಲಾಗಿದೆ.