ಕುಂಬಳೆ: ಕಿದೂರು ಕುಂಟಂಗೇರಡ್ಕ ಕುಪ್ಪೆ ಪಂಜುರ್ಲಿ ಹಾಗೂ ಮೊಗೇರ ದೈವ ಭಂಡಾರ ಕೋಟ್ಯದ ಪುನಃಪ್ರತಿಷ್ಠಾ ಕಲಶಾಭಿಷೇಕ ಹಾಗೂ ನೇಮೋತ್ಸವ ಇಂದು(ಬುಧವಾರ)ಆರಂಭಗೊಂಡು 5ರವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಅದ್ಧೂರಿಯಾಗಿ ನಡೆಯಲಿದೆ ಎಂದು ಸಂಬಂಧಪಟ್ಟವರು ಕುಂಬಳೆಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿರುವರು. ಈ ಬಗ್ಗೆ ಕುಂಬಳೆ ಪ್ರೆಸ್ ಪೋರಂ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರತಿಷ್ಠಾ ಕಲಶಾಭಿಷೇಕ ಸಮಿತಿಯ ಪದಾಧಿಕಾರಿಗಳು ಮಾಹಿತಿ ನೀಡಿದರು.
ಇಂದು ಮಧ್ಯಾಹ್ನ 3.5ಕ್ಕೆ ದೇವಸ್ಥಾನದ ತಂತ್ರಿಗಳ ಆಗಮನ ಹಾಗೂ ಪೂರ್ಣಕುಂಭ ಸ್ವಾಗತ ನಡೆಯಲಿದೆ. 5.15ಕ್ಕೆ ಉಗ್ರಾಣ ಮುಹೂರ್ತ ನಡೆಯಲಿದೆ. ಸಂಜೆ 6ಕ್ಕೆ ಭಜನೆ, ದೀಪ ಪ್ರತಿಷ್ಠೆ ನಡೆಯಲಿದೆ.
ನಾಳೆ(ಮೇ.4) ಬೆಳಗ್ಗೆ 6ಕ್ಕೆ ಭಜನೆಯ ಮಂಗಳಾಚರಣೆ, ಬಳಿಕ ಗಣಪತಿ ಹೋಮ ಹಾಗೂ ಪ್ರಸನ್ನ ಪೂಜೆ ನಡೆಯಲಿದೆ. 7.45 ರಿಂದ 8.30 ರ ನಡುವೆ ದೇವರುಗಳ ಪುನರ್ ಪ್ರತಿಷ್ಠೆ, ಕಲಶಾಭಿಷೇಕ, ತಂಬಿಲ, ಮಹಾಪೂಜೆ ಜರಗಲಿದೆ. ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 9.30 ರಿಂದ ಅಮಲರಾಜ್ ಸೂರಂಬೈಲು ನೇತೃತ್ವದಲ್ಲಿ ಶಾಸ್ತ್ರೀಯ ಸಂಗೀತ ಕಚೇರಿ ನಡೆಯಲಿದೆ. ಬಳಿಕ ನಾಟ್ಟು ಪೊಲಿಮ ಕಲಾವೇದಿಕೆಯಿಂದ ಜಾನಪದ ಗೀತೆ ನಡೆಯಲಿದೆ. ಮಧ್ಯಾಹ್ನ 1ಕ್ಕೆ ಅನ್ನಸಂತರ್ಪಣೆ, ಮಧ್ಯಾಹ್ನ 1.30ಕ್ಕೆ ಗುಳಿಗ ದೈವಕೋಲ, 3 ಕ್ಕೆ ಮೊಗೇರ ದೈವದ ಕೋಲ ನಡೆಯಲಿದೆ. ಸಂಜೆ 6ಕ್ಕೆ ಎಸ್ ಪಿ ಕೆ ಫ್ರೆಂಡ್ಸ್ ಕ್ಲಬ್ ಕುಂಟಂಗೇರಡ್ಕ ನೇತೃತ್ವದಲ್ಲಿ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ. ಸಂಜೆ 7ಕ್ಕೆ ನಡೆಯುವ ಧಾರ್ಮಿಕ ಸಭೆಯನ್ನು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಉದ್ಘಾಟಿಸುವರು. ಶಾಸಕ ಎ.ಕೆ.ಎಂ.ಅಶ್ರಫ್ ಅಧ್ಯಕ್ಷತೆ ವಹಿಸುವರು. ಕುಂಬಳೆ ಪಂಚಾಯತಿ ಅಧ್ಯಕ್ಷೆ ಯು.ಪಿ.ತಾಹಿರಾ, ಮಂಜುನಾಥ ಆಳ್ವ ಮಡ್ವ, ಕೆ.ಕೆ.ಶೆಟ್ಟಿ ಕುತ್ತಿಕಾರ್, ನ್ಯಾಯವಾದಿ.ಸುಬ್ಬಯ್ಯ ರೈ, ಕೆ.ಪಿ.ರೈ ಕುತ್ತಿಕಾರ್, ಪಂಚಾಯತಿ ಸದಸ್ಯರಾದ ರವಿರಾಜ್, ಪುಷ್ಪಲತಾ, ಸುರೇಶ್ ಕುಮಾರ್ ಶೆಟ್ಟಿ, ಮುಖೇಶ್, ಸುಕೇಶ್ ಭಂಡಾರಿ, ಮುಖಂಡರಾದ ರಘುರಾಮ ರೈ, ಡಿ.ಎಸ್. ಮೋಹನ್ ಕುಮಾರ್, ಕೃಷ್ಣಪ್ಪ ಪೂಜಾರಿ, ಬಾಬು ಯು. ಪಚ್ಲಂಪಾರೆ, ಕೆ.ಸಿ.ಮೋಹನನ್, ಚೆರಿಯಪ್ಪು, ಶಿವರಾಮ ಶೆಟ್ಟಿ, ಆನಂದ ರೈ ಕಾಜೂರು, ಕೆ.ಎಲ್.ಪುಂಡರೀಕಾಕ್ಷ, ಸಂಜೀವ ಮರಿಕೆ ಮಾತನಾಡುವರು. ಪಿ.ನರಹರಿ ರಾವ್ ಧಾರ್ಮಿಕ ಉಪನ್ಯಾಸ ನೀಡುವರು. ರಾತ್ರಿ 8 ರಿಂದ ಪ್ರಸಾದ ಭೋಜನ. 5ರಂದು ಬೆಳಗ್ಗೆ 5ರಿಂದ ಅರಸಿನ ಪ್ರಸಾದ ವಿತರಣೆ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಮಂಜುನಾಥ ಆಳ್ವ, ಕೆ.ಎಲ್.ಪುಂಡರೀಕಾಕ್ಷ, ಚಂದ್ರ ಕಾಜೂರ್, ಸಂಜೀವ ಮರಿಕೆ ಮಾಹಿತಿ ನೀಡಿದರು.