ಕಾಸರಗೋಡು: ಜಿಲ್ಲಾ ಜೀವ ವೈವಿಧ್ಯ ನಿರ್ವಹಣಾ ಸಮಿತಿ ಹಾಗೂ ಪಳ್ಳಿಕ್ಕೆರೆ ಗ್ರಾಮ ಪಂಚಾಯಿತಿ ಸಂಯುಕ್ತಾಶ್ರಯದಲ್ಲಿ ಜೀವವೈವಿಧ್ಯ ದಿನಾಚರಣೆ ಹಾಗೂ ಜಿಲ್ಲಾ ವಿಚಾರ ಸಂಕಿರಣ ಕರಿಚ್ಚೇರಿ ಸರ್ಕಾರಿ ಯು.ಪಿ.ಶಾಲೆಯಲ್ಲಿ ಜರುಗಿತು. ಪಳ್ಳಿಕ್ಕರ ಗ್ರಾ.ಪಂ ಅಧ್ಯಕ್ಷ ಎಂ.ಕುಮಾರನ್ ಸಮಾರಂಭ ಉದ್ಘಾಟಿಸಿದರು. ಗ್ರಾಪಂ ಸದಸ್ಯ ಎಂ.ಗೋಪಾಲನ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಾಗಾರದಲ್ಲಿ ಖ್ಯಾತ ಪರಿಸರ ತಜ್ಞ ಡಾ.ಇ.ಉಣ್ಣಿಕೃಷ್ಣನ್ ಅವರು ಪರಿಸರ ಸಂರಕ್ಷಣೆಯಲ್ಲಿ ಬನಗಳ ಪಾತ್ರ ಹಾಗೂ ಜೀವವೈವಿಧ್ಯ ಕುರಿತು ಉಪನ್ಯಾಸ ನೀಡಿದರು. ಜೀವವೈವಿಧ್ಯ ಕ್ಲಬ್ ಮತ್ತು ಪ್ರದೇಶದ ವಿವಿಧ ಗ್ರಾಮ ಪಂಚಾಯಿತಿಗಳ ಪ್ರತಿನಿಧಿಗಳು ಸೇರಿದಂತೆ ಸುಮಾರು 80 ಮಂದಿ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು. ಜೀವ ವೈವಿಧ್ಯ ಪರಿಷತ್ತಿನ ಜಿಲ್ಲಾ ಸಂಯೋಜಕಿ ಅಖಿಲಾ ಸ್ವಾಗತಿಸಿದರು. ಪಳ್ಳಿಕ್ಕೆರೆ ಬಿಎಂಸಿ ಸಂಸ್ಥಾಪಕ ಜಯಪ್ರಕಾಶ್ ಅರವತ್ ವಂದಿಸಿದರು.