ನವದೆಹಲಿ: ಎನ್‌ಡಿಟಿವಿಯ ಹಿರಿಯ ಪತ್ರಕರ್ತೆ ಸಾರಾ ಜಾಕೋಬ್ ಅವರು ಸುದ್ದಿ ವಾಹಿನಿಯೊಂದಿಗಿನ ಎರಡು ದಶಕಗಳ ತಮ್ಮ ಸಂಬಂಧ ಕಡಿದುಕೊಂಡಿದ್ದು, ರಾಜೀನಾಮೆ ನೀಡಿದ್ದಾರೆ.
ಎನ್ ಡಿಟಿವಿ ತೊರೆಯುವ ನಿರ್ಧಾರ ಪ್ರಕಟಿಸಿದ ಸಾರಾ, "ಕಳೆದ ರಾತ್ರಿ, ನಾನು NDTV ಗೆ ರಾಜೀನಾಮೆ ನೀಡಿದ್ದೇನೆ. ಭಾರತದ ಶ್ರೇಷ್ಠ ಮಾಧ್ಯಮ ಸಂಸ್ಥೆಯೊಂದನ್ನು ಸ್ಥಾಪಿಸಿದ್ದಕ್ಕಾಗಿ ಡಾ.(ಪ್ರಣೋಯ್) ರಾಯ್ ಮತ್ತು ರಾಧಿಕಾ ರಾಯ್ ಅವರಿಗೆ ಧನ್ಯವಾದಗಳು" ಎಂದು ಹೇಳಿದ್ದಾರೆ.
"ಒಬ್ಬ ವರದಿಗಾರ್ತಿಯಿಂದ ನನ್ನದೇ ಸ್ವಂತ ಕಾರ್ಯಕ್ರಮ ಹೊಂದುವವರೆಗೆ ಎನ್‌ಡಿಟಿವಿ ನನಗೆ ಅವಕಾಶ ನೀಡಿದ. ಎಲ್ಲದಕ್ಕೂ ನಾನು ಶಾಶ್ವತವಾಗಿ ಕೃತಜ್ಞಳಾಗಿದ್ದೇನೆ" ಸಾರಾ ತಿಳಿಸಿದ್ದಾರೆ.
NDTV ಯಲ್ಲಿನ ಅತ್ಯಂತ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದಾದ ವಿ ದಿ ಪೀಪಲ್ ಎಂಬ ಟಾಕ್ ಶೋ ಅನ್ನು ಸಾರಾ ಅವರು ಹೋಸ್ಟ್ ಮಾಡುತ್ತಿದ್ದರು.