ನವದೆಹಲಿ: ಪ್ರಸ್ತಕ ವರ್ಷದ ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟು (ಎನ್‌ಐಆರ್‌ಎಫ್) ರ‍್ಯಾಂಕಿಂಗ್‌ನ ಮೊದಲ ಹತ್ತು ಅಗ್ರ ಶ್ರೇಯಾಂಕದ ಶಿಕ್ಷಣ ಸಂಸ್ಥೆಗಳಲ್ಲಿ ದೇಶದ ವಿವಿಧ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಸಂಸ್ಥೆಗಳು ಪಾರಮ್ಯ ಮೆರೆದಿದ್ದು, ಐಐಟಿ ಮದ್ರಾಸ್, ಐಐಟಿ ದೆಹಲಿ, ಐಐಟಿ ಕಾನ್ಪುರ ಮೊದಲ ಐದು ಸ್ಥಾನಗಳನ್ನು ಪಡೆದುಕೊಂಡಿವೆ.
ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯ (ಜೆಎನ್‌ಯು) ಮತ್ತೊಮ್ಮೆ ಹತ್ತು ಅಗ್ರ ಶ್ರೇಯಾಂಕಗಳಲ್ಲಿ ಸ್ಥಾನ ಪಡೆದ ಏಕೈಕ ಕಲಾ ಶಿಕ್ಷಣ ಸಂಸ್ಥೆಯಾಗಿದೆ.
ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ದೇಶದ ಅತ್ಯುತ್ತಮ ವಿಶ್ವವಿದ್ಯಾಲಯ ಎಂಬ ಶ್ರೇಯಕ್ಕೆ ಮತ್ತೊಮ್ಮೆ ಭಾಜನವಾಗಿದೆ. ಅಂತೆಯೇ, ಅತ್ಯುತ್ತಮ ಶಿಕ್ಷಣ ಸಂಸ್ಥೆಗಳ ಪೈಕಿಯೂ ಬೆಂಗಳೂರಿನ ಐಐಎಸ್‌ಸಿಯು 2ನೇ ಸ್ಥಾನ ಪಡೆದಿದೆ.
ಒಟ್ಟಾರೆ ವಿಭಾಗದಲ್ಲಿ ಮೊದಲ ಹತ್ತರಲ್ಲಿ ಸ್ಥಾನ ಪಡೆದ ಇತರ ಸಂಸ್ಥೆಗಳ ಪೈಕಿ ಐಐಟಿ ಬಾಂಬೆ, ಐಐಟಿ ಕಾನ್ಪುರ, ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ದೆಹಲಿ, ಐಐಟಿ ಖರಗ್‌ಪುರ, ಐಐಟಿ ರೂರ್ಕಿ ಮತ್ತು ಐಐಟಿ ಗುವಾಹಟಿ ಇವೆ.
ದೆಹಲಿಯ ವಿಶ್ವವಿದ್ಯಾಲಯದ ಮಿರಾಂಡಾ ಹೌಸ್ ಕಾಲೇಜು ಮತ್ತು ಹಿಂದೂ ಕಾಲೇಜು, ಚೆನ್ನೈನ ಪ್ರೆಸಿಡೆನ್ಸಿ ಕಾಲೇಜು ಮತ್ತೊಮ್ಮೆ ಅತ್ಯುತ್ತಮ ಕಾಲೇಜುಗಳು ಎಂಬ ಮನ್ನಣೆ ಪಡೆದಿವೆ. ಕೊಯಮತ್ತೂರಿನ ಪಿಎಸ್‌ಜಿಆರ್ ಕೃಷ್ಣಾಮ್ಮಾಳ್ ಕಾಲೇಜ್ ಫಾರ್ ವುಮೆನ್ ಮತ್ತು ಕೋಲ್ಕತ್ತದ ಸೇಂಟ್ ಕ್ಸೇವಿಯರ್ಸ್ ಕಾಲೇಜು ಈ ವರ್ಷ ಐದು ಅಗ್ರ ಕಾಲೇಜುಗಳಲ್ಲಿ ಸ್ಥಾನ ಪಡೆದಿವೆ.
ವೈದ್ಯಕೀಯ ಕಾಲೇಜುಗಳಲ್ಲಿ ಪೈಕಿ ದೆಹಲಿಯ ಏಮ್ಸ್ ಹೊರತುಪಡಿಸಿ, ಚಂಡೀಗಢದ ವೈದ್ಯಕೀಯ ಶಿಕ್ಷಣ ಮತ್ತು ಸ್ನಾತಕೋತ್ತರ ಸಂಶೋಧನಾ ಸಂಸ್ಥೆ, ವೆಲ್ಲೂರಿನ ಕ್ರಿಶ್ಚಿಯನ್ ವೈದ್ಯಕೀಯ ಕಾಲೇಜು, ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್), ಪುದುಚೇರಿಯ ಜವಾಹರಲಾಲ್ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ಮೊದಲ ಐದು ಸ್ಥಾನಗಳಲ್ಲಿವೆ.
ದೇಶದ ಹತ್ತು ಅಗ್ರ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್‌ಗಳಲ್ಲಿ ಐಐಎಂ ಅಹಮದಾಬಾದ್, ಐಐಎಂ ಬೆಂಗಳೂರು, ಐಐಎಂ ಕೋಯಿಕ್ಕೋಡ್, ಐಐಎಂ ಕ್ಯಾಲಿಕಟ್, ಐಐಎಂ ದೆಹಲಿ, ಐಐಎಂ ಲಖನೌ, ಮುಂಬೈನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಎಂಜಿನಿಯರಿಂಘ್, ಐಐಎಂ ಇಂದೋರ್, ಕ್ಸೇವಿಯರ್ ಲೇಬರ್ ರಿಲೇಷನ್ಸ್ ಇನ್‌ಸ್ಟಿಟ್ಯೂಟ್ ಮತ್ತು ಐಐಟಿ ಬಾಂಬೆ ಸ್ಥಾನ ಪಡೆದಿವೆ.
ದೇಶದ ಹತ್ತು ಅತ್ಯುತ್ತಮ ವಿಶ್ವವಿದ್ಯಾಲಯಗಳು
1. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ಬೆಂಗಳೂರು 2. ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ ನವದೆಹಲಿ 3. ಜಾಮಿಯಾ ಮಿಲಿಯಾ ಇಸ್ಲಾಮಿಯಾ ನವದೆಹಲಿ 4. ಜಾಧವಪುರ ವಿಶ್ವವಿದ್ಯಾಲಯ ಕೋಲ್ಕತ್ತ 5. ಬನಾರಸ್ ಹಿಂದೂ ವಿಶ್ವವಿದ್ಯಾಲಯ ವಾರಾಣಸಿ 6. ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಮಣಿಪಾಲ 7. ಅಮೃತ ವಿಶ್ವವಿದ್ಯಾಪೀಠಂ ಕೊಯಮತ್ತೂರು 8. ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವೆಲ್ಲೂರು 9. ಅಲೀಗಡ ಮುಸ್ಲಿಂ ವಿಶ್ವವಿದ್ಯಾಲಯ ಅಲೀಗಡ 10. ಹೈದರಾಬಾದ್ ವಿಶ್ವವಿದ್ಯಾಲಯ ಹೈದರಾಬಾದ್
ದೇಶದ ಹತ್ತು ಅತ್ಯುತ್ತಮ ಎಂಜಿನಿಯರಿಂಗ್ ಶಿಕ್ಷಣ ಸಂಸ್ಥೆಗಳು
1. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮದ್ರಾಸ್ 2. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ದೆಹಲಿ 3.ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬಾಂಬೆ 4. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾನ್ಪುರ 5.ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ರೂರ್ಕಿ 6. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಖರಗಪುರ 7.ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಗುವಾಹಟಿ 8. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹೈದರಾಬಾದ್ 9. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ತಿರುಚಿರಾಪಳ್ಳಿ 10. ಜಾಧವ್‌ಪುರ ವಿಶ್ವವಿದ್ಯಾಲಯ ಕೋಲ್ಕತ್ತ