ತಿರುವನಂತಪುರ: ಸ್ಥಳೀಯಾಡಳಿತ ಸಂಸ್ಥೆಗಳ ನೆರವಿನೊಂದಿಗೆ ರಾಜ್ಯದಲ್ಲಿ 1000 ಆಯುಷ್ ಯೋಗ ಕ್ಲಬ್‍ಗಳನ್ನು ಆರಂಭಿಸಲಾಗುವುದು ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ.
ಅಂತಾರಾಷ್ಟ್ರೀಯ ಯೋಗ ದಿನವಾದ ಜೂನ್ 21 ರಂದು ಆರೋಗ್ಯ ಇಲಾಖೆ ಮತ್ತು ರಾಷ್ಟ್ರೀಯ ಆಯುಷ್ ವಿÀ್ಷನ್ ಸಹಯೋಗದಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಆಯುಷ್ ಯೋಗ ಕ್ಲಬ್‍ಗಳನ್ನು ಪ್ರಾರಂಭಿಸಲಾಗುವುದು.
ಸ್ಥಳೀಯಾಡಳಿತ ಸಂಸ್ಥೆಗಳ ವ್ಯಾಪ್ತಿಯ ಒಂದು ವಾರ್ಡ್‍ನಲ್ಲಿ ಕನಿಷ್ಠ 20 ಜನರಿಗೆ ಒಂದೇ ಬಾರಿಗೆ ಯೋಗಾಭ್ಯಾಸಕ್ಕಾಗಿ ಸ್ಥಳವನ್ನು ಒದಗಿಸಲಾಗುವುದು ಮತ್ತು ಅಲ್ಲಿ ಆಯುಷ್ ಯೋಗ ಕ್ಲಬ್‍ಗಳನ್ನು ಪ್ರಾರಂಭಿಸಲಾಗುವುದು. ಮೊದಲ ಹಂತದಲ್ಲಿ ಪ್ರಾರಂಭವಾಗುವ ಯೋಗ ತರಗತಿಗಳ ಮುಂದುವರಿಕೆಯಲ್ಲಿ ಗರಿಷ್ಠ ವಾರ್ಡ್‍ಗಳಲ್ಲಿ ಆಯುμï ಯೋಗ ಕ್ಲಬ್‍ಗಳನ್ನು ಪ್ರಾರಂಭಿಸಲು ಸ್ಥಳೀಯಾಡಳಿತ ಸಂಸ್ಥೆಗಳ ನೆರವಿನೊಂದಿಗೆ ಕ್ರಮಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.
ಜೀವನಶೈಲಿಯಲ್ಲಿನ ಬದಲಾವಣೆಯಿಂದ ಹೆಚ್ಚುತ್ತಿರುವ ಮಧುಮೇಹ, ರಕ್ತದೊತ್ತಡ, ಪಾಶ್ರ್ವವಾಯು ಮುಂತಾದ ಜೀವನಶೈಲಿ ರೋಗಗಳ ಬಗ್ಗೆ ನಿಖರವಾದ ಅರಿವು ನೀಡಲು ಮತ್ತು ಅವುಗಳನ್ನು ತಡೆಗಟ್ಟಲು ಯೋಗಾಭ್ಯಾಸದ ಜೊತೆಗೆ ಜೀವನಶೈಲಿಯನ್ನು ಹರಡಲು ಆಯುಷ್ ಯೋಗ ಕ್ಲಬ್‍ಗಳು ಸಾಕಷ್ಟು ಸಹಾಯ ಮಾಡುತ್ತವೆ. ವಿವಿಧ ಎನ್‍ಜಿಒಗಳು, ಯೋಗ ಸಂಘಗಳು ಮತ್ತು ಕ್ರೀಡಾ ಮಂಡಳಿಯ ಸಹಕಾರವನ್ನು ಖಾತ್ರಿಪಡಿಸಲಾಗುವುದು.
ಸ್ಥಳೀಯಾಡಳಿತ ಸಂಸ್ಥೆಗಳ ನೆರವಿನೊಂದಿಗೆ ಗ್ರಾಮೀಣ ಮತ್ತು ನಗರ ಎಂಬ ಬೇಧವಿಲ್ಲದೆ ಎಲ್ಲೆಡೆ ಯೋಗದ ಸಂದೇಶವನ್ನು ಹರಡುವ ಗುರಿ ಹೊಂದಲಾಗಿದೆ. ಯೋಗವನ್ನು ಜೀವನಶೈಲಿಯ ಭಾಗವಾಗಿಸಲು ಆಯುμï ಇಲಾಖೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದೆ. ಆಯುμï ಇಲಾಖೆಯಡಿ 593 ಸಂಸ್ಥೆಗಳಲ್ಲಿ ಯೋಗ ತರಬೇತುದಾರರನ್ನು ನೇಮಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು myawyeezhmarahauya@zhamashaha.ree ನಲ್ಲಿ ಸಂಪರ್ಕಿಸಿ.