ಬದಿಯಡ್ಕ: ನವಜೀವನ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಕವಿ ಕೈಯಾರ ಕಿಞ್ಞಣ್ಣ ರೈಗಳ 108ನೇ ಜನ್ಮ ದಿನಾಚರಣೆ ಪ್ರಯುಕ್ತ ಭಾವಚಿತ್ರಕ್ಕೆ ಪುμÁ್ಪರ್ಚನೆ, ಸಭಾ ಕಾರ್ಯಕ್ರಮ ಮತ್ತು ಕವಿತಾ ವಾಚನ ನಡೆಯಿತು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಅಧ್ಯಾಪಕ ಉಣ್ಣಿಕೃಷ್ಣನ್ ವಹಿಸಿದ್ದರು.. ಅವರು ಈ ಸಂದರ್ಭ ಮಾತನಾಡಿ, ಇಂತಹ ಮಹಾನ್ ಕವಿ ಅಧ್ಯಾಪಕರಾಗಿದ್ದ ಶಾಲೆಯಲ್ಲಿ ನಾನು ಅಧ್ಯಾಪಕನಾಗಿ ಸೇವೆ ಸಲ್ಲಿಸುವುದು, ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಅವಕಾಶ ಲಭಿಸಿದ್ದು ಭಾಗ್ಯ ಎಂದ ಅಭಿಪ್ರಾಯಪಟ್ಟರು.
ಶಿಕ್ಷÀಕ ನಿರಂಜನ ರೈ ಪೆರಡಾಲ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಶಿಕ್ಷಕಿ ಜ್ಯೋತ್ಸ್ನಾ ಟೀಚರ್ ಮತ್ತು ವಿದ್ಯಾರ್ಥಿಗಳು ಕವಿಗಳ ಕವಿತೆಯನ್ನು ವಾಚಿಸಿದರು. ಹಿರಿಯ ಅಧ್ಯಾಪಕಿ ಪ್ರಭಾವತಿ ಕೆದಿಲಾಯ ಕಾರ್ಯಕ್ರಮ ನಿರ್ವಹಿಸಿದರು. ರಾಜೇಶ್ ಮಾಸ್ತರ್ ಅಗಲ್ಪಾಡಿ ವಂದಿಸಿದರು.